ಅಂಡಮಾನ್ ನಿಕೋಬಾರ್ ರಾಜಧಾನಿಯಾಗಿರುವ ಪೋರ್ಟ್ ಬ್ಲೇರ್ ಹೆಸರು ಬದಲಾಗಿದೆ. ಇಂದಿನಿಂದ ವಸಾಹತುಶಾಹಿ ಹೆಸರಿಗೆ ಅಂತ್ಯಹಾಡಿರುವ ಕೇಂದ್ರ ಸರ್ಕಾರ ಹೊಸ ಹೆಸರಿನೊಂದಿಗೆ ಮರುನಾಮಕರಣ ಮಾಡಿದೆ.

ನವದೆಹಲಿ(ಸೆ.12) ಬಿಜೆಪಿ ಸರ್ಕಾರ ಈಗಾಲೇ ಹಲವು ಪಟ್ಟಣ, ನಗರ, ಊರುಗಳ ಹೆಸರನ್ನು ಬದಲಿಸಿದೆ. ದಾಳಿಕೋರರಿಂದ ಬದಲಾಗಿದ್ದ ಹೆಸರು, ಬ್ರಟಿಷರ ಆಡಳಿತದಲ್ಲಿಟ್ಟಿದ್ದ ಪಟ್ಟಣ, ನಗರ, ಜಿಲ್ಲೆಗಳ ಹೆಸರು ಬದಲಿಸಿ ಪರ ವಿರೋಧಕ್ಕೆ ಕಾರಣವಾಗಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಗಟ್ಟಿ ನಿರ್ಧಾರ ಘೋಷಿಸಿದೆ. ಅಂಡಮಾನ್ ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ ಬ್ಲೇರ್ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಇದೀಗ ಪೋರ್ಟ್ ಬ್ಲೇರ್ ಹೆಸರು ಶ್ರೀ ವಿಜಯ ಪುರಂ ಎಂದು ಬದಲಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ.

ಈ ಘೋಷಣೆ ವೇಳೆ ಅಮಿತ್ ಶಾ ಪೋರ್ಟ್ ಬ್ಲೇರ್ ಮರುನಾಮಕರಣಕ್ಕೆ ಕಾರಣ ಹಾಗೂ ಹೊಸ ಹೆಸರಿನ ಹಿಂದಿನ ಮಹತ್ವವನ್ನೂ ವಿವರಿಸಿದ್ದಾರೆ. ಆದರೆ ಮರುನಾಮಕರಣ ಇದೀಗ ಪರ ವಿರೋಧಕ್ಕೆ ಕಾರಣವಾಗಿದೆ. ವಸಾತುಶಾಹಿಗಳ ಮನಸ್ಥಿತಿಯಿಂದ ಹೊರಬರಲು, ವಸಾತು ಶಾಹಿ ಕುರುಹುಗಳಿಂದ ದೇಶವನ್ನು ಮುಕ್ತಗೊಳಿಸಿ ಪ್ರಧಾನಿ ಮೋದಿ ದೂರದೃಷ್ಟಿ ನಾಯಕತ್ವದಿಂದ ಇದೀಗ ಪೋರ್ಟ್ ಬ್ಲೇರ್‌ನ್ನು ಶ್ರೀ ವಿಜಯ ಪುರಂ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ರಾಮನಗರ ಇನ್ಮುಂದೆ 'ಬೆಂಗಳೂರು ದಕ್ಷಿಣ; 17 ವರ್ಷಗಳಲ್ಲೇ ಹೆಸರು ಬದಲು!

ಪೋರ್ಟ್ ಬ್ಲೇರ್ ಹೆಸರು ವಸಾಹತು ಶಾಹಿಗಳ ಆಡಳಿತದ ಕನ್ನಡಿಯಾಗಿದೆ. ಇದೀಗ ನೂತನವಾಗಿ ಇಟ್ಟಿರುವ ಶ್ರೀ ವಿಜಯ ಪುರಂ ಹೆಸರು ಅಂಡಮಾನ್ ನಿಕೋಬಾರ್‌ನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಸಿಕ್ಕ ಗೆಲುವಿನ ಪ್ರತೀತಿಯಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅಂಡಾನ್ ನಿಕೋಬಾರ್ ಹೋರಾಟಗಗಳು ಅತ್ಯಂತ ಪ್ರಮುಖವಾಗಿದೆ. ಇದೇ ದ್ವೀಪ ಒಂದು ಕಾಲದಲ್ಲಿ ಚೋಳರ ನೌಕಾ ನೆಲೆಯಾಗಿತ್ತು. ಇದೀಗ ಅಭಿವೃದ್ಧಿ ಭಾರತದ ನೆಲೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ 

ಇದೇ ಶ್ರೀ ವಿಜಯ ಪುರಂನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊದಲ ಬಾರಿಗೆ ತಿರಂಗ ಹಾರಿಸಿದ್ದರು. ಇದೇ ಸ್ಥಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಕಾಲಾ ಪಾನಿಯಂತ ಕಠಿಣ ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.

ಈ ಮರುನಾಮಕರಣ ನಿರ್ಧಾರಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಅತ್ಯುತ್ತಮ ನಿರ್ಧಾರ ಎಂದು ಬಣ್ಣಸಿದ್ದಾರೆ. ಪೋರ್ಟ್ ಬ್ಲೇರ್ ಹೆಸರು ಗುಲಾಮಗಿರಿಯ ಸಂಕೇತವಾಗಿತ್ತು. ಇದೀಗ ನಮ್ಮ ಸ್ವಾತಂತ್ರ್ಯದ ಹೋರಾಟದ ವಿಜಯದ ಸಂಕೇತದ ಹೆಸರು ಇಡಲಾಗಿದೆ. ವಿಜಯ ಪುರಂ ಎಂದೇ ಈ ನಗರ ಜನಪ್ರಿಯಗೊಂಡಿತ್ತು. ವಸಾತುಶಾಹಿ, ದಾಳಿಕೋರರಿಗೆ ಸಿಕ್ಕಿ ಗುಮಾಗಿರಿ ಹೆಸರು ಬಂತು ಎಂದು ಹಲವರು ಎಕ್ಸ್ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ನಿರ್ಧಾರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಿದ ಗೌರವವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

Scroll to load tweet…

ಇದೇ ವೇಳೆ ಹಲವರು ಇಂಡಿಯಾ ಹೆಸರನ್ನು ಭಾರತ ಎಂದು ಯಾವಾಗ ಮರುನಾಮಕರಣ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಹೆಸರು ಬದಲಾವಣೆಯಿಂದ ಏನೂ ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಈ ರೀತಿಯ ರಾಜಕೀಯದಲ್ಲೇ ಮುಳುಗಿದೆ ಎಂದು ಹಲವರು ನಿರ್ಧಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಸಿಎಂ ಯೋಗಿ ನಾಡಲ್ಲಿ ಮತ್ತೊಂದು ನಗರಕ್ಕೆ ಮರುನಾಮಕರಣ, ಅಲಿಘಡ ಇನ್ನು ಹರಿಘಡವಾಗಿ ಬದಲು!