ಸಂಸತ್ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸುವುದಕ್ಕೆ ಕಾರಣವಾದ ಮಾನನಷ್ಟ ಮೊಕದ್ದಮೆಯ ತೀರ್ಪಿನ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲ್ಮನವಿಯನ್ನೇ ಸಲ್ಲಿಸಿಲ್ಲ. ಇದೆಂತಹ ದುರಹಂಕಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
ನವದೆಹಲಿ: ಸಂಸತ್ ಸದಸ್ಯತ್ವದಿಂದ ತಮ್ಮನ್ನು ಅನರ್ಹಗೊಳಿಸುವುದಕ್ಕೆ ಕಾರಣವಾದ ಮಾನನಷ್ಟ ಮೊಕದ್ದಮೆಯ ತೀರ್ಪಿನ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲ್ಮನವಿಯನ್ನೇ ಸಲ್ಲಿಸಿಲ್ಲ. ಇದೆಂತಹ ದುರಹಂಕಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ. ಕೋರ್ಟ್‌ನಲ್ಲಿ ಶಿಕ್ಷೆ ವಿಧಿಸಲ್ಪಟ್ಟು ಸಂಸತ್ ಸದಸ್ಯತ್ವ ಕಳೆದುಕೊಂಡ ಮೊದಲ ವ್ಯಕ್ತಿ ರಾಹುಲ್ ಗಾಂಧಿ ಅಲ್ಲ. ಶಿಕ್ಷೆ ಪ್ರಶ್ನಿಸಿ ಮೇಲಿನ ಕೋರ್ಟ್‌ಗೆ ಹೋಗುವುದು ಬಿಟ್ಟು ಅವರು ತಮ್ಮ ಹಣೆಬರಹಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸುತ್ತಿದ್ದಾರೆ. ಅದರ ಬದಲು ಅವರು ಉಚ್ಛ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕು. ಶಿಕ್ಷೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸುಳ್ಳು ಮಾಹಿತಿ ಹರಡುತ್ತಿದೆ. ಕೋರ್ಟ್ ನಿರ್ಧರಿಸಿದರೆ ಶಿಕ್ಷೆಗೆ ತಡೆ ನೀಡಬಹುದು ಎಂದು ಅಮಿತ್ ಷಾ ಹೇಳಿದ್ದಾರೆ.
ಸುದ್ದಿ ಮಾಧ್ಯಮವೊಂದರ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ (Amit Shah), ರಾಹುಲ್ ಗಾಂಧಿ (Rahul Gandhi) ತಮ್ಮ ಶಿಕ್ಷೆಗೆ ತಡೆಯನ್ನೇ ಕೋರಿಲ್ಲ. ಇದೆಂತಹ ಧಾಷ್ಟ್ರ್ಯ? ನಿಮಗೆ ಉಪಕಾರ ಬೇಕು. ನೀವು ಸಂಸದರಾಗಿ ಮುಂದುವರೆಯಲು ಬಯಸುತ್ತೀರಿ. ಆದರೆ ಕೋರ್ಟ್‌ಗೆ ಹೋಗುವುದಿಲ್ಲ. ಇಂತಹ ದುರಹಂಕಾರ ನಿಮ್ಮಲ್ಲಿ ಹುಟ್ಟುವುದಾದರೂ ಎಲ್ಲಿಂದ? ಎಂದು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಅನರ್ಹತೆಯಿಂದ ತೆರವಾಗಿರುವ ವಯನಾಡು ಉಪ ಚುನಾವಣೆ ಕುತೂಹಲಕ್ಕೆ ಆಯೋಗ ಉತ್ತರ!
ಯುಪಿಎ ಸರ್ಕಾರದ (UPA Govt) ಅವಧಿಯಲ್ಲಿ 2013ರಲ್ಲಿ ಸುಪ್ರೀಂಕೋರ್ಟ್ ಆದೇಶದಿಂದಾಗಿ ಲಾಲು ಪ್ರಸಾದ್ ಯಾದವ್ (Lalu Prasad Yadav), ಜಯಲಲಿತಾ (Jayalalitha), ರಶೀದ್ ಆಳ್ವಿ (Rashid Alvi)ಸೇರಿದಂತೆ 17 ಪ್ರಮುಖ ನಾಯಕರು ಶಾಸನಸಭೆಯ ಸದಸ್ಯತ್ವ ಕಳೆದುಕೊಂಡಿದ್ದರು. ಶಿಕ್ಷೆಗೊಳಗಾದ ತಕ್ಷಣ ಚುನಾಯಿತ ಪ್ರತಿನಿಧಿ ತನ್ನ ಸದಸ್ಯತ್ವ ಕಳೆದುಕೊಳ್ಳುತ್ತಾನೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆಗ ಅವರಾರಯರೂ ಕಪ್ಪು ಬಟ್ಟೆ ಧರಿಸಿ ಬೀದಿಗಿಳಿಯಲಿಲ್ಲ. ಬದಲಿಗೆ ಕಾನೂನನ್ನು ಗೌರವಿಸಿದರು. ಏಕೆಂದರೆ ಇಂತಹ ವಿಷಯಗಳಲ್ಲಿ ಕಾನೂನು ಸ್ಪಷ್ಟವಿದೆ. ಇದರಲ್ಲಿ ದ್ವೇಷದ ಪ್ರಶ್ನೆಯೇ ಇಲ್ಲ. ಸುಪ್ರೀಂಕೋರ್ಟ್‌ನ ಈ ಆದೇಶ ಬಂದಿದ್ದು ಯುಪಿಎ ಸರ್ಕಾರದ ಅವಧಿಯಲ್ಲೇ ಎಂದೂ ಅಮಿತ್ ಶಾ ಹೇಳಿದರು.
ರಾಹುಲ್ ಗಾಂಧಿ ಕೋಲಾರಕ್ಕೆ ಬರುವ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರು..!
ಕೊಲೆ ಯತ್ನ ಆರೋಪ ಹೊತ್ತಿದ್ದ ಲಕ್ಷದ್ವೀಪದ ಸಂಸದನ ಸದಸ್ಯತ್ವ ಮರುಸ್ಥಾಪನೆ
ಗುಜರಾತ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದಾಗಿರುವುದರ ಬೆನ್ನಲೇ ಈಗ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್ ಅವರ ಲೋಕಸಭೆ ಸದಸ್ಯತ್ವ ಇಂದು ಮರು ಸ್ಥಾಪನೆಯಾಗಿದೆ. ಇದರಿಂದ ಇತ್ತೀಚೆಗಷ್ಟೇ ಅನರ್ಹಗೊಂಡ ಸಂಸದ ರಾಹುಲ್ ಗಾಂಧಿಗೆ ಆನೆಬಲ ಬಂದಂತಾಗಿದ್ದು, ಈ ತೀರ್ಪನ್ನೇ ಉಲ್ಲೇಖವಾಗಿರಿಸಿ ರಾಹುಲ್ ಅವರ ಸಂಸತ್ ಸದಸ್ಯತ್ವವನ್ನು ಮರು ಸ್ಥಾಪಿಸಲು ಅವರ ಕಾನೂನು ತಂಡವೂ ಹೋರಾಟ ನಡೆಸುವ ಸಾಧ್ಯತೆ ಇದೆ.
ಗುಜರಾತ್‌ನ ಸೂರತ್ ಕೋರ್ಟ್‌ನ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ವಕೀಲರು ನಾಳೆ ಸೆಷನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಹುಲ್ ಗಾಂಧಿ ಅವರ ಅನರ್ಹತೆಯ ನಂತರ ತೆರವಾಗಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಉಪ ಚುನಾವಣೆಯ ದಿನಾಂಕಗಳನ್ನು ಘೋಷಿಸಿದರೆ ಕಾನೂನು ಹೋರಾಟಕ್ಕೆ ಸಿದ್ಧವಾಗಿರುವುದಾಗಿ ಈಗಾಗಲೇ ಕಾಂಗ್ರೆಸ್ ಹೇಳಿದೆ.
ಇತ್ತ ಈಗ ಸಂಸತ್ ಸದಸ್ಯತ್ವದ ಅನರ್ಹತೆಯಿಂದ ಪಾರಾಗಿರುವ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್‌ಗೆ (Mohammed Faizal) ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಕೋರ್ಟ್ ಶಿಕ್ಷೆ ನೀಡಿದ ನಂತರ ಮೊಹಮ್ಮದ್ ಫೈಜಲ್ ಅವರನ್ನು ಸಂಸತ್ತಿನಿಂದ ಸ್ವಯಂಚಾಲಿತವಾಗಿ ಅನರ್ಹಗೊಳಿಸಲಾಗಿತ್ತು. ಮೊಹಮ್ಮದ್ ಫೈಜಲ್ ಶರದ್ ಪವಾರ್ (Sharad Pawar) ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸಂಸದರಾಗಿದ್ದರು. ಆದರೆ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಮೊಹಮ್ಮದ್ ಫೈಜಲ್ ಪ್ರಕರಣಕ್ಕೆ ಜನವರಿಯಲ್ಲಿ ಕೇರಳ ಹೈಕೋರ್ಟ್ ತಡೆ ನೀಡಿತ್ತು. ಆದರೆ ಶಿಕ್ಷೆಯನ್ನು ತಡೆಹಿಡಿದು ಎರಡು ತಿಂಗಳ ನಂತರವೂ ತನ್ನ ಅನರ್ಹತೆಯನ್ನು ಹಿಂಪಡೆಯದ ಲೋಕಸಭೆಯ ಕಾರ್ಯದರ್ಶಿಯ ಕಾನೂನು ಬಾಹಿರ ಕ್ರಮವನ್ನು (unlawful action) ಫೈಸಲ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಇಂದು ಅವರ ಸದಸ್ಯತ್ವ ಮರುಸ್ಥಾಪನೆಯಾಗಿದೆ.
