ಬೀದರ್‌ ಲೋಕ​ಸಭಾ ಕ್ಷೇತ್ರ​ದ 8 ವಿಧಾ​ನ​ಸಭಾ ಕ್ಷೇತ್ರ​ಗ​ಳಲ್ಲಿ ಕಮಲ ಅರ​ಳಿ​ಸು​ವಲ್ಲಿ ಹರ​ಸಾ​ಹಸಪಡು​ತ್ತಿ​ರುವ ಬಿಜೆಪಿ ಪಾಳಯ ಇದೀಗ ಪ್ರಧಾನಿ ನರೇಂದ್ರ ಮೋದಿ ಅವ​ರನ್ನು ಜಿಲ್ಲೆಗೆ ಆಹ್ವಾ​ನಿಸಿ ಸಮಾ​ವೇ​ಶಕ್ಕೆ ಮುಂದಾ​ಗುವ ಮೂಲಕ ಮತ​ದಾ​ರರ ಮನ ಸೆಳೆ​ಯು​ವತ್ತ ಹೆಜ್ಜೆ ಇಟ್ಟಿ​ದೆ.

ಬೀದರ್‌/ಹುಮ​ನಾ​ಬಾ​ದ್‌ (ಏ.29): ಬೀದರ್‌ ಲೋಕ​ಸಭಾ ಕ್ಷೇತ್ರ​ದ 8 ವಿಧಾ​ನ​ಸಭಾ ಕ್ಷೇತ್ರ​ಗ​ಳಲ್ಲಿ ಕಮಲ ಅರ​ಳಿ​ಸು​ವಲ್ಲಿ ಹರ​ಸಾ​ಹಸಪಡು​ತ್ತಿ​ರುವ ಬಿಜೆಪಿ ಪಾಳಯ ಇದೀಗ ಪ್ರಧಾನಿ ನರೇಂದ್ರ ಮೋದಿ ಅವ​ರನ್ನು ಜಿಲ್ಲೆಗೆ ಆಹ್ವಾ​ನಿಸಿ ಸಮಾ​ವೇ​ಶಕ್ಕೆ ಮುಂದಾ​ಗುವ ಮೂಲಕ ಮತ​ದಾ​ರರ ಮನ ಸೆಳೆ​ಯು​ವತ್ತ ಹೆಜ್ಜೆ ಇಟ್ಟಿ​ದೆ.

ಜಿಲ್ಲೆಯ 6 ವಿಧಾ​ನ​ಸಭಾ ಕ್ಷೇತ್ರ​ಗ​ಳಲ್ಲಿ ಟಿಕೆಟ್‌ ವಂಚಿ​ತರ ಬಂಡಾಯ, ಪಕ್ಷ ನಾಯ​ಕ​ರ​ಲ್ಲಿನ ಒಡಕು, ಕಾರ್ಯ​ಕ​ರ್ತ​ರಲ್ಲಿ ಸೃಷ್ಟಿ​ಯಾ​ಗಿ​ರುವ ಗೊಂದ​ಲ ಅಭ್ಯ​ರ್ಥಿ​ಗ​ಳನ್ನು ನಿದ್ದೆ​ಗೆ​ಡಿ​ಸಿದ್ದು, ಇದೆ​ಲ್ಲ​ವನ್ನೂ ಮೀರಿ ಜಯದ ಬೆನ್ನೇರಿ ಸಾಗಲು ಮೋದಿ(Narendra Modi) ಪಕ್ಷದ ಪ್ರಮುಖ ಅಸ್ತ್ರವಾಗಿ​ದ್ದಾರೆ.

ಮೋದಿ ಆಗ​ಮ​ನ​ದಿಂದ ಎಲ್ಲ ಕ್ಷೇತ್ರ​ಗ​ಳಲ್ಲಿ ಪರಿ​ಣಾಮ ಬೀರ​ಬ​ಹು​ದೇನೋ ಆದ​ರೆ ಸ್ಥಳೀ​ಯ​ವಾಗಿ ಹುಮ​ನಾ​ಬಾ​ದ್‌ ಬಿಜೆಪಿ ಅಭ್ಯರ್ಥಿ ಡಾ. ಸಿದ್ದು ಪಾಟೀಲ್‌, ಬೀದರ್‌ ದಕ್ಷಿಣ ಕ್ಷೇತ್ರದ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಬಸ​ವ​ಕ​ಲ್ಯಾಣ ಶಾಸಕ ಶರಣು ಸಲ​ಗ​ರ ಪರ ಮತ​ದಾ​ರರ ಒಲವು ಹೆಚ್ಚಾಗಿ ಹರಿ​ಯುವ ಸಾಧ್ಯ​ತೆ​ಯನ್ನು ಅಲ್ಲ​ಗ​ಳೆ​ಯು​ವಂತಿ​ಲ್ಲ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಕೇಂದ್ರ ಮಂತ್ರಿಗಳು, ರಾಜ್ಯದ ಮುಖ್ಯ​ಮಂತ್ರಿ, ಮಂತ್ರಿ ಆಯ್ತು ಇದೀಗ ಪ್ರಧಾ​ನಿಯೇ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಸುಮಾರು 3ಲಕ್ಷ ಜನ​ರನ್ನು ಸೇರಿ​ಸುವ ಪ್ರಯ​ತ್ನಕ್ಕೆ ಬಿಜೆಪಿ ಇಳಿ​ದಿ​ದೆ.

ಪ್ರಧಾನಿ ನರೇಂದ್ರ ಮೋದಿ ಅವ​ರ ಕಾರ್ಯ​ಕ್ರ​ಮ​ಕ್ಕಾಗಿ ಬೃಹತ್‌ ಗಾತ್ರದ ವೇದಿಕೆ ನಿರ್ಮಾಣ ಮಾಡಲಾಗಿದೆ. ವೇದಿಕೆಯ ಸುತ್ತಲೂ ಪಕ್ಷದ ಬಾವುಟ ಸಿಂಗಾರಗೊಂಡಿದ್ದು, ಇಂದು (ಶನಿ​ವಾರ) 11ಕ್ಕೆ ಆಗ​ಮಿ​ಸಿರುವ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತಿಸಲಾಗಿದೆ.

ಸುಮಾರು 20 ಎಕರೆ ಪ್ರದೇ​ಶ​ದಲ್ಲಿ ಸಮಾ​ವೇಶ ಆಯೋ​ಜಿ​ಸಿದ್ದು, ಮಳೆಯ ಸಂಭವದ ಹಿನ್ನೆಲೆಯಲ್ಲಿ ಯಾವುದೇ ಅಡತಡೆಯಾಗದಂತೆ ವಾಟರ್‌ ಪ್ರೂಫ್‌ ಮೇಲ್ಛಾವಣೆ ನಿರ್ಮಿಸಲಾಗಿದ್ದು, ಒಂದು ಲಕ್ಷ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ, ಇನ್ನೂ ಎರಡು ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದ್ದು, ವೇದಿಕೆ ಅಕ್ಕಪಕ್ಕದಲ್ಲಿಯೂ ನಿಂತು ಕಾರ್ಯಕ್ರಮ ವೀಕ್ಷಣೆಗೆ ಸೌಲಭ್ಯ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಕೇಂದ್ರ ಹಾಗೂ ರಾಜ್ಯದ ಗಣ್ಯರು ಹಾಗೂ ಅಭ್ಯರ್ಥಿಗಳ ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರ ವಾಹನ ನೀಲುಗಡೆಗೆ ವೇದಿಕೆಯಿಂದ ಅರ್ಧ ಕಿ.ಮೀ ಅಂತರದಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ಆಂಬ್ಯುಲೆನ್ಸ್‌ ವ್ಯವಸ್ಥೆ, ಗಣ್ಯರ ಭೋಜನಕ್ಕೆ, ಪ್ರಧಾನಿ ಮೋದಿಯ ಅಂಗ ರಕ್ಷಕರಿಗೆ ಸೇರಿದಂತೆ ಪ್ರತ್ಯೇಕ ಟೆಂಟ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಭದ್ರತಾ ದೃಷ್ಠಿಯಿಂದ ಮಾರ್ಗದ ಎರಡೂ ಬದಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಹುಮನಾಬಾದ್‌ ಪಟ್ಟಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಕೇಂದ್ರ ಭದ್ರತಾ ಪಡೆ ಅಧಿಕಾರಿಗಳು ಈಗಾಗಲೇ ವೇದಿಕೆ ಹತ್ತಿರ ಯಾರೂ ಅನ್ಯವ್ಯಕ್ತಿಗಳು ಬಾರದಂತೆ ಠಿಕಾಣಿ ಹೂಡಿದ್ದಾರೆ.

ಬಸ್‌ ಸಂಚಾರ ಮಾರ್ಗ ಬದಲು :

ಬೀದರ್‌ ಹಾಗೂ ಭಾಲ್ಕಿ ಸೇರಿದಂತೆ ಈ ಮಾರ್ಗದಲ್ಲಿ ಸಂಚರಿಸುವ ಬಸ್ಸಗಳು ಶನಿವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾರ್ಗ ಬದಲಾಯಿಸಿ, ಹುಡಗಿ, ನಂದಗಾಂವ್‌ ಮಾರ್ಗವಾಗಿ ಸಂಚರಿಸಲಿವೆ ಎಂದು ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj bommai), ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ(BS Yadiyurappa), ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌, ಕೇಂದ್ರ ಸಚಿವ ಮನ್ಸುಕ್‌ ಮಾಂಡವಿಯ, ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ್‌, ವಿಧಾನ ಪರಿಷತ್‌ ಸದಸ್ಯರು, ಬೀದರ್‌ ಲೋಕ​ಸಭಾ ಕ್ಷೇತ್ರ​ದ 8 ವಿಧಾ​ನ​ಸಭಾ ಕ್ಷೇತ್ರಗಳ ಪಕ್ಷದ ಅಭ್ಯರ್ಥಿಗಳು ಸೇರಿದಂತೆ ಪಕ್ಷದ ಅನೇಕ ಗಣ್ಯರು ಭಾಗವಹಿಸಿದ್ದಾರೆ.