Asianet Suvarna News Asianet Suvarna News

ಕಾಂಗ್ರೆಸ್ಸಿಗರು ಸನಾತನ ಧರ್ಮ ವಿರೋಧಿಗಳು: ಕೇಂದ್ರ ಸಚಿವ ಕ್ರಿಶನ್ ಪಾಲ್

ಕಾಂಗ್ರೆಸ್ಸಿಗರು ಸನಾತನ ಧರ್ಮವಿರೋಧಿಗಳು. ಧರ್ಮವನ್ನು ವಿರೋಧ ಮಾಡುವ ಮೂಲಕ ಕಾಂಗ್ರೆಸ್ ತನ್ನಿಂತಾನೇ ಪತನವಾಗುತ್ತಿದೆ. ಅವರ ವಿನಾಶವನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಟೀಕಿಸಿದರು. 

Union Minister Krishan Pal Gurjar Slams On Karnataka Congress Govt gvd
Author
First Published Jan 11, 2024, 11:03 PM IST

ಮಂಡ್ಯ (ಜ.11): ಕಾಂಗ್ರೆಸ್ಸಿಗರು ಸನಾತನ ಧರ್ಮವಿರೋಧಿಗಳು. ಧರ್ಮವನ್ನು ವಿರೋಧ ಮಾಡುವ ಮೂಲಕ ಕಾಂಗ್ರೆಸ್ ತನ್ನಿಂತಾನೇ ಪತನವಾಗುತ್ತಿದೆ. ಅವರ ವಿನಾಶವನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ಸಚಿವ ಕ್ರಿಶನ್ ಪಾಲ್ ಗುರ್ಜರ್ ಟೀಕಿಸಿದರು. ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ವರಿಷ್ಠರನ್ನು ಶ್ರೀರಾಮಮಂದಿರ ಟ್ರಸ್ಟ್‌ನವರು ಆಹ್ವಾನಿಸಿದ್ದಾರೆ. ಬಿಜೆಪಿಯವರು ಆಹ್ವಾನಿಸಿಲ್ಲವೆಂಬ ಕಾರಣಕ್ಕೆ ಕಾಂಗ್ರೆಸ್ ವರಿಷ್ಠರು ಆಹ್ವಾನವನ್ನು ತಿರಸ್ಕರಿಸಿದ್ದಾರೆ. ಇದು ದುರ್ದೈವ. ರಾಮಮಂದಿರ ಉದ್ಘಾಟನೆ ಬಿಜೆಪಿ ಕಾರ್ಯಕ್ರಮವಲ್ಲ. ಅದು ಸಾಧು-ಸಂತರ ಕಾರ್ಯಕ್ರಮ. ಇದು ನಮ್ಮ ಮನೆಯ ಕಾರ್ಯಕ್ರಮವಲ್ಲ. ಇಡೀ ದೇಶದ ಹಿಂದೂಗಳ ಕಾರ್ಯಕ್ರಮ. 

ಕಾಂಗ್ರೆಸ್ ನಾಯಕರನ್ನು ಬಿಜೆಪಿ ನಾಯಕರು ಆಹ್ವಾನಿಸುವ ಅಗತ್ಯವಿಲ್ಲ ಎಂದು ನೇರವಾಗಿ ಹೇಳಿದರು. ರಾಮರಾಜ್ಯ ನಿರ್ಮಾಣ ರಾಮನ ಕನಸು. ಅದನ್ನು ನಾವೆಲ್ಲರೂ ನನಸು ಮಾಡಬೇಕಿದೆ. ಆದರೆ, ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ಧರಾಮಯ್ಯ ಇಂಥವರು ಸೇರಿ ಒಂದು ಒಳ್ಳೆಯ ಕೆಲಸಕ್ಕೆ ಕಲ್ಲು ಹಾಕಲು ಯೋಜಿಸುತ್ತಿದ್ದಾರೆ. ಇದಕ್ಕೆ ಮುಂದೆ ಅವರೇ ಪಶ್ಚಾತಾಪ ಪಡುತ್ತಾರೆ ಎಂದು ಎಚ್ಚರಿಕೆ ನೀಡಿದರು. ಹಿಂದೂಗಳನ್ನು ನಿರ್ಲಕ್ಷಿಸಿ ಒಂದು ಜನಾಂಗದ ಪರ ನಿಂತಿದ್ದರಿಂದಲೇ ಇತ್ತೀಚೆಗೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸೀಟ್ ಕೂಡ ಗೆಲ್ಲಲು ಆಗಿಲ್ಲ ಎಂದು ಛೇಡಿಸಿದರು.

Chikkamagaluru: ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧಾರ: ರೈತ ಮುಖಂಡ ಕೃಷ್ಣೆಗೌಡ

2047ಕ್ಕೆ ಭಾರತ ಬಡತನ ಮುಕ್ತವಾಗಲಿದೆ: 2047ರ ವೇಳೆಗೆ ಭಾರತವನ್ನು ಬಡತನ ಮುಕ್ತ ಮಾಡಲು ಉದ್ದೇಶಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕಾ ರಾಜ್ಯ ಖಾತೆ ಸಚಿವ ಕ್ರಿಶನ್ ಪಾಲ್ ಗುರ್ಜರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು ಮತ್ತು ರೈತರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ ಎಂದರು.

ಪ್ರಧಾನಿ ಮೋದಿ ಗ್ಯಾರಂಟಿಯಿಂದ ಜನರಿಗೆ ಅನುಕೂಲ: ಕೇಂದ್ರ ಸಚಿವ ಕ್ರಿಶನ್ ಪಾಲ್

ಮಂದಿರ ಉದ್ಘಾಟನೆಯ ದಿನಾಂಕ ಎಲ್ಲರಿಗೂ ಗೊತ್ತಾಗಿದೆ: ನಾವು ಮಂದಿರ್ ವಹೀ ಬನಾಯೇಂಗೆ( ಮಂದಿರವನ್ನು ಅಲ್ಲೇ ಕಟ್ಟುತ್ತೇವೆ) ಎಂದು ಹೇಳುತ್ತಿದ್ದೆವು. ಅವರು ತಾರೀಕ್ ನಹೀ ಬತಾಯೇಂಗೆ ( ದಿನಾಂಕವನ್ನು ಹೇಳುತ್ತಿಲ್ಲ) ಎಂದು ಹಂಗಿಸುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕೊಟ್ಟ ಮಾತಿನಂತೆ ರಾಮಮಂದಿರ ನಿರ್ಮಾಣದ ಗ್ಯಾರಂಟಿಯನ್ನು ಈಡೇರಿಸಿದ್ದಾರೆ ಎಂದು ಕೇಂದ್ರ ಇಂಧನ ಮತ್ತು ಬಹತ್ ಕೈಗಾರಿಕೆ ಖಾತೆ ರಾಜ್ಯ ಸಚಿವ ಕೃಷ್ಣಪಾಲ್ ಗುರ್ಜರ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂದಿರ ಯಾವಾಗ ಉದ್ಘಾಟನೆ ಆಗುತ್ತದೆ ಎಂಬ ಸಂಗತಿ ಇಡೀ ಜಗತ್ತಿಗೆ ಗೊತ್ತಿದೆ. ಮೋದಿ ಅವರು ಎಲ್ಲಾ ಗ್ಯಾರಂಟಿಯನ್ನು ಪೂರ್ಣಗೊಳಿಸಿದ್ದಾರೆ. ಮೋದಿ ಅವರು ಏನೇ ಗ್ಯಾರಂಟಿ ಕೊಟ್ಟರೂ ಪೂರ್ಣಗೊಳಿಸುತ್ತಾರೆ ಎಂಬುದಕ್ಕೆ ರಾಮಮಂದಿರ ನಿರ್ಮಾಣವಾಗುತ್ತಿರುವುದು ಸಾಕ್ಷಿ ಎಂದರು.

Follow Us:
Download App:
  • android
  • ios