Asianet Suvarna News Asianet Suvarna News

ದೇಶದಲ್ಲಿ ಇನ್ನೆರಡು ವರ್ಷದಲ್ಲಿ ನಿರುದ್ಯೋಗ ಹೆಚ್ಚಳ: ವೀರಪ್ಪ ಮೊಯ್ಲಿ

ದೇಶದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾದಲ್ಲಿ 60 ಸಾವಿರ ಕೋಟಿಯಷ್ಟು ಕಡಿಮೆಯಾಗಿದೆ ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಮಾಜಿ ಸಂಸದ ಡಾ. ಎಂ.ವೀರಪ್ಪ ಮೊಯ್ಲಿ ಕಳವಳ ವ್ಯಕ್ತಪಡಿಸಿದರು. 
 

Unemployment to increase in next two years in country Says Veerappa Moily gvd
Author
First Published Feb 2, 2024, 2:27 PM IST

ಚಿಕ್ಕಬಳ್ಳಾಪುರ (ಫೆ.02): ದೇಶದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾದಲ್ಲಿ 60 ಸಾವಿರ ಕೋಟಿಯಷ್ಟು ಕಡಿಮೆಯಾಗಿದೆ ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂದು ಮಾಜಿ ಸಂಸದ ಡಾ. ಎಂ.ವೀರಪ್ಪ ಮೊಯ್ಲಿ ಕಳವಳ ವ್ಯಕ್ತಪಡಿಸಿದರು. ನಗರದ ಉತ್ತರ ಬಡಾವಣೆಯ ತಮ್ಮ ಗೃಹ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂಐ ಸಂಸ್ಥೆ ನಡೆಸಿರುವ ಸಮೀಕ್ಷೆಯಂತೆ ದೇಶದಲ್ಲಿ ಇನ್ನೆರಡು ವರ್ಷ ಇದೇ ರೀತಿ ಆಡಳಿತ ನಡೆಸಿದರೆ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿ ಆರ್ಥಿಕ ಪರಿಸ್ಥಿತಿ ಇನ್ನೂ ಹದಗೆಡಲಿದೆ ಎಂದರು.

ದುಡಿಯಲು ಉದ್ಯೋಗ ನೀಡಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾರಿಶಕ್ತಿಗೆ ಬಲ ತುಂಬುತ್ತೇವೆಂದು ಹೇಳುತ್ತಿದೆ. ಆದರೆ ಮಹಿಳೆಯರಿಗೆ ಸ್ವಾವಲಂಭಿಗಳಾಗಲು ಅವರ ಕೈಗೆ ದುಡಿಯಲು ಉದ್ಯೋಗ ನೀಡಬೇಕು, ಆಗ ಅವರು ಆರ್ಥಿಕವಾಗಿ ಸ್ವಾವಲಂಭಿಗಳಾಗಲು ಸಾಧ್ಯ ಎಂದರು. ಕೇಂದ್ರದ ಎನ್ ಡಿಎ ಸರ್ಕಾರವೇ ಇತ್ತೀಚೆಗೆ ನೀಡುತ್ತಿರುವ ಜಾಹೀರಾತುಗಳಲ್ಲಿ 80 ಕೋಟಿ ಜನಕ್ಕೆ ಆಹಾರ ಪೂರೈಸುತ್ತಿರುವುದಾಗಿ ಹೇಳುತ್ತಿದೆ. ಇದರ ಆಧಾದ ಮೇಲೆ ನೋಡಿದಾಗ ದೇಶದಲ್ಲಿ ಶೇ70 ರಷ್ಟು ಜನರು ಬಡವರಿದ್ದಾರೆ ಎಂದು ಅರ್ಥ. ಶೇ10ರಷ್ಟು ಶ್ರೀಮಂತರ ಕೈಗೆ ಶೇ.65 ರಷ್ಟು ಉತ್ಪಾದನೆ ಹೋಗುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ದೇಶ ದಿವಾಳಿಯತ್ತ ಸಾಗುತ್ತಿದೆ ಎಂದು ಅನಿಸುತ್ತದೆ ಎಂದರು.

ದೇಶ ತುಂಡರಿಸುವುದೇ ಕಾಂಗ್ರೆಸ್ ಸಂಸ್ಕೃತಿ, ದೇಶ ಜೋಡಿಸುವುದು ಬಿಜೆಪಿ ಸಂಸ್ಕೃತಿ: ಕೋಟ ಶ್ರೀನಿವಾಸ ಪೂಜಾರಿ

ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಖಚಿತ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸುವುದು ನೂರಕ್ಕೆ ನೂರಷ್ಟು ಖಚಿತವಾಗಿದೆ. ಇದೇ ಕಾರಣಕ್ಕೆ ವಿರೋಧ ಪಕ್ಷಗಳು ಇಲ್ಲಿ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿವೆ. ದೇಶದಲ್ಲಿ ಬಿಜೆಪಿ ವಿರೋಧಿ ಅಲೆಯಿದೆ. ಇದನ್ನು ತಪ್ಪಿಸಿಕೊಳ್ಳಲು ರಾಮ, ಧರ್ಮ, ಪುಲ್ವಮಾ ಮೊದಲಾದ ವಿಚಾರಗಳನ್ನು ಮುನ್ನೆಲೆಗೆ ತರುತ್ತಾರೆ. ಇದನ್ನು ದೇಶವಾಸಿಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕಾಂಗ್ರೆಸ್‌ನಿಂದ ಬ್ಲ್ಯಾಕ್ ಮೇಲ್ ರಾಜಕಾರಣ: ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಜಾಗೃತಿ ಜಾಥಾ: ತರಾತುರಿ ಬೇಡ: ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಸಂಚರಿಸುತ್ತಿರುವುದು ಸಂತೋಷದ ಸಂಗತಿ. ಇದನ್ನು ಪಕ್ಷವು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು ಒಳಿತು. ಯಾವುದೇ ಕಾರ್ಯಕ್ರಮವಿರಲಿ ಅದನ್ನು ತರಾತುರಿಯಲ್ಲಿ ಮಾಡಿ ಮುಗಿಸುವುದು ಸರಿಯಲ್ಲ. ಸರ್ವರನ್ನೂ ಒಳಗೊಳ್ಳುವ ರೀತಿಯಲ್ಲಿ ರೂಪಿಸಬೇಕು ಎಂದರು. ಈ ವೇಳೆ ಮಾಜಿ ಶಾಸಕರಾದ ಎಂ.ಶಿವಾನಂದ್, ಎಸ್.ಎಂ.ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ಕಿಸಾನ್ ಕಾಂಗ್ರೇಸ್ ನ ರಾಮಕೃಷ್ಣಪ್ಪ, ಲಾಯರ್ ನಾರಾಯಣಸ್ವಾಮಿ,ಜಿ.ಪಂ .ಮಾಜಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ,ಮುಖಂಡರಾದ ಯಲುವಹಳ್ಳಿ ಆರ್.ಜನಾರ್ಧನ್ ಮತ್ತಿತರರು ಇದ್ದರು.

Follow Us:
Download App:
  • android
  • ios