ಕಾಂಗ್ರೆಸ್ಸಿಗರಿಗೇ ಮೌಲ್ಯವಿಲ್ಲ, ಇನ್ನು ಅವರ ಗ್ಯಾರಂಟಿ ಕಾರ್ಡ್‌ಗಿದೆಯೇ?: ಅಮಿತ್ ಶಾ
ಕಾಂಗ್ರೆಸ್ ನಾಯಕರು ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಅವರು ಗ್ಯಾರಂಟಿ ಕಾರ್ಡ್ ಕೊಟ್ಟರೆ ಸಮಸ್ಯೆ ಇಲ್ಲ. ಯಾಕೆಂದರೆ ಮತ್ತೆ ಆ ಪಕ್ಷ ಅಧಿಕಾರಕ್ಕಂತೂ ಬರುವುದಿಲ್ಲ. ಹಾಗಿದ್ದಾಗ ಅವರ ಮಾತುಗಳಿಗೆ, ಅವರು ಕೊಡುವ ಗ್ಯಾರಂಟಿ ಕಾರ್ಡ್‌ಗಳಿಗೆ ಮಹತ್ವವೂ ಇಲ್ಲ, ಮೌಲ್ಯವೂ ಇಲ್ಲ: ಅಮಿತ್ ಶಾ.
ದಾವಣಗೆರೆ/ಹುಬ್ಬಳ್ಳಿ/ಲಕ್ಷ್ಮೇಶ್ವರ/ಹಾವೇರಿ(ಏ.29): ಕಾಂಗ್ರೆಸ್‌ನವರಿಗೇ ಮೌಲ್ಯವಿಲ್ಲ ಎಂದಾಗ ಅವರು ನೀಡುವ ಗ್ಯಾರಂಟಿ ಕಾರ್ಡ್‌ಗಳಿಗಾದರೂ ಏನು ಮೌಲ್ಯವಿದ್ದೀತು? ಅವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ, ತುಷ್ಟೀಕರಣ, ಪರಿವಾರ, ಧಂಗೆಗಳು ಹೆಚ್ಚಾಗುವುದು ನಿಶ್ಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಹಾವೇರಿ ಜಿಲ್ಲೆ ಹಾನಗಲ್ಲ ಕ್ಷೇತ್ರದ ಅಕ್ಕಿಆಲೂರು, ಗದಗದ ಲಕ್ಷ್ಮೇಶ್ವರ, ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಶುಕ್ರವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ವಿರುದ್ಧ ತೀವ್ರ ಹರಿಹಾಯ್ದರು.
ಕಾಂಗ್ರೆಸ್ ನಾಯಕರು ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್ ನೀಡುತ್ತಿದ್ದಾರೆ. ಅವರು ಗ್ಯಾರಂಟಿ ಕಾರ್ಡ್ ಕೊಟ್ಟರೆ ಸಮಸ್ಯೆ ಇಲ್ಲ. ಯಾಕೆಂದರೆ ಮತ್ತೆ ಆ ಪಕ್ಷ ಅಧಿಕಾರಕ್ಕಂತೂ ಬರುವುದಿಲ್ಲ. ಹಾಗಿದ್ದಾಗ ಅವರ ಮಾತುಗಳಿಗೆ, ಅವರು ಕೊಡುವ ಗ್ಯಾರಂಟಿ ಕಾರ್ಡ್‌ಗಳಿಗೆ ಮಹತ್ವವೂ ಇಲ್ಲ, ಮೌಲ್ಯವೂ ಇಲ್ಲ. ಇದು ಗೊತ್ತಿದ್ದೇ ಅವರು ಹೋದಲ್ಲೆಲ್ಲ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ಕಾಂಗ್ರೆಸ್ಸಿಗರಂತೆ ನಾವು ಗ್ಯಾರಂಟಿ ಕಾರ್ಡ್, ಮಾತು ಕೊಡಲು ಸಾಧ್ಯವಿಲ್ಲ. ಯಾಕೆಂದರೆ ನಾವು ಮತ್ತೆ ಅಧಿಕಾರಕ್ಕೆ ಬರುವವರು ಎಂದರು.
ಕಾಂಗ್ರೆಸ್ಸಿಗರು ಮೋದಿಗೆ ಬೈದಷ್ಟೂ ಬಿಜೆಪಿ ಹೆಚ್ಚು ಗೆಲ್ಲುತ್ತೆ: ಅಮಿತ್ ಶಾ
ಲಿಂಗಾಯತ ವಿರೋಧಿ:
ಕಾಂಗ್ರೆಸ್ ಪಕ್ಷ ಲಿಂಗಾಯತ ವಿರೋಧಿಯಾಗಿದೆ, ಈ ಹಿಂದೆ ತಮ್ಮ ಪಕ್ಷದ ಲಿಂಗಾಯತ ಮುಖ್ಯಮಂತ್ರಿಗಳನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಎಂದು ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು, ಬೊಮ್ಮಾಯಿ ಅವರ ಬಗ್ಗೆ ಕೀಳಾಗಿ ಹೇಳಿಕೆ ನೀಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಶಾ ಹೇಳಿದರು.
ಜತೆಗೆ, ಮಹದಾಯಿ ವಿಷಯವಾಗಿ ಸರಿಯಾಗಿ ಸ್ಪಂದಿಸದ, ರೈತರ ಮೇಲೆ ಲಾಠಿಚಾಜ್‌ರ್ ಮಾಡಿಸಿದ, ಗೋಲಿಬಾರ್ ಮಾಡಿಸಿದ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕೋ? ಆ ಸಮಸ್ಯೆ ಬಗೆಹರಿಸಿರುವ ಬಿಜೆಪಿ ಆಡಳಿತಕ್ಕೆ ಬರಬೇಕೋ ಎಂಬುದನ್ನು ಮತದಾರರೇ ತೀರ್ಮಾನಿಸಬೇಕು ಎಂದರು.