ನಾಗಮಂಗಲ ಘಟನೆಯಲ್ಲಿ 10-15 ಜನ ಮೃತಪಡಬೇಕಿತ್ತೇ?: ಸಚಿವ ಪರಮೇಶ್ವರ್‌ಗೆ ಜೋಶಿ ಪ್ರಶ್ನೆ

ನಾಗಮಂಗಲದಲ್ಲಿ ನಡೆದ ಘಟನೆ ಪೂರ್ವನಿಯೋಜಿತ ಕೃತ್ಯ. ಇದನ್ನು ಕೋಮುಗಲಭೆ ಎಂಬಂತೆ ಬಿಂಬಿಸಬಾರದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಹಾಗಾದರೆ ಈ ಘಟನೆಯಲ್ಲಿ 10-15 ಜನ ಮೃತಪಟ್ಟಿದ್ದರೆ ಮಾತ್ರ ದೊಡ್ಡ ಘಟನೆಯಾಗುತ್ತಿತ್ತೆ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು. 

Union Minister Pralhad Joshi React On Nagamagangala Stone Pelting Case gvd

ಹುಬ್ಬಳ್ಳಿ (ಸೆ.13): ನಾಗಮಂಗಲದಲ್ಲಿ ನಡೆದ ಘಟನೆ ಪೂರ್ವನಿಯೋಜಿತ ಕೃತ್ಯ. ಇದನ್ನು ಕೋಮುಗಲಭೆ ಎಂಬಂತೆ ಬಿಂಬಿಸಬಾರದು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಹಾಗಾದರೆ ಈ ಘಟನೆಯಲ್ಲಿ 10-15 ಜನ ಮೃತಪಟ್ಟಿದ್ದರೆ ಮಾತ್ರ ದೊಡ್ಡ ಘಟನೆಯಾಗುತ್ತಿತ್ತೆ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪೂರ್ವನಿಯೋಜಿತವಾಗಿ ಕೆಲವರು ಕಲ್ಲು, ಮಚ್ಚು, ಲಾಂಗಿನಿಂದ ಹಲ್ಲೆ ನಡೆಸಿದ್ದು, ಪೆಟ್ರೋಲ್ ಬಾಂಬ್‌ ಎಸೆದಿದ್ದಾರೆ. 

ಕಳೆದ ವರ್ಷವೂ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು ಎಂಬ ಮಾಹಿತಿ ಸರ್ಕಾರಕ್ಕೆ ಗೊತ್ತಿದ್ದರೂ ಸಹ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಕಂಡುಬರುತ್ತಿದೆ. ಇದರಲ್ಲಿ ಯಾರೇ ತಪ್ಪು ಮಾಡಿದರೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಠಾಣೆಗೆ ಬೆಂಕಿ ಹಚ್ಚಲು ಬಂದವರನ್ನು ಬಂಧಿಸಲಾಗಿತ್ತು. ಅವರಿಗೆ 2 ವರ್ಷ ಜಾಮೀನು ಸಿಗಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರಿಗೆ ಜಾಮೀನು ಸಿಕ್ಕಿತು. ಮಂಗಳೂರಿನಲ್ಲಿ ಕುಕ್ಕರ್ ಬಾಂಬ್‌ ಸ್ಫೋಟವಾದಾಗ ಅವರನ್ನು ಇದೇ ಕಾಂಗ್ರೆಸ್ಸಿನವರು ಬ್ರದರ್ ಎಂದು ಕರೆದರು. 

ವೋಟ್ ಬ್ಯಾಂಕ್ ರಾಜಕಾರಣದಿಂದ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಲ್ಲ ಮುಸ್ಲಿಮರು ಮತಾಂಧರಲ್ಲ. ಆದರೆ, ಇಂತಹ ಭಯೋತ್ಪಾದನೆ ಕೃತ್ಯಗಳಲ್ಲಿ ಬಂಧಿತರಾದವರೆಲ್ಲರೂ ಆ ಸಮುದಾಯಕ್ಕೆ ಸೇರಿದ್ದಾರೆ. ಈ ಸರ್ಕಾರದಲ್ಲಿ ತಮಗೆ ರಕ್ಷಣೆ ಸಿಗುತ್ತದೆ ಎಂದು ಮತಾಂಧರು ಭಾಗವಹಿಸಿದ್ದಾರೆ ಎಂದರು. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದವರನ್ನೂ ಬಂಧಿಸಿ, ಸರ್ಕಾರ ಬ್ಯಾಲೆನ್ಸ್ ಮಾಡಲು ಮುಂದಾಗಿದೆ. ಈ ರೀತಿಯ ಜಾತ್ಯತೀತೆಯಿಂದ ದೇಶ ಹಾಳಾಗಿದೆ ಎಂದು ಆರೋಪಿಸಿದರು.ಭಾರತವನ್ನು ದ್ವೇಷಿಸುವ ಓಮರ್‌ ಎಂಬಾತನನ್ನು ಅಮೆರಿಕದಲ್ಲಿ ರಾಹುಲ್‌ ಗಾಂಧಿ ಭೇಟಿ ಮಾಡಿದ್ದಾರೆ. 

ಇನ್ಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ 5 ರೂಪಾಯಿಗೆ ಊಟ: ಇದು ರಾಷ್ಟ್ರಕ್ಕೆ ಮಾದರಿ ಎಂದ ಸಚಿವ ಲಾಡ್

ಇಮ್ರಾನ್‌ ಖಾನ್ ಅವರನ್ನು ಭೇಟಿ ಮಾಡಿ ಭಾರತವನ್ನು ಹೇಗೆ ಸದೆಬಡಿಯಬೇಕು ಎಂದು ಹೇಳಿಕೊಡುತ್ತಾರೆ. ರಾಹುಲ್ ಗಾಂಧಿ ಪ್ರತ್ಯೇಕತಾ ಖಾಲಿಸ್ತಾನಕ್ಕೆ ಬೆಂಬಲ ಕೊಟ್ಟಿದ್ದಾರೆ ಎಂದು ಖಾಲಿಸ್ತಾನ ಪರ ಹೋರಾಟದ ನಾಯಕ ಗುರುಪತ್ವಂತ್‌ ಸಿಂಗ್‌ ಪನ್ನು ಹೇಳಿಕೆ ನೀಡಿದ್ದಾನೆ. ವೋಟ್ ಬ್ಯಾಂಕ್‌ಗಾಗಿ ದೇಶವನ್ನು ಒಡೆಯಲು ನಿಂತಾಗ ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ಸಿಗುತ್ತದೆ ಎಂದರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ನಮ್ಮ ಪಕ್ಷದ ಪ್ರಮುಖರೊಂದಿಗೆ ಮಾತನಾಡಿರಬೇಕು. ಹಾಗಾಗಿಯೇ ಮರಳುವ ಕುರಿತು ಮಾತನಾಡುತ್ತಿದ್ದಾರೆ. ಬಿಟ್ಟು ಹೋದವರು ವಾಪಸ್ ಪಕ್ಷಕ್ಕೆ ಬರುವ ಪ್ರಕ್ರಿಯೆ ಸದಾ ನಡೆಯುತ್ತಿರುತ್ತದೆ ಎಂದರು.

Latest Videos
Follow Us:
Download App:
  • android
  • ios