ಸ್ವರೂಪ್ ಕೈತಪ್ಪಿದ ಹಾಸನ ಜೆಡಿಎಸ್ ಟಿಕೆಟ್: ದೇವೇಗೌಡರ ಅಂಗಳಕ್ಕೆ ಟಿಕೆಟ್ ಫೈಟ್ ಎಸೆದ ಕುಮಾರಸ್ವಾಮಿ
ಹಾಸನ ಟಿಕೆಟ್ ಫೈಟ್ ಗೊಂದಲಕ್ಕೆ ಮತ್ತೊಂದು ಟ್ವಿಸ್ಟ್
ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್‌ಗೆ ನಿರಾಸೆ ಕಟ್ಟಿಟ್ಟ ಬುತ್ತಿ
ಟಿಕೆಟ್ ಗೊಂದಲವನ್ನು ದೇವೇಗೌಡರ ಅಂಗಳಕ್ಕೆ ಎಸೆದು ಸುಮ್ಮನಾದ ಕುಮಾರಸ್ವಾಮಿ
ಚಿಕ್ಕಮಗಳೂರು (ಫೆ.26): ಹಾಸನದಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಜಿಲ್ಲೆಯ ಸಮಾನ ಮನಸ್ಕರೊಂದಿಗೆ ಚರ್ಚೆ ಮಾಡಲು ಮುಂದಾಗಿದ್ದೆನು. ಆದರೆ, ರಾತ್ರಿ ವೇಳೆ ಸಭೆ ರದ್ದಾಗಿದೆ ಎಂದು ಮಾಧ್ಯಮಗಳಿಂದ ತಿಳಿದಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೇ (ಎಚ್.ಡಿ. ದೇವೇಗೌಡ) ಸಭೆಯನ್ನು ಕರೆಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಈ ಕುರಿತು ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆಯ 3ನೇ ದಿನ ಯಾತ್ರೆ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ಮುಕ್ತಾಯಾವಾಗಿದೆ. ನಾಳೆ ಚನ್ನಪಟ್ಟಣದಲ್ಲಿ ಸಭೆ ಇರುವ ಕಾರಣ ಪಂಚರತ್ನ ಯಾತ್ರೆ ಸೋಮವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ನಡೆಯುಲಿದೆ. ಹಾಸನ ಟಿಕೆಟ್ ಹಂಚಿಕೆ ಕುರಿತು ಹಾಸನ ವಿಧಾನ ಕ್ಷೇತ್ರದ ವ್ಯಾಪ್ತಿಯ ಸಮಾನಮಸ್ಕರನ್ನು ಸಭೆಗೆ ಬರುವುದಕ್ಕೆ ಹೇಳಿದ್ದೆನು. ಸಭೆ ರದ್ದಾಗಿದೆ ಎಂದು ನೀವೇ (ಮಾಧ್ಯಮಗಳು) ಹೇಳಿದ್ದೀರ. ಭವಾನಿ ರೇವಣ್ಣನ ಬಗ್ಗೆ ನಾನ್ಯಾಕೆ ಚರ್ಚೆ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದರು.
ಇಂದು ಕಾರ್ಯಕರ್ತರ ಸಭೆ ಮಾಡುವುದಿಲ್ಲ: ನಾನು ಇಂದು ಚನ್ನಪಟ್ಟಣದ ಸಭೆಗೆ ಹಾಸನ ಮಾರ್ಗವಾಗಿಯೇ ಹೋಗುತ್ತೇನೆ. ಈ ವೇಳೆ ಹಾಸನದ ಸಮಾನ ಮನಸ್ಕರಮ್ನ ಕಚೇರಿಗೆ ಬರಲು ಹೇಳಿದ್ದೆನು. ಜನರಲ್ಲಿ ಭೇರೆ ಭಾವನೆ ಬರದಬಾರದು ಅಂತ ಬರಲು ಹೇಳಿದ್ದೆ. ನಮ್ಮ ಪಕ್ಷದ ಬಗ್ಗೆ ಯಾರೂ ಬೆಟ್ಟು ಮಾಡುವಂತಿಲ್ಲ. ಹಾಸನದ ಗೊಂದಲದ ಬಗ್ಗೆ ಕಾರ್ಯಕರ್ತರ ಬಳಿ ಸಮಾಲೋಚನೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಸಭೆಯನ್ನು ರದ್ದು ಮಾಡಲಾಗಿದೆ ಎಂದು ಹೇಳಿದ್ದೀರಿ. ಆದರೆ, ಸಭೆ ರದ್ದು ಎಂದು ಹೇಳಿದ್ದರಿಂದ ಕಾರ್ಯಕರ್ತರ ಭೇಟಿ ಮಾಡುವುದಿಲ್ಲ ಎಂದರು.
ಮುಂದಿನ ಸಭೆ ರಾಷ್ಟ್ರೀಯ ಅಧ್ಯಕ್ಷರು ಮಾಡ್ತಾರೆ: ಹಾಸನ ಟಿಕೆಟ್ ಹಂಚಿಕೆ ವಿಚಾರವಾಗಿ ಭವಾನಿ ರೇವಣ್ಣನ ಬಗ್ಗೆ ನಾನ್ಯಾಕೆ ಚರ್ಚೆ ಮಾಡಲಿ. ಇನ್ನು ಕರೀಗೌಡರು ನಮ್ಮ ಜೊತೆ ಸಂಪರ್ಕ ಇಲ್ಲ. ಈಗ ಯಾವುದೇ ಕಾರ್ಯಕರ್ತರ ಸಭೆಯನ್ನೂ ಕರೆಯುವುದಿಲ್ಲ. ಇನ್ನು ಮುಂದೆ ರಾಷ್ಟ್ರೀಯ ಅಧ್ಯಕ್ಷರು (ದೇವೇಗೌಡರು) ಕರೆಯುತ್ತಾರೆ. ಈ ಭವಾನಿ ಅವರ ಬಳಿ ಮಾತಮಾಡಲ್ಲ. ನಾನು ದೇವೇಗೌಡರ ಆರೊಗ್ಯ ಕೆಡಿಸಲು ಬಯಸಲ್ಲ. ಬೇರೆಯವರಿಗೆ ಅವರ ಆರೋಗ್ಯ ಬಗೆ ಕಾಳಜಿ ಇಲ್ಲ. ಹಾಸನ ಗೊಂದಲ ಬಗೆಹರಿಸುವ ಶಕ್ತಿ ಇದೆ ಎಂದು ಹೇಳಿದರು. ನಾಡಿನ ಜನತೆಯ ಬದುಕಿಗೆ ಆಧಾರವಾಗಿರಬೇಕು ಎಂಬ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಆಡಳಿತ ಮಾಡಬೇಕು. ಹೀಗಾಗಿ, ರಾಜ್ಯದ ಜನತೆಯಲ್ಲಿ ಪೂರ್ಣ ಪ್ರಮಾಣದ ಅಧಿಕಾರ ನೀಡುವಂತೆ ಮನವಿ ಮಾಡಿದ್ದೇನೆ. ಈ ಬಾರಿ 123 ಕ್ಷೇತ್ರಗಳಲ್ಲಿ ಜಯಗಳಿಸುವ ಬಗ್ಗೆ ವಿಶ್ವಾಸ ಇದೆ ಎಂದು ಹೇಳಿದರು.
Ticket Fight: ಕ್ಲೈಮ್ಯಾಕ್ಸ್ ಹಂತ ತಲುಪಿದ ಹಾಸನ ಟಿಕೆಟ್ ಫೈಟ್: ನಾಳೆಯೇ ಗೊಂದಲಕ್ಕೆ ತೆರೆ?
ಸ್ವರೂಪ್‌ಗೆ ಟಿಕೆಟ್ ಸಿಗುವುದು ಡೌಟ್: ಹಾಸನಲ್ಲಿ ಟಿಕೆಟ್ ಗೊಂದಲದ ಚೆಂಡನ್ನ ಕುಮಾರಸ್ವಾಮಿ ಅವರು, ತಮ್ಮ ತಂದೆ ದೇವೇಗೌಡರ ಅಂಗಳಕ್ಕೆ ಎಸೆದು ಸುಮ್ಮನಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ನಾನು ಸಭೆ ಕರೆಯಲ್ಲ, ರಾಷ್ಟ್ರೀಯ ಅಧ್ಯಕ್ಷರು ಕರೆಯುತ್ತಾರೆ. ಹಾಸನ ಟಿಕೆಟ್ ಗೊಂದಲ ಬಗ್ಗೆ ಕೈಚೆಲ್ಲಿದ್ದಾರೆ. ದಿನದಿಂದ ದಿನಕ್ಕೆ ಜಠಿಲ ಆಗುತ್ತಿರುವ ಹಾಸನ ಟಿಕೆಟ್ ಗೊಂದಲದ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಇನ್ನು ಕರೀಗೌಡರು ನಮ್ಮ ಜೊತೆ ಸಂಪರ್ಕ ಇಲ್ಲ. ನಾನು ದೇವೇಗೌಡರ ಆರೊಗ್ಯ ಕೆಡಿಸಲು ಬಯಸಲ್ಲ ಎಂದು ಹೇಳಿಕೆ ನೀಡಿದ್ದು, ಜೆಡಿಎಸ್ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್ ಸಿಗುವುದು ಅನುಮಾನ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.