ಮಡಿಕೇರಿಯಿಂದ ನಾಪತ್ತೆಯಾಗಿ ಇಬ್ಬರು ಹುಡುಗಿಯರು ಜಿಲ್ಲೆಯ ಮಲ್ಪೆ ಸಮುದ್ರದಲ್ಲಿ ಭಾರೀ ಅಲೆಗಳಿಗೆ ನೀರು ಪಾಲಾದ ಘಟನೆ ನಡೆದಿದೆ.

ಉಡುಪಿ (ಆ.6) : ಮಡಿಕೇರಿಯಿಂದ ನಾಪತ್ತೆಯಾಗಿ ಇಬ್ಬರು ಹುಡುಗಿಯರು ಜಿಲ್ಲೆಯ ಮಲ್ಪೆ ಸಮುದ್ರದಲ್ಲಿ ಭಾರೀ ಅಲೆಗಳಿಗೆ ನೀರು ಪಾಲಾದ ಘಟನೆ ನಡೆದಿದೆ.

ಮಡಿಕೇರಿಯ ಮಾನ್ಯ ಮತ್ತು ಯಶಸ್ವಿನಿ ನಾಪತ್ತೆಯಾಗಿದ್ದ ಹುಡುಗಿಯರು. ಕಳೆದ ಮೂರು ದಿನಗಳಿಂದ ಪತ್ತೆಯಾಗಿರಲಿಲ್ಲ. ನಿನ್ನೆ ತಡರಾತ್ರಿ. ನಿನ್ನೆ ತಡರಾತ್ರಿ ಮಲ್ಪೆ ಸಮುದ್ರದಲ್ಲಿ ನೀರು ಪಾಲಾಗಿದ್ದರು. ಈ ವೇಳೆ ಆಪತ್ಬಾಂಧವ ಈಶ್ವರ್ ಮಲ್ಪೆಯಲ್ಲಿ ಕಾರ್ಯಾಚರಣೆ ನಡೆಸಿ ಓರ್ವ ಹುಡುಗಿಯ ರಕ್ಷಣೆ ಮಾಡಿದ್ದಾರೆ. ಆದರೆ ಸಮುದ್ರದ ಭಾರಿ ಅಲೆಗಳ ಹೊಡೆತಕ್ಕೆ ಮಾನ್ಯ ಎಂಬುವ ಯುವತಿ ಮೃತಪಟ್ಟಿದ್ದಾಳೆ. ಯಶಸ್ವಿನಿ ಅದೃಷ್ಟವಶಾತ್ ಬದುಕುಳಿದಿದ್ದು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು.

ಶಬರಿಮಲೆಗೆ ತೆರಳಿದ್ದ ಕೊಡಗು ಯುವಕ ಸಮುದ್ರ ಪಾಲು: ಕಣ್ಣೂರು ಬೀಚ್‌ನಲ್ಲಿ ಕಣ್ಮರೆ

ಹೆದ್ದಾರಿಯಲ್ಲಿ ಡಿಸೀಲ್‌ ಸೋರಿಕೆ: ಬಿದ್ದು-ಎದ್ದು ಸಾಗಿದ ಸವಾರರು!

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ-66ರಲ್ಲಿ ವಾಹನವೊಂದರಿಂದ ಡಿಸೀಲ್‌ ಸೋರಿಕೆಯಾದ ಪರಿಣಾಮ ಬೈಕ್‌ ಸವಾರರು ಬಿದ್ದು, ಎದ್ದು ಸಾಗಿದ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಸಮೃದ್ಧಿ ಹೊಟೇಲ್‌ ಮುಂಭಾಗ ಶನಿವಾರ ಮಧ್ಯಾಹ್ನ ನಡೆದಿದೆ.

ಚಲಿಸುತ್ತಿದ್ದ ವಾಹನವೊಂದರ ಡಿಸೀಲ್‌ ಟ್ಯಾಂಕ್‌ ಸೋರಿಕೆಯಾಗಿ ಹೆದ್ದಾರಿಯ ತುಂಬೆಲ್ಲಾ ಹರಡಿಕೊಂಡಿತ್ತು. ಇದರ ಅರಿವಿಗೆ ಬಾರದ ಬೈಕ್‌ ಸವಾರರು ವೇಗದಲ್ಲಿ ಬಂದು ಬ್ರೇಕ್‌ ಅದುಮಿದ ವೇಳೆ ಸ್ಕಿಡ್‌ ಆಗಿ ಬೀಳುತ್ತಿದ್ದರು. ಕೇವಲ 4-5 ನಿಮಿಷದಲ್ಲಿ ನಾಲ್ವರು ಬೈಕ್‌ ಸವಾರರು ಸ್ಕಿಡ್‌ ಆಗಿ ಬಿದ್ದು ಸಣ್ಣ-ಪುಟ್ಟಗಾಯಗೊಂಡಿದ್ದಾರೆ.

ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು..!

ಘಟನೆಯ ತೀವ್ರತೆಯನ್ನು ಅರಿತ ಸ್ಥಳೀಯರು ಕೆಲಹೊತ್ತು ಸ್ಥಳದಲ್ಲೇ ನಿಂತು ವೇಗವಾಗಿ ಬರುತ್ತಿದ್ದ ವಾಹನಗಳನ್ನು ಮೆಲ್ಲಗೆ ಬರುವಂತೆ ಸೂಚನೆ ನೀಡುವ ಮೂಲಕ ಆಗಬಹುದಾದ ಹೆಚ್ಚಿನ ಅನಾಹುತಗಳನ್ನು ತಪ್ಪಿಸಿದ್ದಾರೆ. ಅಲ್ಲದೇ ಹೆದ್ದಾರಿ ಗುತ್ತಿಗೆ ಕಂಪನಿ ಮತ್ತು ಕುಂದಾಪುರ ಸಂಚಾರಿ ಠಾಣೆಗೆ ಮಾಹಿತಿ ನೀಡಿದ್ದಾರೆ.