ಅಮಿತ್ ಶಾ ಬೆಳಿಗ್ಗೆ 10.30ಕ್ಕೆ ಬೀದರ್‌ನಲ್ಲಿ ಗುರುದ್ವಾರ ನಾನಕ್ ಝೀರಾ ಸಾಹೀಬ್‌ಗೆ ಭೇಟಿ ನೀಡಿ ದರ್ಶನ ಪಡೆಯುವರು. ನಂತರ 11.05ಕ್ಕೆ ಮಂಗಲ್‌ಪೇಟೆ ಮಲ್ಕಾಪುರ ರಸ್ತೆಯ ನರಸಿಂಹ ಝರ್ನಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವರು. ಮಧ್ಯಾಹ್ನ 12.20ಕ್ಕೆ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥಯಾತ್ರೆಯನ್ನು ಉದ್ಘಾಟಿಸುವರು. ಬಳಿಕ 1.15ಕ್ಕೆ ಬಸವಕಲ್ಯಾಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.
ಬೆಂಗಳೂರು(ಮಾ.03): ಆಡಳಿತಾರೂಢ ಬಿಜೆಪಿಯ ಇನ್ನೆರಡು ತಂಡಗಳ ವಿಜಯ ಸಂಕಲ್ಪ ಯಾತ್ರೆಗೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಮತ್ತು ಬೆಂಗಳೂರಿನ ಹೊರವಲಯದ ದೇವನಹಳ್ಳಿಯಲ್ಲಿ ಶುಕ್ರವಾರ ಕೇಂದ್ರ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಮೂರನೇ ತಂಡದ ಯಾತ್ರೆಗೆ ಬಸವಕಲ್ಯಾಣದ ಹೊಸ ಅನುಭವ ಮಂಟಪದ ಬಳಿ ಮತ್ತು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ನಾಲ್ಕನೇ ತಂಡದ ಯಾತ್ರೆಗೆ ದೇವನಹಳ್ಳಿ ಬಳಿಯ ನಾಡಪ್ರಭು ಕೆಂಪೇಗೌಡರ ಹುಟ್ಟೂರಾದ ಆವತಿಯಲ್ಲಿ ಹಸಿರು ನಿಶಾನೆ ತೋರಲಿದ್ದಾರೆ.
ಅಮಿತ್ ಶಾ ಅವರು ಬೆಳಿಗ್ಗೆ 10.30ಕ್ಕೆ ಬೀದರ್‌ನಲ್ಲಿ ಗುರುದ್ವಾರ ನಾನಕ್ ಝೀರಾ ಸಾಹೀಬ್‌ಗೆ ಭೇಟಿ ನೀಡಿ ದರ್ಶನ ಪಡೆಯುವರು. ನಂತರ 11.05ಕ್ಕೆ ಮಂಗಲ್‌ಪೇಟೆ ಮಲ್ಕಾಪುರ ರಸ್ತೆಯ ನರಸಿಂಹ ಝರ್ನಾ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವರು. ಮಧ್ಯಾಹ್ನ 12.20ಕ್ಕೆ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ 3ನೇ ರಥಯಾತ್ರೆಯನ್ನು ಉದ್ಘಾಟಿಸುವರು. ಬಳಿಕ 1.15ಕ್ಕೆ ಬಸವಕಲ್ಯಾಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು.
ಸಾರ್ವಜನಿಕ ಸಭೆ ಮುಗಿಸಿದ ಬಳಿಕ ಅಲ್ಲಿಂದ ಬೆಂಗಳೂರಿಗೆ ಆಗಮಿಸುವ ಅವರು ಸಂಜೆ 4.50ಕ್ಕೆ ಆವತಿಯ ಚನ್ನಕೇಶವ ದೇವಸ್ಥಾನಕ್ಕೆ ಭೇಟಿ ಕೊಡಲಿದ್ದಾರೆ. 5.10ಕ್ಕೆ ದೇವನಹಳ್ಳಿಯಲ್ಲಿ ವಿಜಯ ಸಂಕಲ್ಪ 4ನೇ ರಥ ಯಾತ್ರೆಯನ್ನು ಉದ್ಘಾಟಿಸಿ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್.ಡಿ.ಕುಮಾರಸ್ವಾಮಿ
ಗಸ್ತು ವಾಹನಗಳ ಸೇವೆಗೆ ಹಸಿರು ನಿಶಾನೆ:
ಕೇಂದ್ರ ಸರ್ಕಾರದ ನಿರ್ಭಯಾ ನಿಧಿಯಡಿ ನಗರ ಸುರಕ್ಷತಾ ಯೋಜನೆಯಡಿ ಆರಂಭಿಸಿರುವ ನೂತನ ಕಮಾಂಡ್ ಸೆಂಟರ್ ಹಾಗೂ 400ಕ್ಕೂ ಹೆಚ್ಚಿನ ಹೊಸ ಗಸ್ತು ವಾಹನಗಳ ಸೇವೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಸಿರು ನಿಶಾನೆ ತೋರಲಿದ್ದಾರೆ.
ನಾಳೆ ಬೆಂಗಳೂರಿಗೆ ಕೇಂದ್ರ ಸಚಿವ ಅಮಿತ್ ಶಾ ಆಗಮನ: ಅಪ್ಪಿತಪ್ಪಿಯೂ ಈ ರಸ್ತೆಗಳಿಗೆ ಹೋಗಬೇಡಿ
ನಗರ ಪೊಲೀಸ್ ಆಯುಕ್ತರ ಕಚೇರಿಗೆ ಶುಕ್ರವಾರ ಸಂಜೆ 7 ಗಂಟೆಗೆ ಆಗಮಿಸುವ ಕೇಂದ್ರ ಗೃಹ ಸಚಿವರು, ಕಮಾಂಡ್ ಸೆಂಟರ್‌ಗೆ ಚಾಲನೆ ನೀಡಲಿದ್ದಾರೆ. ಬಳಿಕ ಕಮಾಂಡ್ ಸೆಂಟರ್ ಕಾರ್ಯನಿರ್ವಹಣೆ ಬಗ್ಗೆ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರಿಂದ ಸಚಿವರು ಮಾಹಿತಿ ಪಡೆಯಲಿದ್ದಾರೆ. ಬಳಿಕ ಪುರಭವನದ ಮುಂದೆ ಹೊಸ ವಾಹನಗಳ ಓಡಾಟಕ್ಕೆ ಸಚಿವರು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಜೆಪಿ 2ನೇ ರಥ ಯಾತ್ರೆಗೆ ಸಚಿವ ರಾಜನಾಥ ಚಾಲನೆ
ಖಾನಾಪುರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನ್ಮಸ್ಥಳ ನಂದಗಡದಲ್ಲಿ ಬಿಜೆಪಿಯ 2ನೇ ವಿಜಯಸಂಕಲ್ಪ ರಥಯಾತ್ರೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಗುರುವಾರ ಚಾಲನೆ ನೀಡಿದರು. ಇದೇ ವೇಳೆ ಕಿತ್ತೂರಿನಲ್ಲಿ 2 ಕಿ.ಮೀ. ರೋಡ್ ಶೋ ನಡೆಸಿದರು. ಬಿಜೆಪಿ 4 ದಿಕ್ಕಿನಿಂದ 4 ಯಾತ್ರೆ ಆಯೋಜಿಸಿದ್ದು, 2ನೇ ಯಾತ್ರೆ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆಯಲಿದೆ.
