Asianet Suvarna News Asianet Suvarna News

ರಾಜ್ಯದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆ ಉಡುಪಿ, ಅತ್ಯಂತ ಕಡಿಮೆ ಬೆ. ಗ್ರಾಮಾಂತರ

ರಾಜ್ಯದಲ್ಲಿ ಇತ್ತೀಚೆಗೆ ನಡೆದ 2023 ರ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ  ನಂತರ ಪ್ರಕಟಿಸಲಾದ ಅಂತಿಮ  ಮತದಾರರ ಪಟ್ಟಿ ಪ್ರಕಾರ, ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಅತ್ಯಂತ ಕಡಿಮೆ ಮಹಿಳಾ ಮತದಾರರಿದ್ದಾರೆ.

Udupi district has highest number of female voters in Karnataka gow
Author
First Published Jan 9, 2023, 5:34 PM IST

ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಜ.9): ರಾಜ್ಯದಲ್ಲಿ ಇತ್ತೀಚೆಗೆ ನಡೆದ 2023 ರ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ  ನಂತರ ಪ್ರಕಟಿಸಲಾದ ಅಂತಿಮ  ಮತದಾರರ ಪಟ್ಟಿ ಪ್ರಕಾರ, ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ ಅತ್ಯಂತ ಕಡಿಮೆ ಮಹಿಳಾ ಮತದಾರರಿದ್ದಾರೆ. ಈ ಕುರಿತು  ರಾಜ್ಯ ಮುಖ್ಯ ಚುನಾವಣಾ ಆಯುಕ್ತರು  ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ  ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ   ನಂತರ ರಾಜ್ಯದಲ್ಲಿ ಒಟ್ಟು 5,05,48,553  ಮತದಾರರಿದ್ದು,  2,54,49,725 ಪುರುಷ ಮತ್ತು 2,50,94,326 ಮಹಿಳಾ ಮತದಾರರಿದ್ದು, ಮಹಿಳೆಯರಿಗೆ ಹೋಲಿಸಿದರೆ ಪುರುಷ ಮತದಾರರು ಅಧಿಕವಾಗಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿನ ಒಟ್ಟು 10,16,245 ಮತದಾರರಲ್ಲಿ 4,90,060 ಪುರುಷರು ಮತ್ತು 5,26,173 ಮಹಿಳಾ ಮತದಾರರು ಮತ್ತು 12 ಲಿಂಗತ್ವ ಅಲ್ಪ ಸಂಖ್ಯಾತರಿದ್ದಾರೆ.

ಉಡುಪಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಪರಿಶೀಲಿಸಿದ್ದಲ್ಲಿ , ಬೈಂದೂರಿನ ಒಟ್ಟು, 2,29,550 ಮತದಾರರಲ್ಲಿ 1,12,126 ಪುರುಷರು ಮತ್ತು 1,17,421 ಮಹಿಳಾ ಮತದಾರರು , ಕುಂದಾಪುರದ ಒಟ್ಟು,     2,04,525 ಮತದಾರರಲ್ಲಿ 98,224 ಪುರುಷರು ಮತ್ತು 1,06,298 ಮಹಿಳಾ ಮತದಾರರು , ಉಡುಪಿಯ ಒಟ್ಟು 2,11,631 ಮತದಾರರಲ್ಲಿ 1,02,192 ಪುರುಷರು ಮತ್ತು 1,09,439 ಮಹಿಳಾ ಮತದಾರರು , ಕಾಪು ವಿನ ಒಟ್ಟು 1,84,088 ಮತದಾರರಲ್ಲಿ 88,114 ಪುರುಷರು ಮತ್ತು 95,968 ಮಹಿಳಾ ಮತದಾರರು , ಕಾರ್ಕಳದ ಒಟ್ಟು 1,86,451 ಮತದಾರರಲ್ಲಿ 89,404 ಪುರುಷರು ಮತ್ತು 97,047 ಮಹಿಳಾ ಮತದಾರರಿದ್ದು,  ಎಲ್ಲಾ ಕ್ಷೇತ್ರಗಳಲ್ಲೂ ಮಹಿಳಾ ಮತದಾರರ ಸಂಖ್ಯೆ ಪುರುಷ ಮತದಾರರಿಗಿಂತ ಅಧಿಕವಾಗಿದೆ.

 

Assembly election: ಮತದಾರರ ಪಟ್ಟಿ ಪರಿಷ್ಕರಣೆ ಕೇಂದ್ರ ಚುನಾವಣಾ ಆಯೋಗದಿಂದಲೇ ಉಸ್ತುವಾರಿ

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ  ಅವಧಿಯಲ್ಲಿ 13816 ಯುವ ಮತದಾರರು ನೊಂದಣಿಯಾಗಿದ್ದು ,ಇದರಲ್ಲೂ ಸಹ ಯುವತಿಯರ  ನೊಂದಣಿ ಸಂಖ್ಯೆ ಅಧಿಕವಾಗಿದೆ. ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಯುವ ಮತದಾರರ ಸೇರ್ಪಡೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ವಿಶೇಷ ನೊಂದಣಿ ಆಭಿಯಾನ ನಡೆಸಲಾಗಿದೆ.

 

ಮಹಿಳಾ ಮತದಾರರ ಮೇಲೆ ಕಣ್ಣು..! ಹೊಸ ಸಂಚಲನ ಸೃಷ್ಟಿ

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಸ್ವಯಂ ಪ್ರೇರಣೆಯುಂದ ನೊಂದಣಿ ಮತ್ತು ತಿದ್ದುಪಡಿಗೆ ಅರ್ಜಿಗಳನ್ನು ಸಲ್ಲಿಸಿದ್ದು, ಎಲ್ಲಾ ಅರ್ಜಿಗಳನ್ನು  ಯಾವುದೇ ಆಕ್ಷೇಪಗಳಿಗೆ ಅವಕಾಶವಿಲ್ಲದಂತೆ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವುದರಿಂದ ಜಿಲ್ಲೆಯು ರಾಜ್ಯಕ್ಕೇ ಮಾದರಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದ್ದಾರೆ.

Follow Us:
Download App:
  • android
  • ios