Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರಕ್ಕೆ ಹಿಂದುಗಳ ಧ್ವನಿ ಹತ್ತಿಕ್ಕಲು ಸಾಧ್ಯವಾಗದು: ಡಾ.ಭರತ್‌ ಶೆಟ್ಟಿ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಲೇ ಬಂದಿದ್ದು, ಇದು ಸಾಧ್ಯವಾಗದ ವಿಚಾರ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಹೇಳಿದರು

Udupi video incident MLA Dr Bharat Shetty outraged against Congress at udupi rav
Author
First Published Aug 7, 2023, 11:49 AM IST

ಮಂಗಳೂರು (ಆ.7) :  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಲೇ ಬಂದಿದ್ದು, ಇದು ಸಾಧ್ಯವಾಗದ ವಿಚಾರ. ಅನ್ಯಾಯ, ದೌರ್ಜನ್ಯದ ವಿರುದ್ಧ ಹಿಂದೂ ಸಮಾಜ ಎದ್ದು ನಿಂತರೆ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಯ ವಾರಂಟಿ ಶೀಘ್ರ ಕೊನೆಗೊಂಡರೂ ಅಚ್ಚರಿಯಿಲ್ಲ ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ ಹೇಳಿದರು

ಉಡುಪಿಯ ಪ್ಯಾರಾ ಮೆಡಿಕಲ್‌ ಕಾಲೇಜಿನ ಶೌಚಾಲಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂವರು ವಿದ್ಯಾರ್ಥಿನಿಯರು ಮೊಬೈಲ್‌ ಕ್ಯಾಮರಾ ಅಳವಡಿಸಿ ವೀಡಿಯೋ ಚಿತ್ರೀಕರಣ ಮಾಡುವ ಗಂಭೀರ ಅಪರಾಧವನ್ನು ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಿರುವ ಹಿಂದೂ ಸಮಾಜದ ಮುಖಂಡ ಶರಣ್‌ ಪಂಪ್‌ವೆಲ…, ದಿನೇಶ್‌ ಮೆಂಡನ್‌, ವೀಣಾ ಶೆಟ್ಟಿಸೇರಿದಂತೆ ಹಲವರ ಮೇಲೆ ಪೊಲೀಸ್‌ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ಉಡುಪಿ ವಿಡಿಯೋ ವಿವಾದ: ತನಿಖೆಯಲ್ಲೂ ಹೇಳಿಕೆಗೆ ಬದ್ಧವಾಗಿರುವ ಮುಸ್ಲಿಂ ವಿದ್ಯಾರ್ಥಿನಿಯರು

ಉಡುಪಿ ಘಟನೆಯ ವಿವರಗಳನ್ನು ದಾಖಲೆ ಸಮೇತ ರಾಜ್ಯದ ರಾಜ್ಯಪಾಲರಿಗೆ ಕರಾವಳಿ ಬಿಜೆಪಿ ಶಾಸಕರ ನಿಯೋಗ ಹಸ್ತಾಂತರಿಸಿದೆ. ಪ್ರಕರಣದ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸುವಂತೆ ಸರ್ಕಾರಕ್ಕೆ ಸೂಚಿಸುವಂತೆ ಒತ್ತಾಯಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಅಪ್ರಾಪ್ತ ಬಾಲಕಿ ಗ್ಯಾಂಗ್‌ರೇಪ್‌ ಬಗ್ಗೆ ಬಿಜೆಪಿ ಪ್ರತಿಭಟನೆ ಏಕಿಲ್ಲ: ಕೃಪಾ ಆಳ್ವ

ಉಡುಪಿಯ ವಿಡಿಯೊ ಪ್ರಕರಣದಲ್ಲಿ ಭಾರೀ ಪ್ರತಿಭಟನೆ ನಡೆಸುವ ಕರಾವಳಿಯ ಬಿಜೆಪಿ ಶಾಸಕರು, ಸಂಸದರು ವಿಟ್ಲದಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಗ್ಯಾಂಗ್‌ ರೇಪ್‌ ನಡೆದಾಗ ಏಕೆ ಪ್ರತಿಭಟನೆ ಮಾಡಿಲ್ಲ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಕೃಪಾ ಅಮರ್‌ ಆಳ್ವ ಪ್ರಶ್ನಿಸಿದ್ದಾರೆ. ಅಲ್ಲದೆ, ಸಂತ್ರಸ್ತ ಬಾಲಕಿಯ ಶಿಕ್ಷಣ ಮುಂದುವರಿಕೆ, ಸರ್ಕಾರದಿಂದ ಮನೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದಾಗಿಯೂ ಭರವಸೆ ನೀಡಿದರು.

ಮಡಿಕೇರಿಯಿಂದ ನಾಪತ್ರೆಯಾಗಿದ್ದ ಇಬ್ಬರು ಯುವತಿಯರು ಮಲ್ಪೆ ಸಮುದ್ರ ಪಾಲು!

ಗ್ಯಾಂಗ್‌ ರೇಪ್‌ಗೆ ಒಳಗಾದ ವಿಟ್ಲದ ಬಾಲಕಿಯ ಮನೆಗೆ ಶನಿವಾರ ಬೆಳಗ್ಗೆ ಭೇಟಿ ನೀಡಿ ಸಾಂತ್ವನ ನೀಡಿದ ಅವರು ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಸ್ನಾನ ಮಾಡುವಾಗ ವಿಡಿಯೊ ಮಾಡಿದ ಪ್ರಕರಣವೂ ನಡೆದಿದೆ. ಈ ವಿಚಾರದಲ್ಲೂ ಬಿಜೆಪಿ, ಸಂಘ ಪರಿವಾರದವರು ಮಾತನಾಡುತ್ತಿಲ್ಲ. ಆರೋಪಿ ಹಿಂದೂ ಆಗಿರುವುದರಿಂದಲೇ ಬಾಯಿಮುಚ್ಚಿ ಕೂತಿದ್ದಾರೆ. ಈಗ ರಾಜಕೀಯ ಮಾಡುವವರು ಯಾರು ಎನ್ನುವುದು ಎಲ್ಲರಿಗೆ ಗೊತ್ತಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಕೋಡಿಜಾಲ್‌ ಇಬ್ರಾಹಿಂ, ಶುಭೋದಯ ಆಳ್ವ, ಉಬೈದು ವಿಟ್ಲ, ನಝೀರ್‌ ಬಜಾಲ್‌ ಇದ್ದರು.

Follow Us:
Download App:
  • android
  • ios