ಮೋದಿ ದೇಶದ ಅತ್ಯಂತ ದುರ್ಬಲ ಪ್ರಧಾನಿ: ಮಾಜಿ ಸಂಸದ ಉಗ್ರಪ್ಪ ವಾಗ್ದಾಳಿ
ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ದೇಶದ ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದಾರೆ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.
ಬೆಂಗಳೂರು (ಜು.27): ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಪ್ರಧಾನಿ ಮೋದಿ ದೇಶದ ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದಾರೆ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ವಾಗ್ದಾಳಿ ನಡೆಸಿದರು.
ಭಾರತದ ಸಂವಿಧಾನದಡಿಯಲ್ಲಿ ಅಯವ್ಯಯ ಮಂಡನೆ ಮಾಡುತ್ತೇವೆ. 2014ರಲ್ಲಿ ಕೊಟ್ಟ ಆಶ್ವಾಸನೆ ಹಾಗೂ 2024ರಲ್ಲಿ ಮೋದಿ ಕೊಟ್ಟ ಆಶ್ವಾಸನೆ ನೋಡಬೇಕು. 350 ರೂಪಾಯಿ ಸಿಲಿಂಡರ್ ಇದ್ದಾಗ ಅವರು ಬೆಲೆ ಏರಿಕೆ ಎಂದಿದ್ದರು. ಮಿಸ್ಟರ್ ಮೋದಿ ಈಗ ಸಿಲಿಂಡರ್ ಬೆಲೆ ಎಷ್ಟಿದೆ? ಈಗ ಬೆಲೆ ಏರಿಕೆ ಆಗಿಲ್ವ? ಕಚ್ಚಾ ತೈಲದ ಬೆಲೆ ಕುಸಿದರೂ ಪೆಟ್ರೋಲ್ ಡೀಸೆಲ್ ರೇಟ್ ಕಡಿಮೆ ಮಾಡಿಲ್ಲ. ಮೋದಿಯಂತಹ ದುರ್ಬಲ ಪ್ರಧಾನಿಯನ್ನ ಹಿಂದೆ ಕಂಡಿಲ್ಲ ಎಂದು ಹರಿಹಾಯ್ದರು.
ವಾಲ್ಮೀಕಿ ನಿಗಮದ ಹಣದಲ್ಲಿ ಬರೋಬ್ಬರಿ 10 ಕೆಜಿ ಚಿನ್ನದ ಬಿಸ್ಕೆಟ್ ಖರೀದಿ ಮಾಡಿದ್ದ ಕುಳ!
ರಫೆಲ್ ಹಗರಣದ ಮೂಲಕ ಕೊಳ್ಳೆ ಹೊಡದಿದ್ದಾರೆ. 5ಜಿ ಹಗರಣ ಇವತ್ತು ನಡೆದಿದೆ. ಇದು ಸಾಮಾನ್ಯ ಅಲ್ಲ. 5ಜಿ ಎಸ್ಟಿಮೇಟ್ ರೆವೆನ್ಯೂ 70 ಸಾವಿರ ಕೋಟಿ ರೂ.ಆದರೆ 12ಸಾವಿರ ಕೋಟಿ ರೂ. ಮಾತ್ರ ಆದಾಯ ಬಂದಿದೆ ಎನ್ನೋದು ಗೊತ್ತಾಗಿದೆ. ಉಳಿದ ಹಣ ಎಲ್ಲಿ ಹೋಯಿತು? ಸುಮಾರು 50ಸಾವಿರ ಕೋಟಿ ಇವರ ಅಡ್ಜಸ್ಟ್ ಮೆಂಟ್ ಮೂಲಕ ಲಾಸ್ ಆಗಿದೆ ಎಂದು ಆರೋಪಿಸಿದರು.
ಕೇಂದ್ರ ಬಜೆಟ್‌ನಲ್ಲಿ ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ಅನುಧಾನ ಕೊಡಲಾಗಿದೆ. ಇವರ ಸರ್ಕಾರ ಉಳಿಸಿಕೊಳ್ಳಲು ಎರಡು ರಾಜ್ಯಕ್ಕೆ ಹೆಚ್ಚಿನ ಅನುದಾನ ಕೊಡಲಾಗಿದೆ. ನೀರಾವರಿಗೆ ಕಾಂಗ್ರೆಸ್ ಹೆಚ್ಚಿನ ಒತ್ತನ್ನು ಕೊಟ್ಟಿತ್ತು. 2014ರ ನಂತರ ಮಿಸ್ಟರ್ ಮೋದಿ ಕೆಆರ್ ಎಸ್ ರೀತಿಯ ಯಾವುದಾದರೂ ಒಂದು ನೀರಾವರಿ ಯೋಜನೆ ಜಾರಿ ಮಾಡಿದ್ದಾರಾ? ಮೇಜರ್ ಇಂಡಸ್ಟ್ರಿ ಯಾವುದನ್ನಾದರೂ ಕರ್ನಾಟದಲ್ಲಿ ಇವರು ಮಾಡಿದ್ದಾರಾ ನೀರಾವರಿಗೆ ಒತ್ತು ಕೊಟ್ಟಿಲ್ಲ,ಇಂಡಸ್ಟ್ರಿಗೆ ಒತ್ತು ಕೊಟ್ಟಿಲ್ಲ. ಹಾಗಾದರೆ ಮಿಸ್ಟರ್ ಮೋದಿ ಏನು ಕಡೆದು ಕಟ್ಟೆ ಹಾಕಿದ್ದೀರಿ? ಎಂದು ಕಿಡಿಕಾರಿದರು.
ಬೆಂಗಳೂರಲ್ಲಿ ನಾಯಿ ಮಾಂಸ ಮಾರಾಟ ಪ್ರಕರಣ: ಸ್ಟೇಷನ್ ಬೇಲ್ ಮೇಲೆ ಪುನೀತ್ ಕೆರೆಹಳ್ಳಿ ಬಿಡುಗಡೆ?
ಇನ್ನು ವಾಲ್ಮೀಕಿ ಹಗರಣ, ಮುಡಾ ಹಗರಣದ ಬಗ್ಗೆ ರಾಜ್ಯ ಬಿಜೆಪಿ ಎಂಪಿಗಳು ಮಾತಾಡ್ತಿದ್ದಾರೆ. ಅವರು ಯಾಕೆ ರಾಜ್ಯದ ಕುರಿತಾಗಿ ಕೇಂದ್ರದಲ್ಲಿ ಮಾತಾಡ್ತಿಲ್ಲ? ಯಾಕೆ ಕಡಿಮೆ ಅನುದಾನ ಬಂದಿದೆ ಅಂತಾ ಕೇಳ್ತಿಲ್ಲ? ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಆದ್ರೂ ಯಾಕೆ ಧ್ವನಿ ಎತ್ತುತ್ತಿಲ್ಲ? ಯಾಕೆಂದರೆ ಅವರಿಗೆ ರಾಜ್ಯದ ಮೇಲೆ ಬದ್ಧತೆ ಇಲ್ಲ. ಹೈಕಮಾಂಡ್, ಪ್ರಧಾನಿ ಬಳಿ ಪ್ರಶ್ನಿಸಲು ಇವರಿಗೆ ಧೈರ್ಯವಿಲ್ಲ ಎಂದು ಲೇವಡಿ ಮಾಡಿದರು.