Asianet Suvarna News Asianet Suvarna News

ಜ.9ಕ್ಕೆ ಬೆಂಗಳೂರಿಗೆ ಪ್ರಿಯಾಂಕಾ ಗಾಂಧಿ: ಹೊಸ ಕಾಂಗ್ರೆಸ್‌ ಕಚೇರಿ ಉದ್ಘಾಟನೆ

ಮಹಿಳಾ ಕಾಂಗ್ರೆಸ್‌ ರಾಜ್ಯಾದ್ಯಂತ ಆಯೋಜಿಸಿದ್ದ ‘ನಾ ನಾಯಕಿ’ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ನಗರದ ಕ್ವೀನ್ಸ್‌ ರಸ್ತೆಯಲ್ಲಿ ಸುಮಾರು 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಗ್ರೆಸ್‌ನ ನೂತನ ಕಚೇರಿ ‘ಭಾರತ್‌ ಜೋಡೋ ಭವನ’ ಉದ್ಘಾಟನೆಗಾಗಿ ಕಾಂಗ್ರೆಸ್‌ ವರಿಷ್ಠೆ ಪ್ರಿಯಾಂಕಾ ಗಾಂಧಿ ಜ.6ರಂದು ನಗರಕ್ಕೆ ಆಗಮಿಸಲಿದ್ದಾರೆ. 

Congress leader Priyanka Gandhi will arrive in Bengaluru on January 6th for inauguration of Bharat Jodo Bhavan gvd
Author
First Published Jan 4, 2023, 7:03 AM IST

ಬೆಂಗಳೂರು (ಜ.04): ಮಹಿಳಾ ಕಾಂಗ್ರೆಸ್‌ ರಾಜ್ಯಾದ್ಯಂತ ಆಯೋಜಿಸಿದ್ದ ‘ನಾ ನಾಯಕಿ’ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಹಾಗೂ ನಗರದ ಕ್ವೀನ್ಸ್‌ ರಸ್ತೆಯಲ್ಲಿ ಸುಮಾರು 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಗ್ರೆಸ್‌ನ ನೂತನ ಕಚೇರಿ ‘ಭಾರತ್‌ ಜೋಡೋ ಭವನ’ ಉದ್ಘಾಟನೆಗಾಗಿ ಕಾಂಗ್ರೆಸ್‌ ವರಿಷ್ಠೆ ಪ್ರಿಯಾಂಕಾ ಗಾಂಧಿ ಜ.6ರಂದು ನಗರಕ್ಕೆ ಆಗಮಿಸಲಿದ್ದಾರೆ. 

ಜ.9ರಂದು ಬೆಳಗ್ಗೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ ಅವರು ಸುಮಾರು ಆರು ವರ್ಷಗಳ ದೀರ್ಘ ಅವಧಿಯಲ್ಲಿ 20 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಭಾರತ ಜೋಡೋ ಭವನವನ್ನು ಉದ್ಘಾಟಿಸಲಿದ್ದಾರೆ. ಈ ಬೃಹತ್‌ ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿದ್ದು, ನೆಲ ಹಾಗೂ ಮೊದಲ ಮಹಡಿ ಒಗ್ಗೂಡಿ ಬೃಹತ್‌ ಆಡಿಟೋರಿಯಂ ಹೊಂದಿದೆ. ಎರಡನೇ ಮಹಡಿಯಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಕಚೇರಿಗಳು ಇರಲಿವೆ. ಇದಲ್ಲದೆ, ಎರಡು ತಳ ಮಹಡಿಗಳನ್ನು ವಾಹನ ನಿಲುಗಡೆಗಾಗಿ ನಿರ್ಮಿಸಲಾಗಿದೆ. 

ಅಮೆರಿಕದಲ್ಲಿ ಆರ್ಭಟಿಸಿದ ವೈರಸ್‌ ಕರ್ನಾಟಕದಲ್ಲೂ ಪತ್ತೆ

ಈ ಕಟ್ಟಡ ಉದ್ಘಾಟನಾ ಸಮಾರಂಭದ ನಂತರ ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ‘ನಾ ನಾಯಕಿ’ ಸಮಾವೇಶಗಳ ಸಮಾರೋಪ ಸಮಾರಂಭದಲ್ಲಿ ಅವರು ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ. ಮಹಿಳಾ ಕಾಂಗ್ರೆಸ್‌ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ನಾ ನಾಯಕಿ’ ಸಮಾವೇಶವನ್ನು ಆಯೋಜಿಸಿತ್ತು. ಈ ಸಮಾವೇಶಗಳ ಸಮಾರೋಪ ಸಮಾರಂಭ ಜ. 9ರಂದು ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಿಯಾಂಕಾ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಅವರು ಪಾಲ್ಗೊಳ್ಳಲಿದ್ದಾರೆ.

ಐಕ್ಯತಾ ಸಮಾವೇಶಕ್ಕೆ ಆಗಮನ ಸಾಧ್ಯತೆ: ಜನವರಿ 8 ರಂದು ಚಿತ್ರದುರ್ಗದಲ್ಲಿ ನಡೆಲಿರುವ ಎಸ್ಸಿ, ಎಸ್ಟಿಗಳ ರಾಜ್ಯಮಟ್ಟದ ಐಕ್ಯತಾ ಸಮಾವೇಶಕ್ಕೆ ಸೋನಿಯಾ ಇಲ್ಲವೇ ಪ್ರಿಯಾಂಕ ಗಾಂಧಿ ಆಗಮಿಸುವ ಸಾಧ್ಯತೆಗಳು ಇವೆ ಎಂದು ಸಮಾವೇಶದ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ ಹೇಳಿದರು. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮಾವೇಶ ಉದ್ಘಾಟಿಸಲಿದ್ದು, ರಾಹುಲ್‌ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಈ ಮೂವರನ್ನು ಆಹ್ವಾನಿಸಲಾಗಿದ್ದು ಯಾರಾದರೂ ಒಬ್ಬರು ಬರಬಹುದು. 

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದವರು ಸಮಾವೇಶಕ್ಕೆ ಆಗಮಿಸಲಿದ್ದಾರೆ ಎಂದರು. ಡಾ.ಜಿ.ಪರಮೇಶ್ವರ್‌, ಎಚ್‌.ಸಿ.ಮಹದೇವಪ್ಪ, ಉಗ್ರಪ್ಪ, ಸತೀಶ್‌ ಜಾರಕಿಹೊಳಿ ಇನ್ನು ಅನೇಕರು ಈಗಾಗಲೆ ಚಿತ್ರದುರ್ಗದಲ್ಲಿ ಸಮಾವೇಶ ನಡೆಯುವ ಸ್ಥಳ ವೀಕ್ಷಣೆ ಮಾಡಿ ಹೋಗಿದ್ದಾರೆ. ಸುಮಾರು ಐದು ಲಕ್ಷ ಜನ ಸೇರುವ ನಿರೀಕ್ಷೆಯಿದ್ದು, ಎಸ್ಸಿ, ಎಸ್ಟಿ.ಗಳ ಸಮಸ್ಯೆ, ನೂನ್ಯತೆಗಳನ್ನು ಸರಿಪಡಿಸಿ ನ್ಯಾಯಯುತವಾದ ಸವಲತ್ತು ಒದಗಿಸಲು ಹತ್ತು ಅಂಶಗಳ ಕಾಯ ರ್‍ಕ್ರಮಗಳನ್ನು ಸಮಾವೇಶದಲ್ಲಿ ಘೋಷಿಸಲಾಗುವುದು ಎಂದರು.

ಶಾಸಕ, ಸಂಸದರ ಮಾತಿಗೆ ಹೆಚ್ಚುವರಿ ನಿರ್ಬಂಧ ಅಸಾಧ್ಯ: ಸುಪ್ರೀಂಕೋರ್ಟ್‌

ಬೆಂಗಳೂರಿನಲ್ಲಿ ಸಮಾವೇಶ ನಡೆಸುವುದು ಕಷ್ಟವಾಗುತ್ತದೆ ಎನ್ನುವುದನ್ನು ಅರಿತು ಮಧ್ಯಕರ್ನಾಟಕದ ಚಿತ್ರದುರ್ಗದಲ್ಲಿ ನಡೆಸಲು ನಾಯಕರು ತೀರ್ಮಾನಿಸಿದ್ದಾರೆ. ಉತ್ತರ ಕರ್ನಾಟಕ, ಮಧ್ಯಕರ್ನಾಟಕ, ಕರಾವಳಿ ಭಾಗಗಳಿಂದ ಕಾರ್ಯಕರ್ತರು ಬರಲು ಸುಲಭವಾಗುತ್ತದೆ. ಪರಿಶಿಷ್ಟ ಜಾತಿಯಲ್ಲಿನ 101 ಹಾಗೂ ಪರಿಶಿಷ್ಟವರ್ಗದಲ್ಲಿನ 52 ಜಾತಿಗಳನ್ನು ಒಡೆದಾಳಬಾರದು ಎನ್ನುವ ಉದ್ದೇಶವಿಟ್ಟುಕೊಂಡು ಒಂದೆಡೆ ಸೇರಿಸುವುದು ಐಕ್ಯತಾ ಸಮಾವೇಶದ ಉದ್ದೇಶ. ನಾವುಗಳು ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧಿಸುತ್ತಿಲ್ಲ. ಪರಿಶಿಷ್ಟಜಾತಿಯಲ್ಲಿನ ಎಲ್ಲಾ ಒಳಜಾತಿಗಳಿಗೂ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸಿಗಬೇಕು ಎನ್ನುವುದು ನಮ್ಮ ವಾದ ಎಂದರು.

Follow Us:
Download App:
  • android
  • ios