Asianet Suvarna News Asianet Suvarna News

Assembly election: ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಸಂಕ್ರಾಂತಿಗಿಲ್ಲ: ಸಿದ್ದರಾಮಯ್ಯ

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಅಲೆ ಹೆಚ್ಚಾಗಿರುವ  ಹಿನ್ನೆಲೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.  ಇನ್ನು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಂಕ್ರಾಂತಿಗಲ್ಲ, ಜನವರಿ ಅಂತ್ಯಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

First list of Congress candidates not for Sankranti Siddaramaiah sat
Author
First Published Jan 3, 2023, 8:29 PM IST

ವಿಜಯನಗರ (ಜ.03): ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ಗೆ ಗೆಲುವಿನ ಅಲೆ ಹೆಚ್ಚಾಗಿರುವ  ಹಿನ್ನೆಲೆಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.  ಇನ್ನು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಂಕ್ರಾಂತಿಗಲ್ಲ, ಜನವರಿ ಅಂತ್ಯಕ್ಕೆ ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಬಂದಿರೋ ಹಿನ್ನಲೆಯಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಸಂಕ್ರಾಂತಿಗೆ ಮೊದಲ ಪಟ್ಟಿ ಇಲ್ಲ. ಜನವರಿ ಅಂತ್ಯಕ್ಕೆ ಬಿಡುಗಡೆ ಮಾಡಲಾಗುವುದು. ಕಾಂಗ್ರೆಸ್ ಈ ಬಾರಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪರ ಗಾಳಿ ಇದೆ. ಅನ್ನೋ ಕಾರಣಕ್ಕಾಗಿ ಎಲ್ಲಾ ಕ್ಷೇತ್ರ ದಲ್ಲಿ ಹೆಚ್ಚು ಆಕಾಂಕ್ಷಿಗಳಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರಾದರೂ ಹೊಸ ಪಕ್ಷ ಮಾಡಬಹುದು. ಜನಾರ್ಧನ ರೆಡ್ಡಿ ಕೂಡ ಪಕ್ಷ ಆರಂಭಿಸಿದ್ದಾರೆ. ಆದರೆ, ಅಂತಿಮವಾಗಿ ಜನರೇ ಅಲ್ವಾ ತೀರ್ಮಾನ ಮಾಡೋದು. ಹೊಸ ಪಕ್ಷವನ್ನು, ಅ ಪಾರ್ಟಿಯ ಅಭ್ಯರ್ಥಿಗಳನ್ನು ಒಪ್ಪೋದು ಬಿಡೋದು , ಜನರಿಗೆ ಬಿಟ್ಟಿದ್ದು. 2013ರಲ್ಲಿ ಬಿಎಸ್ಆರ್, ಕೆಜೆಪಿ ಪಕ್ಷ ಸ್ಥಾಪನೆಯಿಂದ ಕಾಂಗ್ರೆಸ್ ಗೆ ಲಾಭವಾಗಿತ್ತು ಎಂದು ಹೇಳಿದರು.

Congress convention: ಬಿಜೆಪಿ ಶಕ್ತಿ ಕೇಂದ್ರ ಹುಬ್ಬಳ್ಳಿ-ಧಾರವಾಡದಲ್ಲಿ ಅಬ್ಬರಿಸಿದ ಕಾಂಗ್ರೆಸ್‌!

ಹೊಸ ಪಕ್ಷದಿಂದ ಕಾಂಗ್ರೆಸ್‌ಗೆ ಅನುಕೂಲ: ನಾವು ಇನ್ನೊಂದು ಪಕ್ಷ ಆಗುತ್ತದೆ ಅನ್ನೋದರ ಮೇಲೆ ಡಿಪೆಂಡ್ ಆಗಿಲ್ಲ. ನಮ್ಮ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಯಾರೇ ಹೊಸ ಪಕ್ಷ ಮಾಡಲಿ.? ಬಿಜೆಪಿ, ಜೆಡಿಎಸ್ ಏನಾದರೂ ಹೇಳಿಕೊಳ್ಳಲಿ, ನೂರಕ್ಕೂ ನೂರು ನಾವು ಗೆಲ್ಲುತ್ತೇವೆ. ರಾಜ್ಯದಲ್ಲಿ ಅನೇಕ ಜನ ಹೊಸ ಪಾರ್ಟಿ ಕಟ್ಟಿದ್ದಾರೆ. ದೇವರಾಜು ಅರಸು, ಬಂಗಾರಪ್ಪ, ಯಡಿಯೂರಪ್ಪ, ಶ್ರೀ ರಾಮುಲು ಎಲ್ಲರೂ ಹೊಸ ಪಾರ್ಟಿ ಕಟ್ಟಿದ್ದಾರೆ. ಬಂಗಾರಪ್ಪ ಎರಡು ಬಾರಿ ಕಟ್ಟಿದ್ರು, ಶ್ರೀ ರಾಮುಲು ಕೂಡ ಪಾಪಾ ಪಾರ್ಟಿ ಕಟ್ಟಿದದ್ದರು. ಲೋಕಲ್ ಪಾರ್ಟಿ ಕಟ್ಟಿದವರ ಸ್ಥಿತಿ ಏನಾಗಿದೆ ಎಂಬುದರ ಇತಿಹಾಸ ಇದೆ ಎಂದರು.

ಸಾರ್ಥಕ ನಮನ ಕಾರ್ಯಕ್ರಮ: ನಂತರ ನಡೆದ ಸಾರ್ಥನ ನಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯು ಅವರು, ನಲವತ್ತು ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಿದ್ದೇವೆ. ಭೀಮಾನಾಯ್ಕ ಜೆಡಿಎಸ್ ಶಾಸಕರಾ ದ್ದಾಗಲೇ ಅನುದಾನ ಬಿಡುಗಡೆ ಮಾಡಿದ್ದೇವೆ ಅಭಿವೃದ್ಧಿ ಪಕ್ಷ ಅಗತ್ಯವಿಲ್ಲ. ಚುನಾವಣೆಯಲ್ಲಿ ಮಾತ್ರ ಭರವಸೆ ನೀಡ್ತೇವೆ.  ಗೆದ್ದ ಮೇಲೆ ಆ ಪಕ್ಷ ಈ ಪಕ್ಷ ಅಂತೇನಿಲ್ಲ ಎಲ್ಲರ ಅಭಿವೃದ್ಧಿ ಮಾಡಬೇಕು. ನಾನು ಸಿಎಂ ಅಗಿದ್ದಾಗ ಪಕ್ಷಾತೀತ ವಾಗಿ ಎಲ್ಲ ಕ್ಷೇತ್ರಕ್ಕೆ ಅನುದಾನ ನೀಡಿದ್ದೇವೆ ಎಂದು ಹೇಳಿದರು. 

ಅಸೆಂಬ್ಲಿ ಚುನಾವಣೆ ಮುನ್ನ ಸಿದ್ದರಾಮಯ್ಯ ಜೈಲಿಗೆ: ನಳಿನ್‌ ಕುಮಾರ್‌ ಕಟೀಲ್‌

ಬೊಮ್ಮಾಯಿ ಅಭಿವೃದ್ಧಿ ಬಗ್ಗೆ ಚರ್ಚೆಗೆ ಬರಲಿ: ಮೂರುವರೆ ವರ್ಷದಲ್ಲಿ ಬಿಜೆಪಿ ಯಾರಾದರೂ ಒಂದು ಭರವಸೆ ಈಡೇರಿಸಿದ್ದೀರಾ? ಬಸವರಾಜ ಬೊಮ್ಮಯಿ ಒಂದೇ ವೇದಿಕೆ ಮೇಲೆ ಬರಲಿ ಎಂದು ಸವಾಲು ಹಾಕಿದರು. ದೈರ್ಯವಿದ್ದರೆ ಅಭಿವೃದ್ಧಿ ಚರ್ಚೆಗೆ ಒಂದೇ ವೇದಿಕೆಯಲ್ಲಿ ಬರಲಿ. ಕಾಂಗ್ರೆಸ್ ನವರ ದಮ್ಮಿನ ಬಗ್ಗೆ ಪ್ರಶ್ನೆ ಮಾಡೋ ಬೊಮ್ಮಾಯಿ ಅವರು ಮೋದಿ ಮುಂದೆ ನಾಯಿಯಂತೆ ಇರುತ್ತಾರೆ. ಗಡ ಗಡ ನಡಗುತ್ತಾರೆ. ನೀವು ಆಪರೇಷನ್ ಕಮಲದ ಮೂಲ ಅಧಿಕಾರಕ್ಕೆ ಬಂದಿದ್ದೀರಾ. ದಮ್ಮಿದ್ರೇ,  ತಾಕತ್ತಿದ್ರೇ, ಬೊಮ್ಮಯಿ ಅವರೇ ಕೇಂದ್ರದಿಂದ ಹಣ ತನ್ನಿ. ಕೇಂದ್ರದ ನಾಯಕರ ಮುಂದೆ ನಿಮ್ಮ ತಾಕತ್ತು ದಮ್ಮು ಎಲ್ಲಿ ಹೋಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ರಾಜ್ಯದ ಎಲ್ಲ ಕೆರೆ ತುಂಬಿಸುತ್ತೇವೆ. ಮಹದಾಯಿ ಯೋಜನೆ ನಿರ್ಮಾಣಕ್ಕೆ ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡ್ತೇನೆ ಎಂದರು. ಡಬಲ್ ಇಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂದು ಕಿಡಿಕಾರಿದರು. 

ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ:  ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಮಾತನಾಡಿ ರಾಜ್ಯದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ‌ಮುಖ್ಯಮಂತ್ರಿ ಆಗುತ್ತಾರೆ. ಸಿದ್ದರಾಮಯ್ಯ ಆದರೆ ಯಾದ್ರೇ ಮಾತ್ರ ರಾಜ್ಯದ ಅಭಿವೃದ್ಧಿಯಾಗುತ್ತದೆ. ಮುಖ್ಯಮಂತ್ರಿ ಅಗೇ ಆಗ್ತಾರೆ ಎಂದ ವೇದಿಕೆ ಕುಟ್ಟಿ ಹೇಳಿದರು. ಸಿದ್ದರಾಮಯ್ಯ ಅವರನ್ನು ಕಂಡರೆ ಬಿಜೆಪಿಗೆ ನಡುಕ ಇದೆ. ಇವನ್ಯಾವನೋ ಸಿಟಿ ರವಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುತ್ತಾನೆ. ಅವನೊಬ್ಬ ಲೂಟಿ ರವಿ. ಸಿದ್ದರಾಮಯ್ಯ ಕಾಲಿನ ಧೂಳಿಗೆ ಈ ಲೂಟಿ ರವಿ ಸಮನವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಾಜಿ ಸಚಿವರಾದ ಸಂತೋಷ್ ಲಾಡ್, ಪಿ.ಟಿ.ಪರಮೇಶ್ವರ್ ನಾಯ್ಕ್, ಜಮೀರ್‌ ಅಹಮದ್‌ ಖಾನ್, ಶಾಸಕರಾದ ಜೆ.ಎನ್ ಗಣೇಶ್, ಬೈರತಿ ಸುರೇಶ್, ತುಕಾರಾಂ ಉಪಸ್ಥಿತರಿದ್ದರು.

Follow Us:
Download App:
  • android
  • ios