ನವದೆಹಲಿ, (ಮಾ.08): ಯಾರೊಬ್ಬರೂ ಸಿದ್ದರಾಮಯ್ಯನವರಷ್ಟು ಬಜೆಟ್ ಮಂಡಿಸಿಲ್ಲ. ಅವರಿಗೆ ತನಗಿಂತ ಸಿಎಂ ಬಿ.ಎಸ್.ಯಡಿಯೂರಪ್ಪ ಚೆನ್ನಾಗಿ ಬಜೆಟ್ ಮಂಡಿಸುತ್ತಾರೆನ್ನುವ ಭಯವಿತ್ತು. ಹಾಗಾಗಿ, ಬಜೆಟ್ ಮಂಡನೆಗೆ ಮುನ್ನ ಸಭಾತ್ಯಾಗ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಬಜೆಟ್ ಮಂಡನೆಗೂ ಮುನ್ನವೇ ಸಿದ್ದರಾಮಯ್ಯ ಅವರು ಸಭಾತ್ಯಾಗಮಾಡಿದ್ರು. ಬಳಿಕ ಅವರನ್ನ ಮನವೊಲಿಸಿ ಕರೆತರಲಾಯ್ತು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸದಾನಂದಗೌಡ, ತನಗಿಂತ ಸಿಎಂ ಬಿ.ಎಸ್.ಯಡಿಯೂರಪ್ಪ ಚೆನ್ನಾಗಿ ಬಜೆಟ್ ಮಂಡಿಸುತ್ತಾರೆನ್ನುವ ಭಯದಿಂದ ಕಾಂಗ್ರೆಸ್​ ಸದಸ್ಯರ ಜೊತೆ ಸಿದ್ದರಾಮಯ್ಯ ಸಭಾತ್ಯಾಗಮಾಡಿದ್ರು ಎಂದರು.

ಹೀಗೆ ಮಾಡದಿದ್ರೆ ನನ್ನ ಯಡಿಯೂರಪ್ಪ ಅಂತಾ ಕರೆಯಬೇಡಿ: ಸಿದ್ದುಗೆ ಸಿಎಂ ಓಪನ್ ಚಾಲೆಂಜ್

ಇದು ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿಯ ಬಜೆಟ್​. ಕೊರೋನಾ ಗೊಂದಲದಲ್ಲಿ ಇದೊಂದು ವಿಕಾಸ ಪತ್ರ. ಇಂತಹ ಸವಾಲು ಯಾರಿಗೂ ಸಿಕ್ಕಿರಲಿಲ್ಲ ಎಂದು ಸದಾನಂದಗೌಡ ಹೇಳಿದರು.

ಸಮತೋಲನ ಬಜೆಟ್ ಮಂಡಿಸಿ ಎಲ್ಲರನ್ನೂ ತಲುಪಿದ್ದಾರೆ. ವಲಯವಾರು ವಿಂಗಡಣೆ ಅದ್ಭುತವಾತ ಕಾನ್ಸೆಪ್ಟ್ ಆಗಿದೆ. ಆಡಳಿತ ಸುಧಾರಣೆಗೆ ಯಡಿಯೂರಪ್ಪ ಒತ್ತುಕೊಟ್ಟಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.