ಕಿಮ್ಮನೆ V/S ಮಂಜುನಾಥ್ ಗೌಡ : ತೀರ್ಥಹಳ್ಳಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಫೈಟ್

  • ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಎರಡು ವರ್ಷ ಬಾಕಿ ಇದ್ದರು ಈಗಲೇ ವಿವಿಧ ಪಕ್ಷಗಳಲ್ಲಿ  ಟಿಕೆಟ್ ಪೈಪೋಟಿ 
  •  ಕಾಂಗ್ರೆಸ್‌ನಲ್ಲಿಯು ಟಿಕೆಟ್‌ಗಾಗಿ ಜಟಾಪಟಿ ಜೋರಾಗಿಯೇ ಇದೆ. ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ಇಬ್ಬರು ಪ್ರಭಾವಿ ಮುಖಂಡರ ನಡುವೆ ಜಿದ್ದಾ ಜಿದ್ದಿ 
Ticket Fight Between Kimmane ratnakar and Manjunath gowda in Thirthahalli snr

ಬೆಂಗಳೂರು (ನ.10): ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ (Assembly Election) ಎರಡು ವರ್ಷ ಬಾಕಿ ಇದ್ದರು ಈಗಲೇ ವಿವಿಧ ಪಕ್ಷಗಳಲ್ಲಿ  ಟಿಕೆಟ್ ಪೈಪೋಟಿ (Ticket Fight) ಆರಂಭವಾಗಿದೆ. ಇತ್ತ ಕಾಂಗ್ರೆಸ್‌ನಲ್ಲಿಯು (Congress) ಟಿಕೆಟ್‌ಗಾಗಿ ಜಟಾಪಟಿ ಜೋರಾಗಿಯೇ ಇದೆ. ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗಾಗಿ ಇಬ್ಬರು ಪ್ರಭಾವಿ ಮುಖಂಡರ ನಡುವೆ ಜಿದ್ದಾ ಜಿದ್ದಿ ಏರ್ಪಟ್ಟಿದ್ದೆ. 

ಒಂದು ಕಡೆ ಜೆಡಿಎಸ್ (JDS) ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಆಕಾಂಕ್ಷಿಯಾಗಿರುವ ಮಂಜುನಾಥ್ ಗೌಡ (Manjunath Gowda) ಆದರೆ ಇನ್ನೊಂದು ಕಡೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ (Kimmane Rathnakar) ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಟಿಕೆಟ್‌ಗಾಗಿ ಈಗಲೇ ಇಬ್ಬರ ನಡುವೆ ಪೈಪೋಟಿ ಕಂಡು ಬಂದಿದ್ದು ಇದು ಕೆಪಿಸಿಸಿ (KPCC) ಮಟ್ಟಕ್ಕೂ ತಲುಪಿದೆ. 

ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಕಿಮ್ಮನೆ ವರ್ಸಸ್ ಮಂಜುನಾಥ್ ಗೌಡ ಎನ್ನುವಂತಾಗಿದ್ದು, ಇದೀಗ ಕಿಮ್ಮನೆ ಹಾಗು ಮಂಜುನಾಥ್ ಗೌಡ ಬಣಗಳೆರಡು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿವೆ. 

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಕಾಂಗ್ರೆಸ್ ನಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಬಹಿರಂಗ ಹೇಳಿಕೆಯನ್ನೇ ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಹಿರಂಗವಾಗಿ ಮಾತನಾಡಲ್ಲ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಮ್ಮ ಪಕ್ಷದಲ್ಲಿ ಅಭಿಪ್ರಾಯ ಹೇಳಲು ಅವಕಾಶವಿದೆ. ಬಿಜೆಪಿಯಲ್ಲಿ (BJP) ಈ ರೀತಿಯ ಅವಕಾಶವಿಲ್ಲ. ಅಲ್ಲಿ ಮೋದಿ ಎದುರು ಸಂಸದರು ಮಾತನಾಡಲು ಹೇಳುತ್ತಾರೆ ಎಂದರು.

ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಇರಬೇಕು. ಅದು ಪ್ರಜಾಪ್ರಭುತ್ವವನ್ನ ತೋರಿಸುತ್ತದೆ. ಅಭಿಪ್ರಾಯಗಳನ್ನ ಹತ್ತಿಕ್ಕುವ ಪ್ರಯತ್ನ ಮಾಡಬಾರದು. ಮುಂದಿನ ಚುನಾವಣೆಗೆ ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದನ್ನ ಜನರಿಗೆ ಈಗಲೇ ಹೇಳಲು ಸಾಧ್ಯವಿಲ್ಲ. ಯಾವ ಪಕ್ಷದವರಿಗೂ ಅಭ್ಯರ್ಥಿ ಬಗ್ಗೆ ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವೇ..?ಪಕ್ಷದ ತೀರ್ಮಾನದಂತೆ ನಡೆದುಕೊಳ್ಳಬೇಕಾಗುತ್ತೆ. ನಾನು ಪಕ್ಷದ ಅಧ್ಯಕ್ಷರಿಗೆ ಪತ್ರ ಕಠೋರ ಶಬ್ದಗಳಲ್ಲಿ ಪತ್ರ ಬರೆದಿದ್ದು ಆಂತರಿಕವಾಗಿಯೇ.  ಪತ್ರವನ್ನ ಬಹಿರಂಗ ಪಡಿಸಿರುವುದು ನಾನಲ್ಲ. ನನಗೆ ನನ್ನ ಅಭಿಪ್ರಾಯ ತಿಳಿಸಲು ಅವಕಾಶವಿದೆ ಎಂದು ಮಂಜುನಾತ್ ಗೌಡ ಹಾಗು ತಮ್ಮ ನಡುವಿನ ಅಸಮಾಧಾನದ ಬಗ್ಗೆ ಸುಳಿವು ನೀಡಿದರು. 

2013ರ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿದ್ದ ಮಂಜುನಾಥ್ ಗೌಡ ವಿರುದ್ಧ 1300 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ಕಿಮ್ಮನೆ ಇದೀಗ ಮತ್ತೆ ಟಿಕೆಟ್ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿಯೇ ತಿಳಿಸಿದ್ದಾರೆ. 

 ಮಂಜುನಾಥ ಗೌಡ  ಪ್ರತಿಕ್ರಿಯೆ :  ಸಹಕಾರಿ ಧುರೀಣ, ರಾಜ್ಯ ಅಪೆಕ್ಸ್‌ ಬ್ಯಾಂಕ್‌ (Bank) ಮಾಜಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಜೆಡಿಎಸ್‌ ಅಧ್ಯಕ್ಷರಾಗಿದ್ದ  ಮಂಜುನಾಥ್ ಗೌಡ ಕಳೆದ ಏಪ್ರಿಲ್ ತಿಂಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇವರೂ ತೀರ್ಥಹಳ್ಳಿ ಕ್ಷೇತ್ರದಿಂದ ಕಾಂಗ್ರೆಟ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.  

ಕ್ಷೇತ್ರದಲ್ಲಿ ಆಕಾಂಕ್ಷಿಗಳು ಸಾಕಷ್ಟು ಜನ ಇದ್ದಾರೆ. ಆಕಾಂಕ್ಷಿಗಳು ಎಲ್ಲಾ ಅಭ್ಯರ್ಥಿ ಆಗಲು ಸಾಧ್ಯವಿಲ್ಲ. ನಾನು ಕೂಡ ಟಿಕೆಟ್ ನ ಪ್ರಬಲ  ಆಕಾಂಕ್ಷಿ. ಟಿಕೆಟ್ ಯಾರಿಗೆ ಕೊಡಬೇಕು ಎಂದು ತೀರ್ಥಹಳ್ಳಿಯಲ್ಲಿ ತೀರ್ಮಾನ ಆಗಲ್ಲ. ಕೆಪಿಸಿಸಿ ಮಟ್ಟದಲ್ಲಿ ತೀರ್ಮಾನ ಆಗುತ್ತದೆ ಎಂದು ಕಿಮ್ಮನೆಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಟಿಕೆಟ್ ವಿಚಾರವಾಗಿ ಕೆಪಿಸಿಸಿಯಲ್ಲಿ ಬಗೆಹರಿಯದಿದ್ದಲ್ಲಿ ಎಐಸಿಸಿ (AICC) ಮಟ್ಟದಲ್ಲಿ ತೀರ್ಮಾನ ಆಗುತ್ತದೆ. ನನ್ನ ನಾಯಕರು ಡಿಕೆ ಶಿವಕುಮಾರ್ ಅವರು ಹೇಳಿದಂತೆ ನಾ‌ನು ಕೇಳುತ್ತೇನೆ.  ಕೆಲವರು ಪತ್ರವನ್ನು ಪ್ರೀತಿಯಿಂದ ಬರೆದಿರಬಹುದು. ಕಠೋರ ಶಬ್ದ ಬಳಸಿರಬಹುದು. ಪ್ರೀತಿ ಮಾಡುವ ವಯಸ್ಸು ಅಲ್ಲ ಎಂದು ಕಿಮ್ಮನೆ ರತ್ನಾಕರ್ ಗೆ ತಿರುಗೇಟು ನೀಡಿದ್ದಾರೆ. 

ಪತ್ರ ಬರೆದಿದ್ದ ಕಿಮ್ಮನೆ

ಕಳೆದೊಂದು ವರ್ಷದಿಂದಲೂ ಜೆಡಿಎಸ್‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವುದಾಗಿ ಹೇಳುತ್ತ, ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದು, ತಮ್ಮದೇ ಗುಂಪಿನೊಡನೆ ತೀರ್ಥಹಳ್ಳಿ ರಾಜಕೀಯದಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಮಂಜುನಾಥ್ ಗೌಡ  ತಮ್ಮ ಬೆಂಬಲಿಗರೊಡನೆ ಸಭೆ ನಡೆಸಿ ಕಾಂಗ್ರೆಸ್‌ ಸೇರುವ ನಿರ್ಧಾರಕ್ಕೆ ಬಂದಿದ್ದರು. 

ತೀರ್ಥಹಳ್ಳಿಯ ಮಾಜಿ ಕಾಂಗ್ರೆಸ್‌ ಶಾಸಕ  ಕಿಮ್ಮನೆ ರತ್ನಾಕರ್‌ ಅವರ ತೀವ್ರ ವಿರೋಧದ ನಡುವೆಯೂ ಕಾಂಗ್ರೆಸ್‌ ಪಕ್ಷಕ್ಕೆ ಮಂಜುನಾಥಗೌಡರ ಎಂಟ್ರಿ ಆಗಿತ್ತು. ಸ್ವತಃ ಡಿ. ಕೆ. ಶಿವಕುಮಾರ್‌ ಅವರೇ ಆಸಕ್ತಿ ವಹಿಸಿ ಮಂಜುನಾಥ ಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು.

ಇವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸುತ್ತಲೇ ಇದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌  ಅಂತಿಮವಾಗಿ ಹೈಕಮಾಂಡ್‌ಗೆ ಪತ್ರವೊಂದನ್ನು ಬರೆದು ಮಂಜುನಾಥಗೌಡರಿಗೆ ಪಕ್ಷದ ನೀತಿ, ಸಿದ್ಧಾಂತದ ಪಾಠ ಹೇಳಿ ಬಳಿಕ ಸೇರಿಸಿಕೊಳ್ಳಿ ಎಂದಿದ್ದರು. ಅವರು ಪಕ್ಷಕ್ಕೆ ಬರಲು ಸ್ವಾಗತವಿದೆ. ಆದರೆ, ಪಕ್ಷದ ಸಿದ್ಧಾಂತಕ್ಕೆ ಅವರು ಬದ್ಧರಾಗಬೇಕು. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಮಾರ್ಗದರ್ಶನ ಮಾಡಬೇಕು. ಈ ಅಂಶಗಳನ್ನು ಅವರಿಗೆ ತಿಳಿಸಿ, ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಕೆಪಿಸಿಸಿಗೆ ಪತ್ರ ಬರೆದಿದ್ದರು.

Latest Videos
Follow Us:
Download App:
  • android
  • ios