ಮಹಾರಾಷ್ಟ್ರದ‌ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ‌ದೇವಾಲಯಕ್ಕೆ ಭೇಟಿ ನೀಡಿದ ಅಮಿತ್‌ ಶಾ ತಾಯಿ ಮಹಾಲಕ್ಷ್ಮಿ ‌ದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ. ಕೇಂದ್ರ ಗೃಹ ‌ಸಚಿವ ಅಮಿತ್ ಶಾಗೆ‌ ಮಹಾರಾಷ್ಟ್ರ ‌ಡಿಸಿಎಂ ದೇವೇಂದ್ರ ‌ಫಡ್ನವೀಸ್‌ ಸೇರಿ ಹಲವರು‌ ಸಾಥ್ ಕೊಟ್ಟಿದ್ದಾರೆ. 

ಬೆಳಗಾವಿ(ಸೆ.26): ಮಹಾರಾಷ್ಟ್ರ ವಿಧಾನಸಭೆ ‌ಚುನಾವಣೆ ಅಖಾಡಕ್ಕೆ ‌ಚುನಾವಣೆ‌‌ ಚಾಣಕ್ಯ ಅಮಿತ್ ಶಾ‌ ಎಂಟ್ರಿ ಕೊಟ್ಟಿದ್ದಾರೆ. ಹೌದು, ಮಹಾರಾಷ್ಟ್ರ ಚುನಾವಣೆ ಘೋಷಣೆಗೂ‌ ಮುನ್ನವೇ ಅಮಿತ್ ಶಾ‌ ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ದಾರೆ. 

ಕೇಂದ್ರ ಸಚಿವ ಅಮಿತ್‌ ಶಾ ಅವರು ಮಹಾರಾಷ್ಟ್ರದ‌ ಶಕ್ತಿ ದೇವತೆ‌ ಮಹಾಲಕ್ಷ್ಮಿ ‌ದೇವಿಯ ಆಶೀರ್ವಾದ ಪಡೆದಿದ್ದಾರೆ. ಮಹಾರಾಷ್ಟ್ರದ‌ ಕೊಲ್ಲಾಪುರದಲ್ಲಿರುವ ಮಹಾಲಕ್ಷ್ಮಿ ‌ದೇವಾಲಯಕ್ಕೆ ಭೇಟಿ ನೀಡಿದ ಅಮಿತ್‌ ಶಾ ತಾಯಿ ಮಹಾಲಕ್ಷ್ಮಿ ‌ದೇವಿಯ ದರ್ಶನವನ್ನ ಪಡೆದುಕೊಂಡಿದ್ದಾರೆ. 

ಮಹತ್ವದ ನಿರ್ಧಾರ ಘೋಷಿಸಿದ ಅಮಿತ್ ಶಾ, ಪೋರ್ಟ್ ಬ್ಲೇರ್ ಸಿಟಿ ಮರುನಾಮಕರಣ, ಹೊಸ ಹೆಸರೇನು?

ಕೇಂದ್ರ ಗೃಹ ‌ಸಚಿವ ಅಮಿತ್ ಶಾಗೆ‌ ಮಹಾರಾಷ್ಟ್ರ ‌ಡಿಸಿಎಂ ದೇವೇಂದ್ರ ‌ಫಡ್ನವೀಸ್‌ ಸೇರಿ ಹಲವರು‌ ಸಾಥ್ ಕೊಟ್ಟಿದ್ದಾರೆ. ಇದೇ ವೇಳೆ ದೇವಾಲಯ ಟ್ರಸ್ಟ್‌ನಿಂದ ಅಮಿತ್ ಶಾ ಹಾಗೂ ಡಿಸಿಎಂ‌ ಫಡ್ನವಿಸ್‌ಗೆ ಸನ್ಮಾನಿಸಿದ್ದಾರೆ. 

ಯಾವುದೇ ಕ್ಷಣದಲ್ಲೂ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ರಾಜ್ಯ ಘಟಕ‌ ನಾಯಕರು, ಚು‌ನಾವಣೆ ಉಸ್ತುವಾರಿಗಳು, ಪದಾಧಿಕಾರಿಗಳ ಜೊತೆ ಅಮಿತ್‌ ಶಾ ಸಭೆ ನಡೆಸಲಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ‌ಸರ್ಕಾರ ಮತ್ತೊಮ್ಮೆ ತರುವ ನಿಟ್ಟಿನಲ್ಲಿ ಅಮಿತ್‌ ಶಾ ರಣತಂತ್ರ ಹೆಣೆಯಲಿದ್ದಾರೆ. ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧದ ‌ಎಫ್ಐಆರ್ ಪ್ರಕರಣದ‌ ಲಾಭ ಪಡೆಯುವ ಬಗ್ಗೆಯೂ ‌ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.