Asianet Suvarna News Asianet Suvarna News

ಪಾಕ್‌ನಿಂದ ಕಾಂಗ್ರೆಸಿಗೆ ಎಲೆಕ್ಷನ್‌ಗೆ ಹಣ ಬಂದಿರಬೇಕು: ಸಚಿವ ಜೋಶಿ ಕಿಡಿ

ಎರಡು ಅವಧಿಯ ಮೋದಿ ನೇತೃತ್ವದ ಸರ್ಕಾರದ ನಿಯತ್ತನ್ನು ನೋಡಿ ಈ ಬಾರಿ ಆಶೀರ್ವಾದ ಮಾಡುತ್ತಾರೆ. ಈ ಬಾರಿ ಬಹುದೊಡ್ಡ ಗೆಲುವಿನೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸರ್ಕಾರದ ನಿಯತ್ತನ್ನು ಜನರು ನೋಡಿದ್ದಾರೆ. ಅವರೇ ಈ ಚುನಾವಣೆ ಮೂಲಕ ಉತ್ತರ ಕೊಡುತ್ತಾರೆ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ 

Union Minister Pralhad Joshi slams Congress grg
Author
First Published Mar 18, 2024, 12:00 AM IST

ಹುಬ್ಬಳ್ಳಿ(ಮಾ.18): ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ದುಡ್ಡು ಕಾಂಗ್ರೆಸ್‌ಗೆ ಬಂದಿರಬೇಕು. ಅದು ಬಿಜೆಪಿಗೆ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ಆರೋಪದ ವಿರುದ್ಧ ಕಿಡಿ ಕಾರಿದರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಾಕಿಸ್ತಾನದಿಂದ ಬಿಜೆಪಿಗೆ ಹಣ ಬಂದಿದೆ ಎಂಬ ಆರೋಪಕ್ಕೆ ಕಿಡಿಕಿಡಿಯಾದರು. ಕಾಂಗ್ರೆಸಿಗೆ ಹಣ ಬಂದಿದೆ. ಬಿಜೆಪಿಗೆ ಇಂತಹ ಹಣದ ಅವಶ್ಯಕತೆ ಇಲ್ಲ ಎಂದರು.

ಧಾರವಾಡದಲ್ಲಿ ಯಾರಿಗೆ ಗೆಲುವಿನ ‘ಪೇಡಾ’? ಕೇಂದ್ರ ಸಚಿವ ಜೋಶಿ ವಿರುದ್ಧ ಯಾರಾಗ್ತಾರೆ ಕಾಂಗ್ರೆಸ್ ಕಲಿ?

ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿದೆ. ಕ್ಯಾಲೆಂಡರ್ ಆಫ್ ದಿ‌ ಇವೆಂಟ್ ಕೂಡ ಬಂದಿದೆ. ಈ ನಿಟ್ಟಿನಲ್ಲಿ ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು. ಎರಡು ಅವಧಿಯ ಮೋದಿ ನೇತೃತ್ವದ ಸರ್ಕಾರದ ನಿಯತ್ತನ್ನು ನೋಡಿ ಈ ಬಾರಿ ಆಶೀರ್ವಾದ ಮಾಡುತ್ತಾರೆ. ಈ ಬಾರಿ ಬಹುದೊಡ್ಡ ಗೆಲುವಿನೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಸರ್ಕಾರದ ನಿಯತ್ತನ್ನು ಜನರು ನೋಡಿದ್ದಾರೆ. ಅವರೇ ಈ ಚುನಾವಣೆ ಮೂಲಕ ಉತ್ತರ ಕೊಡುತ್ತಾರೆ ಎಂದು ಅವರು ಹೇಳಿದರು.

ಮೋದಿ ಅವರ ವಿರುದ್ಧ ಸುಳ್ಳು ಸುಳ್ಳು ಮಾತನಾಡಿ ಆರೋಪ ಮಾಡಿದ್ದವರಿಗೆ ಈ ಬಾರಿ ಚುನಾವಣೆ ತಕ್ಕ ಉತ್ತರ ಕೊಡಲಿದೆ ಎಂದರು.

Follow Us:
Download App:
  • android
  • ios