Asianet Suvarna News Asianet Suvarna News

ಕಾಂಗ್ರೆಸ್ ತೊರೆದವರಿಗೆ ಡಿಕೆಶಿ ಮತ್ತೆ ಆಹ್ವಾನ : ಆದರೆ ಷರತ್ತು

  • ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಕಾಂಗ್ರೆಸ್‌ಗೆ ಸೇರ್ಪಡೆ ಆಗಬಹುದು
  • ಪಕ್ಷ ತೊರೆದವರೂ ವಾಪಸ್ ಬರಬಹುದು ಎಂದು ಮುಕ್ತ ಆಹ್ವಾನ 
KPCC President DK Shivakumar invites who want to join Congress  snr
Author
Bengaluru, First Published Nov 10, 2021, 11:55 AM IST
  • Facebook
  • Twitter
  • Whatsapp

 ಬೆಂಗಳೂರು (ನ.10): ಪಕ್ಷದ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಕಾಂಗ್ರೆಸ್‌ಗೆ (congress) ಸೇರ್ಪಡೆ ಆಗಬಹುದು. ಪಕ್ಷ ತೊರೆದವರೂ ವಾಪಸ್ ಬರಬಹುದು. 

ಮುಕ್ತ ಆಹ್ವಾನ ನೀಡುತ್ತಿದ್ದು ಅರ್ಜಿ ಹಾಕಿಕೊಳ್ಳಬಹುದು. ಆದರೆ ಷರತ್ತು ಹಾಕುವವರಿಗೆ ಅವಕಾಶವಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Assembly Election) ಟಿಕೆಟ್ ನೀಡಬೇಕು ಎಂದು ಷರತ್ತು ಹಾಕುವವರಿಗಂತೂ ಪ್ರವೇಶವೇ ಇಲ್ಲ. -ಹೀಗೆಂದು ಖಡಕ್ ಆಗಿ ಸಂದೇಶ ನೀಡಿದವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK shivakumar).

 ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರ ದುರ್ಗ ಜಿಲ್ಲೆ ಜಗಳೂರಿನ ಜೆಡಿಎಸ್  (JDS) ಮುಖಂಡ ದೇವೇಂದ್ರಪ್ಪ ಅವರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡ ನಂತರ ತಮ್ಮ ಮನದ ಮಾತನ್ನು ಸ್ಪಷ್ಟವಾಗಿ ಹೊರಹಾಕಿದರು. 

ಪಕ್ಷದ ಸಿದ್ಧಾಂತ ಒಪ್ಪಿ ಬರುವವರಿಗೆ ಮುಕ್ತ ಆಹ್ವಾನವಿದೆ. ಈ ಹಿಂದೆ ಪಕ್ಷ ತೊರೆದವರೂ ವಾಪಸ್ ಬರಬಹುದು. ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಬೇಕು ಎಂಬುದು ಸೇರಿದಂತೆ ಹಲವು ಷರತ್ತು ಹಾಕುವವರಿಗೆ ಪ್ರವೇಶವಿಲ್ಲ. 

ಆಪರೇಷನ್ ಕಮಲಕ್ಕೆ ಒಳಗಾದವರು ಪುನಃ ವಾಪಸ್ ಬರುವುದಾದರೆ ಅರ್ಜಿ ಹಾಕಿಕೊಳ್ಳಲಿ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 2018ರ ವಿಧಾನ ಸಭಾ ಚುನಾವಣೆಯಲ್ಲಿ ಜಗಳೂರಿನ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದೇವೇಂದ್ರಪ್ಪ ಪರಾಭವಗೊಂಡಿದ್ದರು. ಇದೀಗ 60 ಕ್ಕೂ ಅಧಿಕ ಜೆಡಿಎಸ್ ಮುಖಂ ಡರೊಂದಿಗೆ ಕಾಂಗ್ರೆಸ್ ಸೇರಿದರು.  

ಫಲಿತಾಂಶ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸುಳಿವು :  ಹಾನಗಲ್‌ (Hanagal) ಮತ್ತು ಸಿಂದಗಿ ಉಪಚುನಾವಣೆ (Sindagi By election) ಫಲಿತಾಂಶ ಇಡೀ ಬಿಜೆಪಿ (BJP) ಹಾಗೂ ರಾಜ್ಯ ಸರ್ಕಾರಕ್ಕೆ (Karnataka Govt) ಆಗಿರುವ ಮುಖಭಂಗ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆ ಅಷ್ಟೇ ಅಲ್ಲ, ದೇಶದಲ್ಲಿ ಬಿಜೆಪಿಯ (BJP) ವರ್ಚಸ್ಸು ಕುಸಿಯುತ್ತಿರುವ ಸಂಕೇತ ಕೂಡ ಹೌದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (KPCC President DK Shivakumar) ಹೇಳಿದ್ದರು. 

ಉಪಚುನಾವಣೆ ಫಲಿತಾಂಶದ ಬಗ್ಗೆ  ಪ್ರತಿಕ್ರಿಯೆ ನೀಡಿದ ಅವರು, 2018ರ ಚುನಾವಣೆಯಲ್ಲಿ ಹಾನಗಲ್‌ನಲ್ಲಿ ಬಿಜೆಪಿ, ಸಿಂದಗಿಯಲ್ಲಿ ಜೆಡಿಎಸ್‌  (JDS) ಗೆದ್ದಿತ್ತು. ಆದರೆ, ಈಗಿನ ಉಪ ಚುನಾವಣೆಯಲ್ಲಿ ಸಿಂದಗಿಯಲ್ಲಿ ಬಿಜೆಪಿ, ಹಾನಗಲ್‌ನಲ್ಲಿ ಕಾಂಗ್ರೆಸ್‌ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಸಿಂದಗಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ ಈಗ ದುಪ್ಪಟ್ಟು ಮತ ಪ್ರಮಾಣ ಹೆಚ್ಚಿಸಿಕೊಂಡು ಎರಡನೇ ಸ್ಥಾನಕ್ಕೇರಿದೆ. ಇದೆಲ್ಲವನ್ನೂ ನೋಡಿದಾಗ ಜನ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಉತ್ತಮ ಪ್ರದರ್ಶನ ನೀಡಿದ್ದು, ಇದು ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆಯಾಗಿದೆ ಎಂದು ವ್ಯಾಖ್ಯಾನಿಸಿದ್ದರು.

'ಹಾನಗಲ್ ಫಲಿತಾಂಶದ ಕ್ರೆಡಿಟ್‌ಗಾಗಿ ಕಾಂಗ್ರೆಸ್‌ನಲ್ಲಿ ಒಳಜಗಳ'

ಬಿಎಸ್‌ವೈ (BS Yediyurappa) ಕಣ್ಣೀರಲ್ಲಿ ಬಿಜೆಪಿ ಪತನ: ಉಪಚುನಾಣೆ ಫಲಿತಾಂಶ ಕೇವಲ ಮುಖ್ಯಮಂತ್ರಿ ಅವರಿಗೆ ಮಾತ್ರ ಸಂಬಂಧಿಸಿದ್ದಲ್ಲ, ಇಡೀ ಬಿಜೆಪಿ, ಬಿಜೆಪಿ ಸರ್ಕಾರಕ್ಕೆ ಆಗಿರುವ ಮುಖಭಂಗ. 2023ರ ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ (Karnataka Assembly Election) ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದರ ಸ್ಪಷ್ಟಮುನ್ಸೂಚನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ಬಿಜೆಪಿ ಹಾಗೂ ಆ ಪಕ್ಷದ ಸರ್ಕಾರ ಕೊಚ್ಚಿ ಹೋಗಲಿದೆ ಎಂಬ ಈ ಹಿಂದೆ ನಾನು ಹೇಳಿದ್ದ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ ಎಂದು ಶಿವಕುಮಾರ್‌ ಹೇಳಿದ್ದರು.

ನಮ್ಮ ಹೇಳಿಕೆಗಳಿಂದ ಬೇಸರವಾಗಿದ್ರೆ ಕ್ಷಮೆ ಕೇಳ್ತಿನಿ: ಡಿಕೆಶಿ ಮಾತಿನ ಅರ್ಥ ನಿಗೂಢ!

ಶ್ರೀನಿವಾಸ ಮಾನೆ (Shrinivas mane) ಅವರು ಕಳೆದ ಬಾರಿ ಹಾನಗಲ್‌ ಕ್ಷೇತ್ರದಲ್ಲಿ 6 ಸಾವಿರ ಮತಗಳಿಂದ ಸೋತಿದ್ದರು. ಈಗಿನ ಬಿಜೆಪಿಯ ಡಬಲ್‌ ಇಂಜಿನ್‌ ಸರ್ಕಾರವಿದೆ. ಜತೆಗೆ ಅದು ಮುಖ್ಯಮಂತ್ರಿಯವರ ತವರು ಜಿಲ್ಲೆ. ಅಲ್ಲದೆ ಮುಖ್ಯಮಂತ್ರಿಯವರು ಹಾನಗಲ್‌ ಕ್ಷೇತ್ರದ ಅಳಿಯ. ಎಲ್ಲ ರೀತಿಯಲ್ಲೂ ಅನುಕೂಲ ಬಿಜೆಪಿಯವರಿಗೆ ಇತ್ತು. ಅವರ ಸರ್ಕಾರದಲ್ಲಿರುವ ನಮ್ಮ ಸ್ನೇಹಿತರು ಬ್ಯಾಗ್‌ ತುಂಬಿಕೊಂಡು ಹೋಗಿ ಬಿಜೆಪಿಯ ಗೆಲುವಿಗಾಗಿ ಬಹಳ ಪ್ರಯತ್ನಪಟ್ಟಿದ್ದರು. ಮುಖ್ಯಮಂತ್ರಿ, ಯಡಿಯೂರಪ್ಪ, ಅವರ ಪುತ್ರ ಸೇರಿದಂತೆ ಅನೇಕ ಸಚಿವರು ಕ್ಷೇತ್ರದಲ್ಲಿ ಬೀಡುಬಿಟ್ಟು ಹೆಣೆದ ಕಾರ್ಯತಂತ್ರ ಫಲಿಸಿಲ್ಲ. ಅವರು ಏನೇ ಮಾಡಿದರೂ ಕ್ಷೇತ್ರದ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇದು ಬದಲಾವಣೆಯ ಪರ್ವ ಅಲ್ಲವೇ ಎಂದು ಶಿವಕುಮಾರ್‌ ಪ್ರಶ್ನಿಸಿದರು.

Follow Us:
Download App:
  • android
  • ios