Asianet Suvarna News Asianet Suvarna News

Assembly election: ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಮೂರು ಫಾರ್ಮುಲಾ!: ಯಾರಿಗೆ ಸಿಗುತ್ತೆ ಟಿಕೆಟ್..?

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ಮತ್ತೆ ಬಿಗ್‌ ಶಾಕ್‌ ನೀಟಿದ ಹೈಕಮಾಂಡ್
ಒಂದು ಕ್ಷೇತ್ರಕ್ಕೆ ನಾಲ್ಕು ಪಟ್ಟು ಟಿಕೆಟ್‌ ಆಕಾಂಕ್ಷಿಗಳ ಅರ್ಜಿ ಸಲ್ಲಿಕೆ ಬೆನ್ನಲ್ಲೇ 30 ಜಿಲ್ಲೆಗಳ ಸಮಿತಿ ಸಲಹೆ ಪಡೆದ ನಾಯಕರು
ಮೂರು ಫಾರ್ಮುಲಾಗಳನ್ನು ರಚಿಸಿ ಅದರಂತೆ ಟಿಕೆಟ್‌ ನೀಡಲು ಸಿದ್ಧತೆ

Three formulas for Congress ticket allocation Who will get the ticket sat
Author
First Published Jan 4, 2023, 1:35 PM IST

ಬೆಂಗಳೂರು (ಜ.04): ರಾಜ್ಯದ ವಿಧಾನಸಭಾ ಚುನಾವಣೆ ಇನ್ನೇನು 100 ದಿನಗಳಲ್ಲಿ ಘೋಷಣೆಯಾಗಲಿದೆ. ಆದರೆ, ಕಾಂಗ್ರೆಸ್‌ ಈ ಬಾರಿ ಟಿಕೆಟ್‌ ಹಂಚಿಕೆಗೆ ಹೊಸ ತಂತ್ರವನ್ನು ರೂಪಸಿದ್ದು, ಅರ್ಜಿ ಹಾಕಿದವರಿಗಷ್ಟೇ ಟಿಕೆಟ್‌ ನೀಡವುದಾಗಿ ತಿಳಿಸಿತ್ತು. ಹೀಗಾಗಿ, ಒಂದು ಕ್ಷೇತ್ರಕ್ಕೆ ನಾಲ್ಕು ಪಟ್ಟು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು ಟಿಕೆಟ್‌ ಫೈಟ್‌ ಜೋರಾಗಿದೆ. ಈ ವೇಳೆ ಹೊಸ ಫಾರ್ಮುಲಾವನ್ನು ಕಂಡುಕೊಂಡಿರುವ ಕಾಂಗ್ರೆಸ್‌ ನಾಯಕರು ಮೂರು ಕೆಟಗರಿಯಲ್ಲಿ ಟಿಕೆಟ್‌ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಯಾವ ಕ್ಷೇತ್ರದಲ್ಲಿ ಯಾರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗಲಿದೆ ಎನ್ನುವುದು ಅತ್ಯಂತ ಕ್ಲಿಷ್ಟಕರವಾದ ಪ್ರಶ್ನೆಯಾಗಿದೆ. ಈಗಾಗಲೇ ಗುಜರಾತ್‌ನಲ್ಲಿ ಬಿಜೆಪಿ ಅಳವಡಿಸಿಕೊಂಡ ಮಾದರಿಯನ್ನು ಅಳವಡಿಕೆ ಮಾಡುವುದು ಹಾಗೂ ಗೆಲ್ಲುವ ಕುದುರೆಗಳನ್ನಷ್ಟೇ ಅಖಾಡಕ್ಕೆ ಇಳಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಗೆ ಮತ್ತೊಂದು ಹೊಸ ಫಾರ್ಮುಲಾ ಕಂಡುಕೊಂಡಿದೆ.  ಅದೇನೆಂದರೆ ಎಲ್ಲ 224 ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ಗಳನ್ನು ಎ,ಬಿ,ಸಿ ಕೆಟಗರಿ ಆಧಾರದಲ್ಲಿ ಟಿಕೆಟ್ ಘೋಷಣೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

Assembly election: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಸಂಕ್ರಾಂತಿಗಿಲ್ಲ: ಸಿದ್ದರಾಮಯ್ಯ

ಜಿಲ್ಲಾ ಸಮಿತಿಗಳ ಅಭಿಪ್ರಾಯ ಸಂಗ್ರಹ: ಈ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳ ಕಾಂಗ್ರೆಸ್‌ ಕಮಿಟಿಯ ಜೊತೆಗೆ ನಡೆಸಲಾಗಿರುವ ಸಭೆಯಲ್ಲಿ ಕಾಂಗ್ರೆಸ್‌ ಮುಖಂಡರು ಸ್ಥಳೀಯರಿಂದ ಅಭಿಪ್ರಾಯ ಸಂಗ್ರಹಣೆಯನ್ನೂ ಮಾಡಿಕೊಂಡಿದ್ದಾರೆ. ಈ ವೇಳೆ ಕಾಂಗ್ರೆಸ್ ಆಕಾಂಕ್ಷಿಗಳಿಗೆ ಟಿಕೆಟ್ ಹಂಚಿಕೆಗೆ ಮೂರು ಫಾರ್ಮುಲಾಗಳನ್ನು ಬಳಸಲು ಜಿಲ್ಲಾ ಸಮಿತಿಗಳ ಬಹುತೇಕ ಸದಸ್ಯರು ಒಪ್ಪಿಕೊಂಡಿದ್ದಾರೆ. ಹೀಗಾಗಿ, ಈ ಫಾರ್ಮುಲಾವನ್ನು ಅಳವಡಿಕೆ ಮಾಡಿಕೊಂಡು ಟಿಕೆಟ್‌ ಹಂಚಿಕೆ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ಯಾರಿಗೆ ಯಾವ ಕೆಟಗರಿ ಟಿಕೆಟ್‌ ಸಿಗಲಿದೆ ಎನ್ನುವುದನ್ನು ಒಂದು ಕಲ್ಪನೆ ಮಾಡಿಕೊಳ್ಳಲು ಈ ಫಾರ್ಮುಲಾ ನೆರವಾಗಲಿದೆ.

ಮೂರು ಕೆಟಗರಿಯ ಫಾರ್ಮುಲಾದಲ್ಲಿರುವ ಅಂಶಗಳೇನು?
ಫಾರ್ಮುಲಾ- A

- ಹಾಲಿ ಶಾಸಕರಿಗೆ 95% ರಷ್ಟು ಟಿಕೆಟ್ ಸಿಗಲಿದೆ 
- ಹಾಲಿ ಶಾಸಕರಾದವರು ಗೆಲ್ಲುವಂತಿದ್ದರೆ ಬಹುತೇಕ ಟಿಕೆಟ್ ಫಿಕ್ಸ್
- ಕೆಲವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯೂ ಇದೆ
- ಆಡಳಿತ ವಿರೋಧಿ ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ
- ಆದರೆ ಆ ಸಂಖ್ಯೆ ಕಡಿಮೆ ಇರಲಿದೆ 

ಜ.9ಕ್ಕೆ ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ: ಹೊಸ ಕಾಂಗ್ರೆಸ್‌ ಕಚೇರಿ ಉದ್ಘಾಟನೆ

ಫಾರ್ಮುಲಾ- B
- ಕಳೆದ ಎಲೆಕ್ಷನ್ ನಲ್ಲಿ ಕಡಿಮೆ ಅಂತರದಲ್ಲಿ ಪರಾಭವಗೊಂಡ ಅಭ್ಯರ್ಥಿಗಳಿಗೆ ಟಿಕೆಟ್
- 5,000 ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋತಿರುವವರಿಗೆ ಆದ್ಯತೆ
- ಜಿಲ್ಲಾ ಸಮಿತಿಗಳಿಂದ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಸಲಹೆ 

ಫಾರ್ಮುಲಾ- C
- ಸಮೀಕ್ಷೆ ಆಧರಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ 
- ಕ್ಷೇತ್ರದಲ್ಲಿ ಪ್ರಭಾವಿ ನಾಯಕ ಎನಿಸಿಕೊಂಡವರಿಗೆ ಆದ್ಯತೆ
- ಕ್ಷೇತ್ರದಲ್ಲಿ ಹಿಡಿತ ಇರುವವರು, ಖರ್ಚು ಮಾಡುವವರಿಗೆ ಟಿಕೆಟ್ ಹಂಚಿಕೆ

Follow Us:
Download App:
  • android
  • ios