ಕ್ಷೇತ್ರ ಬದಲಾಯಿಸೋಕೆ ಇದು ಟೂರಿಂಗ್ ಟಾಕೀಸ್ ಅಲ್ಲ: ಚನ್ನಪಟ್ಟಣ ಬಿಟ್ಟು ಹೋಗೊಲ್ಲ: ಕುಮಾರಸ್ವಾಮಿ
ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ.? ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯೇ ಇಲ್ಲ. 2028ಕ್ಕೆ ನಿಮ್ಮಲ್ಲೇ ಒಬ್ಬ ಕಾರ್ಯಕರ್ತರನ್ನು ಸ್ಪರ್ಧೆಗಿಳಿಸಲು ರೆಡಿ ಮಾಡಿ.
ರಾಮನಗರ (ಫೆ.27): ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ.? ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯೇ ಇಲ್ಲ. ಆದರೆ, 2028ಕ್ಕೆ ನಿಮ್ಮಲ್ಲೇ ಒಬ್ಬ ಕಾರ್ಯಕರ್ತರನ್ನು ಸ್ಪರ್ಧೆಗಿಳಿಸಲು ರೆಡಿ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಬಮೂಲ್ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 2018ರ ಚುನಾವಣೆಯಲ್ಲಿ ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ನಿಲ್ಲಿ ಅಂದರು. ಇನ್ನು ಕೆಲವರು ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡ್ತಿದ್ದಾರೆ ಎಂದು ಹೇಳಿದ್ದು, ಈಗ ಅವರ ಹೆಸರು ಹೇಳಲ್ಲ. ಈ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ. ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ.? ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯೇ ಇಲ್ಲ. ಎಲ್ಲ ಕಾರ್ಯತರ್ಯರು ಒಗ್ಗಟ್ಟಾಗಬೇಕು ಎಂದು ಹೇಳಿದರು.
ಸರ್ಕಾರ-ಜನರ ನಡುವೆ ಸೇತುವೆಯಾಗದ ಎಚ್‌ಡಿಕೆ: ಸಿ.ಪಿ.ಯೋಗೇಶ್ವರ್
ಇನ್ನು 2023ರ ವಿಧಾನಸಭಾ ಚುನಾವಣೆ ನನ್ನ ಕೊನೆಯ ಚುನಾವಣೆ. 2028ರ ಚುನಾವಣೆಗೆ ನಿಮ್ಮಲ್ಲೇ ಅಭ್ಯರ್ಥಿ ಆಗಬೇಕು. ನಿಮ್ಮಲ್ಲೊಬ್ಬ ಲೀಡರ್ ಹುಟ್ಟಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿರಿ. 2028ಕ್ಕೆ ಓರ್ವ ಅಭ್ಯರ್ಥಿಯನ್ನ ರೆಡಿ ಮಾಡಿ. ರಾಮನಗರದಲ್ಲೂ ಒಬ್ಬನನ್ನು ಬೆಳೆಸಿದೆ. ಆದರೆ ಅವರು ಬೆನ್ನಲ್ಲೇ ಚೂರಿ ಹಾಕಿದರು. ನನಗೆ ಬೆಂಬಲ ಕೊಟ್ಟಿದ್ದು ನೀವು, ಜನತೆ. ರಾಷ್ಟ್ರೀಯ ಪಕ್ಷಗಳು ಬಡವರ ರಕ್ತ ಹೀರುವ ಕೆಲಸ ಮಾಡ್ತಿವೆ. ಈಗ ಎರಡು ವಿಚಾರ ನಡೆಯುತ್ತಿದೆ. ಬಿಜೆಪಿಯವ್ರದ್ದು ಶೇ.40% ಅಂತೆ, ಕಾಂಗ್ರೆಸ್ ಅವ್ರದ್ದು ರಿಡೂ ಅಂತೆ ಎಂದು ಬಮೂಲ್ ಉತ್ಸವದಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕಿದರು.
ಅಕ್ಕಪಕ್ಕದ 2 ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯ: 2018ರ ಚುನಾವಣೆಯಲ್ಲಿ ನೀವೆಲ್ಲಾ ಬಂದು ಗಲಾಟೆ ಮಾಡಿದ್ದೀರಿ. ನಾನು ಸ್ಥಳೀಯರನ್ನ ನಿಲ್ಲಿಸಿ ಅಂದೆ. ಆದರೆ ನೀವೆಲ್ಲ ಹಠ ಹಿಡಿದು ಎರಡೂ ಕ್ಷೇತ್ರದಲ್ಲಿ ನಿಲ್ಲುವ ಹಾಗೆ ಮಾಡಿದ್ರಿ. ಬಹುಶಃ ಯಾವುದೇ ರಾಜಕಾರಣಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ನಿಲ್ಲುವ ಎದೆಗಾರಿಕೆ ಮಾಡಲಿಲ್ಲ. ಆ ಧೈರ್ಯ ಮಾಡಿದ್ದು ನೀವು. ರಾಮನಗರ ಕ್ಷೇತ್ರದ ಜನ ನಾನಿಲ್ಲದಿದ್ದರೂ ಗೆಲ್ಲಿಸಿಕೊಂಡು ಬರ್ತಾರೆ. ನನ್ನನ್ನು ಬೆಳೆಸಿದ್ದೇ ರಾಮನಗರ ಜಿಲ್ಲೆಯ ಜನ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿರಬಹುದು. ಆದರೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ ಎಂದು ಹೇಳಿದರು.
ಜಯಮುತ್ತು ಸಹಕಾರ ಸಂಘದ ಕಾರ್ಯಕ್ರಮ:
ಇದು ಬೆಂಗಳೂರು ಹಾಲು ಒಕ್ಕೂಟ ಸಹಕಾರ ಸಂಘದ ಕಾರ್ಯಕ್ರಮ ಅಲ್ಲ. ಇದು ಜಯಮುತ್ತು ಸಹಕಾರ ಸಂಘದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಬಮೂಲ್ ನಿರಾಕರಿಸಿದೆ. ಎಲ್ಲಾ ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೊದು ಗೊತ್ತಿದೆ. ಕೇವಲ ಇನ್ನೆರಡು ತಿಂಗಳು ಇದೆ ಅಷ್ಟೇ. ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಂಘದ ಎಆರ್, ಡಿಆರ್ ಗಳ ಆಟ ನೋಡಿದ್ದೇನೆ. ಪ್ರತಿನಿತ್ಯ ಲೂಟಿ ಮಾಡುತ್ತಿರುವವ ಬಗ್ಗೆ ಮಾಹಿತಿ ಇದೆ ಎಂದು ಹರಿಹಾಯ್ದರು.
ಸ್ವರೂಪ್ ಕೈತಪ್ಪಿದ ಹಾಸನ ಜೆಡಿಎಸ್ ಟಿಕೆಟ್: ದೇವೇಗೌಡರ ಅಂಗಳಕ್ಕೆ ಟಿಕೆಟ್ ಫೈಟ್ ಎಸೆದ ಕುಮಾರಸ್ವಾಮಿ
ಅಧಿಕಾರಿಗಳ ಕಳ್ಳಾಟ 2 ತಿಂಗಳು ಅಷ್ಟೇ: ಸಹಕಾರ ಕ್ಷೇತ್ರದಲ್ಲಿ ಕಾನೂನೇ ಇಲ್ಲದಂತಾಗಿದೆ. ಸಹಕಾರಿ ಕ್ಷೇತ್ರದ ಅಧಿಕಾರಿಗಳ ಈ ಕಳ್ಳಾಟ 2 ತಿಂಗಳು ಅಷ್ಟೇ. ದೈವ ಕೃಷೆಯಿಂದ ಹಿಂದೆ ಸಿಎಂ ಆಗಿದೆ. ನಾನು ಯಾರಿಗೂ ಕಿರುಕುಳ ನೀಡುವ ಕೆಲಸ ಮಾಡಿಲ್ಲ. ಎಲವನ್ನೂ ಗಮನಿಸುತ್ತಿದ್ದೇನೆ. ನಾನು ಜನತೆಗೆ ಗೌರವಕೊಟ್ಟು ಬದುಕಿದ್ದೇನೆ. ನಾನು ಹೆದರುವುದು ಜನತೆಗೆ ಮಾತ್ರ. ಅಧಿಕಾದಲ್ಲಿದ್ದಾಗ ಎಂದೂ ನಾನು ದರ್ಪ ತೋರಿಲ್ಲ. ಕಾನೂನು ಬಾಹಿರ ಚಟುವಟಿಕೆಯನ್ನ ನಾವು ಮಾಡಿಲ್ಲ ಎಂದು ಹೇಳಿದರು.