Asianet Suvarna News Asianet Suvarna News

ಮಹಿಳಾ ಮತದಾರರ ಮೇಲೆ ಕಣ್ಣು..! ಹೊಸ ಸಂಚಲನ ಸೃಷ್ಟಿ

ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ದೃಷ್ಟಿನೆಟ್ಟಿರುವ ಕದಲೂರು ಉದಯ್‌ ಕ್ಷೇತ್ರದ ಮಹಿಳಾ ಮತದಾರರನ್ನೇ ಗುರಿಯಾಗಿಸಿಕೊಂಡು ಮತಬೇಟೆಗೆ ಹೊರಟಿದ್ದಾರೆ. ಅವರಿಗೆ ಸಂಕ್ರಾಂತಿ ಉಡುಗೊರೆಯಾಗಿ ಸೀರೆಗಳನ್ನು ವಿತರಿಸುವುದರೊಂದಿಗೆ ಚುನಾವಣಾ ಪೂರ್ವ ಕಾರ್ಯಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ.

Eyes on women voters  Creating a new movement snr
Author
First Published Jan 6, 2023, 6:09 AM IST

 ಎಚ್‌.ಜಿ.ರವಿಕುಮಾರ್‌

  ಮದ್ದೂರು (ಜ. 06):  ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ದೃಷ್ಟಿನೆಟ್ಟಿರುವ ಕದಲೂರು ಉದಯ್‌ ಕ್ಷೇತ್ರದ ಮಹಿಳಾ ಮತದಾರರನ್ನೇ ಗುರಿಯಾಗಿಸಿಕೊಂಡು ಮತಬೇಟೆಗೆ ಹೊರಟಿದ್ದಾರೆ. ಅವರಿಗೆ ಸಂಕ್ರಾಂತಿ ಉಡುಗೊರೆಯಾಗಿ ಸೀರೆಗಳನ್ನು ವಿತರಿಸುವುದರೊಂದಿಗೆ ಚುನಾವಣಾ ಪೂರ್ವ ಕಾರ್ಯಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ.

ಉದಯಯಾನ ಮೂಲಕ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ರಾಜಕೀಯ ಸಂಚಲನ ಸೃಷ್ಟಿಸಿದ್ದ ಕದಲೂರು ಉದಯ್‌, ಇದೀಗ ಸೀರೆ ವಿತರಣೆ ಮಾಡುವುದರೊಂದಿಗೆ ಮತ್ತೊಂದು ರೀತಿಯಲ್ಲಿ ಕ್ಷೇತ್ರದೊಳಗೆ ತಮ್ಮ ಪರವಾದ ಅಲೆ ಎಬ್ಬಿಸುತ್ತಿದ್ದಾರೆ. ಆ ಮೂಲಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಈಗಾಗಲೇ ಉದಯಯಾನ ಕಾರ್ಯಕ್ರಮದ ಮೂಲಕ ಕ್ಷೇತ್ರದ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇದೀಗ ಸೀರೆ ವಿತರಣೆಯೊಂದಿಗೆ ಮಹಿಳಾ ಮತದಾರರ ಮತಬ್ಯಾಂಕ್‌ ಸೃಷ್ಟಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಮಹಿಳಾ ಮತದಾರರ ಓಟುಗಳು ತಮ್ಮ ಪರವಾಗಿ ಹರಿದುಬರುವಂತೆ ಮಾಡಲು ತೀವ್ರ ಕಸರತ್ತು ನಡೆಸಿದ್ದಾರೆ.

ಬಿಜೆಪಿಯಿಂದ ಟಿಕೆಟ್‌ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕದಲೂರು ಉದಯ್‌ ಅವರಿಗೆ ನಿರಾಸೆಯಾಗಿದೆ. ಬಿಜೆಪಿ ಟಿಕೆಟ್‌ ಎಸ್‌.ಪಿ.ಸ್ವಾಮಿ ಅವರಿಗೆ ಘೋಷಣೆಯಾಗಿರುವುದರಿಂದ ಕಾಂಗ್ರೆಸ್‌ನತ್ತ ಉದಯ್‌ ದೃಷ್ಟಿಹರಿಸಿದ್ದಾರೆ. ಆದರೆ, ಉದಯ್‌ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಪಕ್ಷದ ನಾಯಕರು ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ಉದಯ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಅಖಾಡ ಪ್ರವೇಶಿಸುವುದಕ್ಕೆ ಸಿದ್ಧತೆ ನಡೆಸುತ್ತಿರುವಂತೆ ಕಂಡುಬರುತ್ತಿದೆ.

ಕದಲೂರು ಉದಯ್‌ ಅವರನ್ನು ಸಮಾಧಾನಪಡಿಸಿ ಮುಂಬರುವ ಚುನಾವಣೆಯಲ್ಲಿ ಎಸ್‌.ಪಿ.ಸ್ವಾಮಿ ಪರ ಕೆಲಸ ಮಾಡುವಂತೆ ಮನವೊಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆದಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದಕ್ಕೆ ಉದಯ್‌ ಅವರು ಒಪ್ಪದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿರುವುದು ಬಿಜೆಪಿಯವರಿಗೆ ತಲೆಬಿಸಿ ಉಂಟುಮಾಡಿದೆ. ಎಸ್‌.ಪಿ.ಸ್ವಾಮಿ, ಕದಲೂರು ಉದಯ್‌ ಒಗ್ಗೂಡಿದರೆ ಮದ್ದೂರು ವಿಧಾನಸಭಾ ಕ್ಷೇತ್ರವನ್ನು ಗೆಲ್ಲಬಹುದೆಂಬ ಆಸೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಆದರೆ, ಕ್ಷೇತ್ರ ತ್ಯಾಗಕ್ಕೆ ಇಬ್ಬರೂ ಒಪ್ಪಿಗೆ ಸೂಚಿಸದೆ ಪ್ರತ್ಯೇಕ ಹಾದಿ ಹಿಡಿದಿದ್ದಾರೆ.

ಪ್ರಸ್ತುತ ಉದಯ್‌ ಅವರು ಯಾರನ್ನೂ ಆಶ್ರಯಿಸದೆ ಚುನಾವಣೆಯಲ್ಲಿ ಸ್ಪರ್ಧಿಸುವ ಸ್ಪಷ್ಟಗುರಿಯೊಂದಿಗೆ ಸ್ವತಂತ್ರವಾಗಿ ಕಾರ್ಯ ಚಟುವಟಿಕೆಗಳನ್ನು ಬಿರುಸುಗೊಳಿಸುತ್ತಿದ್ದಾರೆ. ಮೊದಲ ಹಂತದಲ್ಲಿ ಮಹಿಳೆಯರಿಗೆ ಸೀರೆಗಳನ್ನು ವಿತರಿಸುವುದರೊಂದಿಗೆ ಆಕರ್ಷಿಸುವುದಕ್ಕೆ ಮುಂದಾಗಿದ್ದಾರೆ. ಪ್ರತಿ ಮನೆ ಮನೆಗೂ ತೆರಳಿ ಸೀರೆಗಳನ್ನು ವಿತರಿಸುತ್ತಿರುವುದರಿಂದ ಉದಯ್‌ ಕ್ಷೇತ್ರದ ಮತದಾರರಿಗೆ ಹತ್ತಿರವಾಗುವುದಕ್ಕೆ ಹೊರಟಿದ್ದಾರೆ. ಪತಿಯ ರಾಜಕೀಯ ಬೆಳವಣಿಗೆಗೆ ಅವರ ಪತ್ನಿಯೂ ಸಾಥ್‌ ನೀಡಿದ್ದಾರೆ.

ಕ್ಷೇತ್ರದೊಳಗೆ ತಮ್ಮದೇ ಯುವಕರ ತಂಡವನ್ನು ಕಟ್ಟಿಕೊಂಡು ಅವರೊಂದಿಗೆ ಸಂಚರಿಸುತ್ತಾ ಮನೆ ಮನೆಗೂ ಸೀರೆಗಳನ್ನು ತಲುಪಿಸುತ್ತಿದ್ದಾರೆ. ಉದಯ್‌ ಅವರ ಸಂಕ್ರಾಂತಿ ಉಡುಗೊರೆ ಹೊಸತೊಂದು ರೀತಿಯಲ್ಲಿ ಮದ್ದೂರು ಕ್ಷೇತ್ರದೊಳಗೆ ಸಂಚಲನ ಸೃಷ್ಟಿಸಲಾರಂಭಿಸಿದ್ದು, ಹೊಸ ರಾಜಕೀಯ ಬೆಳವಣಿಗೆಗೂ ಕಾರಣವಾಗುತ್ತಿದೆ ಎನ್ನಲಾಗಿದೆ.

ಶೆಟ್ಟರ್ ಕಿಡಿ

ಹುಬ್ಬಳ್ಳಿ (ಜ.04): ಕಾಂಗ್ರೆಸ್‌ಗೆ ಮಹದಾಯಿ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ.‌ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಚುನಾವಣೆಗಾಗಿ ಈ ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿವೇಶನದಲ್ಲಿ ಮಹದಾಯಿ ಬಗ್ಗೆ ಒಂದು ಶಬ್ದನ್ನೂ ಮಾತಾಡಿಲ್ಲ. ಎಲ್ಲಿ ಮಾತಾಡಬೇಕು ಅಲ್ಲಿ ಮಾತಾಡೋದು ಬಿಟ್ಟು, ಇಲ್ಲಿ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ್ದಾರೆ‌.

ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಧಿನಾಯಕಿ ಸೋನಿಯಾ ಗಾಂಧಿ ಕರ್ನಾಟಕಕ್ಕೆ ಒಂದು ಹನಿ ನೀರು ಕೊಡಲ್ಲಾ ಅಂದಿದ್ರು. ಸೋನಿಯಾ ಗಾಂಧಿ ಮಾತು ಮೀರಿ ಹೋರಾಡ್ತೀರಾ‌..? ಕಾಂಗ್ರೆಸ್ ಕರ್ನಾಟಕದ ಹಿತಾಸಕ್ತಿಯ ಬಗ್ಗೆ ಒಮ್ಮೆಯೂ ಹೋರಾಡಿಲ್ಲ. ಮಹದಾಯಿ ಹೋರಾಟಗಾರರು, ರೈತರ ಮೇಲೆ ಲಾಠಿ ಚಾರ್ಜ್‌ ಮಾಡಿಸಿದ್ದ ಕಾಂಗ್ರೆಸ್. ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ನೀರಾವರಿ ಯೋಜನೆ ಜಾರಿ ಮಾಡ್ತೀವಿ ಅಂದಿದ್ದಾರೆ ಸಿದ್ದರಾಮಯ್ಯ. ಯಾವನ್ರೀ ಇವಾ..? ಎಂದು ಸಿದ್ದರಾಮಯ್ಯ ವಿರುದ್ಧ ಶೆಟ್ಟರ್ ಆಕ್ರೋಶ ಹೊರಹಾಕಿದ್ದಾರೆ‌

ಇವರು ಸುಳ್ಳುಗಾರರು, ಇವರನ್ನು ಜನ ನಂಬಲ್ಲ. ನ್ಯಾಯಾಧಿಕರಣದಲ್ಲಿ ನಮ್ಮ ಪರ ಆದೇಶ ಬಂದಿದ್ದು, ಯೋಜನೆ ಜಾರಿ ಮಾಡುತ್ತೇವೆ. ಗೋವಾದವರು ಯಾವುದೇ ತಕರಾರು ಮಾಡಿದ್ರೂ ಪ್ರಯೋಜನವಿಲ್ಲ. ವಿಪಕ್ಷಗಳು ರಚನಾತ್ಮಕ ಸಲಹೆ, ಸಹಕಾರ ಕೊಡಲಿ.ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನಾಟಕವನ್ನು ಜನರು ನಂಬಲ್ಲ ಎಂದು ಅವರು ಹೇಳಿದರು.

Follow Us:
Download App:
  • android
  • ios