ರಾಹುಲ್ ಗಾಂಧಿ ಕೋಲಾರಕ್ಕೆ ಬರುವ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರು..!
ರಾಹುಲ್ ಗಾಂಧಿ ಸಮಾವೇಶದ ಸ್ಥಳ ಇನ್ನು ನಿಗಧಿ ಆಗಿಲ್ಲ. ಕೆ.ಹೆಚ್ ಮುನಿಯಪ್ಪ ತಮ್ಮ ಬೆಂಬಲಿಗರೊಂದಿಗೆ ಸ್ಥಳ ವೀಕ್ಷಣೆ ನಡೆಸಿದ್ರೆ, ಇತ್ತ ರಮೇಶ್ ಕುಮಾರ್ ಅಂಡ್ ಟೀಮ್ ನಸೀರ್ ಅಹ್ಮದ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸ್ಥಳ ವೀಕ್ಷಣೆ ಮಾಡಿದೆ.
ಕೋಲಾರ(ಮಾ.29): ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಕೋಲಾರಕ್ಕೆ ಬರುವ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಶುರುವಾಗಿದೆ. ಹೌದು, ರಮೇಶ್ ಕುಮಾರ್ ಹಾಗೂ ಕೆ.ಎಚ್. ಮುನಿಯಪ್ಪ ಮಧ್ಯೆ ಬಣ ರಾಜಕೀಯ ಆರಂಭವಾಗಿದೆ. ಪ್ರತ್ಯೇಕವಾಗಿ ಎರಡೂ ಬಣದವರು ಸಮಾವೇಶದ ಸ್ಥಳಕ್ಕೆ ಹುಡುಕಾಟ ನಡೆಸಿದ್ದಾರೆ. ಈ ಮೂಲಕ ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಮುಂದುವರೆದಿದೆ. ನಿನ್ನೆ(ಮಂಗಳವಾರ) ರಮೇಶ್ ಕುಮಾರ್ ಬಣದವರನ್ನು ಬಿಟ್ಟು ಕೆ.ಎಚ್. ಮುನಿಯಪ್ಪ ಪ್ರೆಸ್ ಮೀಟ್ ಮಾಡಿದ್ದರು.
ರಾಹುಲ್ ಗಾಂಧಿ ಏ 5 ರಂದು ಕೋಲಾರಕ್ಕೆ ಆಗಮಿಸಲಿದ್ದಾರೆ. 1 ಲಕ್ಷ ಜನರನ್ನು ಸೇರಿಸಿ ಕಾಂಗ್ರೆಸ್‌ನಿಂದ ಬೃಹತ್ ಸಮಾವೇಶ ಮಾಡಲು ತಯಾರಿ ನಡೆಯುತ್ತಿದೆ. ಆದರೆ, ಸಮಾವೇಶದ ಸ್ಥಳ ವೀಕ್ಷಣೆಯಲ್ಲೂ ಬಣ ರಾಜಕೀಯ ಮುಂದುವರೆದಿದೆ.
ಏ.5ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಭೇಟಿ: ಅನರ್ಹತೆ ಬಗ್ಗೆ ಇಲ್ಲಿಂದಲೇ ಉತ್ತರ
ಹೀಗಾಗಿ ರಾಹುಲ್ ಗಾಂಧಿ ಸಮಾವೇಶದ ಸ್ಥಳ ಇನ್ನು ನಿಗಧಿ ಆಗಿಲ್ಲ. ಕೆ.ಹೆಚ್ ಮುನಿಯಪ್ಪ ತಮ್ಮ ಬೆಂಬಲಿಗರೊಂದಿಗೆ ಸ್ಥಳ ವೀಕ್ಷಣೆ ನಡೆಸಿದ್ರೆ, ಇತ್ತ ರಮೇಶ್ ಕುಮಾರ್ ಅಂಡ್ ಟೀಮ್ ನಸೀರ್ ಅಹ್ಮದ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸ್ಥಳ ವೀಕ್ಷಣೆ ಮಾಡಿದೆ.
ಕೋಲಾರದ ಎರಡು ಬಣ ರಾಜಕೀಯ ನಡುವೆ ರಾಹುಲ್ ಗಾಂಧಿ ಕೋಲಾರಕ್ಕೆ ಆಗಮಿಸುತ್ತಿದ್ದಾರೆ. 2019 ರಲ್ಲಿ ಕೋಲಾರದಲ್ಲಿ ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಭಾಷಣ ಮಾಡಿದ್ದರಿಂದಲೇ ಇಂದು ಸಂಸದ ಸ್ಥಾನದಿಂದ ಅನರ್ಹರಾಗಿದ್ದಾರೆ. ಈಗಲೂ ಕೋಲಾರದಿಂದಲೇ ರಾಹುಲ್ ಗಾಂಧಿ ರಣಕಹಳೆ ಮೊಳಗಿಸಲಿದ್ದಾರೆ.