ಪ್ರಧಾನಿ ಮೋದಿ ಎಂದು ಜಾತಿ, ಧರ್ಮ ನೋಡಿಲ್ಲ: ಭಗವಂತ ಖೂಬಾ

ಆಯುಷ್ಮಾನ್‌ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ, ಪಿಎಂ ಕಿಸಾನ್ ಯೀಜನೆಯಡಿ ವರ್ಷಕ್ಕೆ 6 ಸಾವಿರ ರುಪಾಯಿ ಪ್ರೋತ್ಸಾಹ ಧನ, ಮುಂತಾದ ಲಾಭಗಳು ಯಾವುದೆ ಜಾತತಿ, ಜನಾಂಗ ನೋಡದೆ ಎಲ್ಲರಿಗೂ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

Union Minister Bhagwanth Khuba Talks Over PM Narendra Modi At Kalaburagi gvd

ಆಳಂದ (ಡಿ.15): ಕೇಂದ್ರ ಸರ್ಕಾರದ ಯೋಜನೆಗಳು ಜನ ಸಾಮಾನ್ಯರಿಗೆ ವರವಾಗಿವೆ. 3.55 ಲಕ್ಷ ಜನರಿಗೆ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್, ಎಲ್ಲಾ ಬಡವರಿಗೆ ಉಚಿತವಾಗಿ 5ಕೆ.ಜಿ. ಅಕ್ಕಿ, 5 ಲಕ್ಷದವರೆಗೆ ಆಯುಷ್ಮಾನ್‌ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ, ಪಿಎಂ ಕಿಸಾನ್ ಯೀಜನೆಯಡಿ ವರ್ಷಕ್ಕೆ 6 ಸಾವಿರ ರುಪಾಯಿ ಪ್ರೋತ್ಸಾಹ ಧನ, ಮುಂತಾದ ಲಾಭಗಳು ಯಾವುದೆ ಜಾತತಿ, ಜನಾಂಗ ನೋಡದೆ ಎಲ್ಲರಿಗೂ ನೀಡುತ್ತಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರಾ ಅಭಿಯಾನದ ನಿಮಿತ್ತ ತಾಲೂಕು ವ್ಯಾಪ್ತಿಯ ಬೀದರ್‌ ಲೋಕಸಭಾ ವ್ಯಾಪ್ತಿಯ ಬೇಮಳಖೇಡಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಓಲೆ ವಿತರಿಸಿ ಅವರು ಮಾತನಾಡಿದರು. ದೇಶದ ಜನರ ಬಾಳಿಗೆ ಹೊಸ ಬೆಳಕು ನೀಡಿದ ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಪ್ರತಿಯೊಬ್ಬರಿಗೂ ವಿವಿಧ ಯೋಜನೆಗಳಡಿ ಲಾಭಗಳು ನೀಡಲಾಗಿದೆ ಎಂದು ಹೇಳಿದರು. ಹತ್ತು ವರ್ಷಗಳಲ್ಲಿ ಏನು ಅಭಿವೃದ್ಧಿ ಮಾಡಿದ್ದೇವೆ ಎಂದು ತಿಳಿಸಿ, ಲೆಕ್ಕ ಕೊಡಲು ಈ ವಿಕಸಿತ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೋದಿಯವರು ಎಂದು ಜಾತಿ, ಧರ್ಮ ನೋಡಿಲ್ಲ. 

ನನಗೆ ಈಶ್ವರಪ್ಪ ಭೇಟಿ ಆಗುವ ಅವಶ್ಯಕತೆ ಇಲ್ಲ: ಜಗದೀಶ್‌ ಶೆಟ್ಟರ್‌

ಬಡವರ ಉದ್ಧಾರವೆ ನನ್ನ ಮುಖ್ಯ ಗುರಿ ಎಂದು ತಿಳಿದು ಹಲವಾರು ಯೋಜನೆಗಳು ಜಾರಿಗೆ ತಂದು, ಅದರ ಪ್ರಯೋಜನ ತಮಗೆ ಮುಟ್ಟಿಸಿದ್ದಾರೆ ಎಂದು ವಿವರಿಸಿದರು. ನಮ್ಮ ಅರ್ಥ ವ್ಯವಸ್ಥೆ 5 ಟ್ರಿಲಿಯನ್ ಡಾಲರ್ ಮುಟ್ಟುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ 4 ಸಾವಿರ, ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಬಂದ್‌ ಮಾಡಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಮಾಡುತ್ತಿಲ್ಲಾ. ಕೇವಲ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂತಹ ಸರ್ಕಾರ ತುಂಬಾ ದಿನ ನಡೆಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಧಾನ ಹೊರಹಾಕಿದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮೋದಿಯವರು ಈ ದೇಶದ ಅಭಿವೃದ್ದಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಭಗವಂತ ಖೂಬಾ ಅವರ ಶ್ರಮದ ಫಲವಾಗಿ ಇಂದು ನಾವು ಹತ್ತಾರು ರೈಲು, ಹೆದ್ದಾರಿಗಳು ನೋಡುತ್ತಿದ್ದೇವೆ ಎಂದರು. ಇದೆ ಸಂದರ್ಭದಲ್ಲಿ 150 ಜನರಿಗೆ ಉಚಿತ ಗ್ಯಾಸ್‌, 325 ಜನರಿಗೆ ಆಯುಷ್ಮಾನ್‌ ಕಾರ್ಡ್‌ ವಿತರಣೆ, ಸರಸ್ವತಿ ಎಂಬುವವರ ಗಂಡ ನಿಧನರಾದ ಹಿನ್ನೆಲೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 2 ಲಕ್ಷದ ಚೆಕ್ ಹಸ್ತಾಂತರಿಸಲಾಯಿತು. ಇದರ ಜೊತೆಗೆ ಎಸ್.ಬಿ.ಐ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸಾಲದ ಚೆಕ್ ವಿತರಿಸಲಾಯಿತು.

ಸಂಸತ್ ಭವನದಲ್ಲಿನ ಭಯೋತ್ಪಾದಕ ರೀತಿಯ ಕೃತ್ಯ ಆಘಾತಕಾರಿ: ಪ್ರಮೋದ್‌ ಮುತಾಲಿಕ್

ಗ್ರಾಪಂ ಅಧ್ಯಕ್ಷ ಮಂಜುನಾಥ ಸುಣಗಾರ, ಬಸವರಾಜ ಚಟ್ನಳ್ಳಿ, ಸೂರ್ಯಕಾಂತ ಬೀರನಳ್ಳಿ, ರೇವಪ್ಪ ಮುದ್ದಾ, ಪಕ್ಷದ ಮುಖಂಡರಾದ ಜಗನ್ನಾಥ ಬೂರಿ, ಸುರೇಶ ಮಾಶೇಟ್ಟಿ, ಘಾಳೇಪ್ಪ ಚಟ್ನಳ್ಳಿ, ಬಸವರಾಜ ಯದಲಾಪೂರ, ಪ್ರಶಾಂತ ಸಿಂದೋಲ್, ಬ್ಯಾಂಕ್ ಮುಖ್ಯಸ್ಥರಾದ ಸಂಜಿವಕುಮಾರ, ರಾಮರಾವ, ಸಾತ್ವಿಕ್, ಇತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios