ಚೀನಾ ಕೊರೋನಾ ವೈರಸ್ ಆಯ್ತು. ಇದೀಗ ಬ್ರಿಟನ್‌ನಿಂದ ವೈರಸ್ ಕಾಟ ಶುರುವಾಗಿದೆ. ಇದರ ಮಧ್ಯೆ ಕರ್ನಾಟಕದಲ್ಲಿ ಶಾಲೆ ಪ್ರಾರಂಭಿಸಲು ದಿನಾಂಕವನ್ನು ಫಿಕ್ಸ್ ಮಾಡಲಾಗಿದೆ. ಇನ್ನು ಈ ಬಗ್ಗೆ ಶಿಕ್ಷಣ ಸಚಿವರು ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದು, ಅದು ಈ ಕೆಳಗಿನಂತಿದೆ.
ಬೆಂಗಳೂರು, (ಡಿ.22): ರಾಜ್ಯದಲ್ಲಿ ರೂಪಾಂತರಗೊಂಡ ಕೊರೋನಾ ವೈರಸ್‌ನ ಅಲೆಯ ಆತಂಕ ಎದುರಾಗಿದ್ದು, ದೆಹಲಿ ಹಾಗೂ ಚೆನ್ನೈಗೆ ಬಂದಿಳಿದಿದ್ದ ಪ್ರಯಾಣಿಕರಲ್ಲಿ ಹೊಸ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಇತ್ತ ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ದಿನಾಂಕ ನಿಗದಿ ಮಾಡಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್, ಕೊರೋನಾ ಹೊಸ ರೂಪಾಂತರಕ್ಕೆ ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ದೇಶದ ಜನರಿಗೆ ಧೈರ್ಯ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸಲಹೆ ಮೇರೆಗೆ ಜನವರಿ 1 ರಿಂದ 10, 12 ತರಗತಿಗಳು ಪ್ರಾರಂಭಿಸ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ವೇಗವಾಗಿ ಹರಡುವ ಹೊಸ ವೈರಸ್ ಪತ್ತೆ: ಎಚ್ಚರಿಕೆ ವಹಿಸಲು ಸಚಿವರು ಮನವಿ
ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಸುರೇಶ್‌ಕುಮಾರ್, ಈಗ ಹೊಸ ವೈರಸ್ ಬಗ್ಗೆ ಅವಲೋಕಿಸಲು ಬಮಗೆ 9 ದಿನಗಳ ಸಮಯವಿದೆ. ಹೊಸ ವೈರಸ್‌ನ ನಿಜವಾದ ಶಕ್ತಿ ಎಷ್ಟು ಅನ್ನೋದನ್ನ ಅವಲೋಕಿಸುತ್ತೇವೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಏನು ಸಲಹೆ ನೀಡುತ್ತೆ ಅದರಂತೆ ಮುನ್ನಡೆಯುತ್ತೇವೆ ಎಂದು ಹೇಳಿದರು.
'ವಿದ್ಯಾಗಮದ ಮೂಲಕ ಶಿಕ್ಷಣ'
ಪರಿಸ್ಥಿತಿ ನೋಡಿಕೊಂಡು 6,7, 8,9 ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮದ ಮೂಲಕ ಶಿಕ್ಷಣ ನೀಡಲು ಮುಂದಾಗುತ್ತೇವೆ. ಖಾಸಗಿ ಶಾಲೆಯವರು ವಿದ್ಯಾಗಮ ಯೋಜನೆ ಮೂಲಕ ಶಿಕ್ಷಣ ಆರಂಭಿಸಲು ಮುಂದೆ ಬಂದಿದ್ದಾರೆ. ಕೊರೋನಾ ಸೊಂಕು ಕಡಿಮೆ ಇರುವ ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶೈಕ್ಷಣಿಕ ತರಗತಿಗಳನ್ನೇ ಆರಂಭಿಸುವ ಬಗ್ಗೆ ಹೈ ಕೋರ್ಟ್ ಸಲಹೆ ನೀಡಿದೆ. ಆದರೆ ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ವರದಿ ಅನ್ವಯವೇ ನಾವು ನಿರ್ಧಾರ ತೆಗೆದುಕೊಳ್ತೇವೆ ಎಂದರು.
ಶಾಲೆ ಆರಂಭಿಸುವ ಕನಸು ಕಂಡಿದ್ದ ಸರ್ಕಾರಕ್ಕೆ ಬಿಗ್ ಶಾಕ್..!
'ನಮಗೆ ಪ್ರತಿಷ್ಠೆಯ ವಿಚಾರ ಅಲ್ಲ'
ತರಗತಿಗಳನ್ನ ಪ್ರಾರಂಭಿಸಬೇಕು ಅನ್ನೋದು ನಮಗೆ ಪ್ರತಿಷ್ಠೆಯ ವಿಚಾರ ಅಲ್ಲ. ಮಕ್ಕಳು ಶಿಕ್ಷಣದಿಂದ ವಂಚರಾಗವಾರದು ಅನ್ನೋದಷ್ಟೇ ನಮ್ಮ ಕಾಳಜಿ. 9 ದಿನಗಳಲ್ಲಿ ಪ್ರಭೇದದ ಶಕ್ತಿ, ನಿಜವಾದ ಶಕ್ತಿ ಎಷ್ಟು ಅನ್ನೋದನ್ನ ಅವಲೋಕಿಸುತ್ತೇವೆ. ಹಾಸ್ಟಲ್ ಗಳಲ್ಲಿರುವ ವಿದ್ಯಾರ್ಥಿಗಳಿಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸ್ತೇವೆ. SSlC, 2nd PUC ಯಲ್ಲಿ ಒಟ್ಟು 12 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಆರ್.ಟಿ.ಪಿಸಿ.ಆರ್ ಟೆಸ್ಟ್ ಅಗತ್ಯವಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಹೇಳಿದೆ ಎಂದು ವಿವರಿಸಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 22, 2020, 9:03 PM IST