ಬಿ ಫಾರಂ ಬದಲಿಸಿ ಕಾಂಗ್ರೆಸ್‌ ನವರು ಕರೆದರೂ, ಬಿಜೆಪಿಯವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. 

ತುಮಕೂರು (ಮಾ.21): ಬಿ ಫಾರಂ ಬದಲಿಸಿ ಕಾಂಗ್ರೆಸ್‌ ನವರು ಕರೆದರೂ, ಬಿಜೆಪಿಯವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾರೋ ನೋಡಿ ಬಂದ ಹೆಣ್ಣನ್ನ ನಾನು ಮದುವೆಯಾಗುವುದಿಲ್ಲ ಎಂದರು. ನಾನು ಯಾರಿಗೂ ಕಾಂಗ್ರೆಸ್‌ಗೆ ಬರುತ್ತೀನಿ ಅಂತಾ ಹೇಳಿಲ್ಲ, ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೀನಿ. ಬಿಜೆಪಿಯಲ್ಲಿ ಅಶೋಕ್ ಬಂದಿದ್ದು ನಿಜ. ಜಯರಾಮ್ ಅವರನ್ನು ಕರೆದುಕೊಂಡು ಗೋಪಾಲಯ್ಯ ಅವರೆಲ್ಲ ಬಂದು ಹೋದರು.. ನನಗೆ ಅಸಮಾಧಾನ ಇರುವುದು ಯಡಿಯೂರಪ್ಪನವರ ಮೇಲೆ ಎಂದೆ ಎಂದರು.

ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡೋದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರು ತೊಂದರೆ ಇರಲಿಲ್ಲ. ಸೋಮಣ್ಣ ಮೇಲೆ ನನಗೆ ಯಾವುದೇ ಬೇಜಾರಿಲ್ಲ. ಅವರು ರಾಜ್ಯಸಭೆಗೆ ಹೋಗುತ್ತಾರೆ ಅಂದಾಗ ನಾನು ಸಂತೋಷಪಟ್ಟಿದ್ದೆ. ಆದರೆ ಇವರು ಜಾತಿ ಇದೆ ಅನ್ನೋ ಕಾರಣಕ್ಕೆ ಎಲ್ಲಾ ಕಡೆ ಹೋಗುತ್ತಿದ್ದರೆ ಸ್ಥಳೀಯರ ಸ್ಥಿತಿ ಏನು. ಹೊರಗಿನವರಿಗೆ ಪ್ರೋತ್ಸಾಹ ನೀಡುವ ಮನಸ್ಥಿತಿ ನನ್ನಲ್ಲಿಲ್ಲ. ಈಗ ತುಮಕೂರಿನ ಅಭಿವೃದ್ಧಿ ಅನ್ನೋ ಕಾರಣ ಕೊಡ್ತಿದ್ದಾರೆ. ಎಂಪಿ ಬಂದು ಸಮಗ್ರ ಅಭಿವೃದ್ಧಿ ಮಾಡ್ತಾರೆ ಅನ್ನೋದೆಲ್ಲ ಸುಳ್ಳು ಎಂದರು.

ಒಬಿಸಿ ವೋಟ್‌ಬ್ಯಾಂಕ್ ಮಾಡಿಕೊಳ್ಳುವ ಕಾಂಗ್ರೆಸ್‌ ಹುನ್ನಾರ ಫಲಿಸುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ಎಂಪಿ ಆದವರಿಗೆ ಅವರದ್ದೇ ಆದ ಲಿಮಿಟೇಷನ್ ಇರುತ್ತೆ. ಯಾತಕ್ಕೆ ಇವೆಲ್ಲ ಬೊಗಳೆ ಮಾತು ಅಂತಾ ನನಗೆ ಗೊತ್ತಾಗಲ್ಲವೆಂ ದರು. ಯಾರೋ ಬಂದು ಇಲ್ಲಿ ದುಡ್ಡು ತಂದು ಎಲೆಕ್ಷನ್ ನಿಲ್ಲುತ್ತಾರೆಂದರೆ ಹೇಗೆ ಒಪ್ಪುವುದು ಎಂದ ಅವರು, ನಾವು ದುಡ್ಡಿನಲ್ಲಿ ರಾಜಕಾರಣ ಮಾಡಿದವರಲ್ಲ. ಮಿಡ್ಲ್ ಕ್ಲಾಸ್ ಫ್ಯಾಮಿಲಿಯಲ್ಲಿ ಬೆಳೆದು ಬಂದವರು ನಾವು. ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ ಎಂದರು.

ಅವರ ಬಳಿಯೂ ಎಲ್ಲಾ ವಿಚಾರ ಮಾತನಾಡುತ್ತೇನೆ. ಅವರು ಏನು ಹೇಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ತುಮಕೂರಿನಲ್ಲಿ ನನಗೆ ಅನ್ಯಾಯ ಆಗಿದೆ. ಲಿಂಗಾಯತ ಟಿಕೆಟ್ ಕೊಡಿ ಅಂತಾ ನಾನು ಕೇಳಿಲ್ಲ ಎಂದರು. ಲಿಂಗಾಯತರಿಗೆ ಟಿಕೆಟ್ ಕೊಟ್ಟರೆ ನೊಣಂಬರಿಗೆ ಕೊಡಿ, ಅದನ್ನ ತಪ್ಪಿಸಬೇಡಿ ಅಂತಾ ಕೇಳಿದ್ದೇವೆ. ಐದಾರು ಜಿಲ್ಲೆಯಲ್ಲಿ ನಮ್ಮ ಸಮುದಾಯದ ವರು ವೋಟ್ ಹಾಕಬೇಕಿದೆ. ನಂಗೆ ಎಂಪಿ ನಿಲ್ಲು ಅಂದೋರು ಯಡಿಯೂರಪ್ಪ ನವರು. ನೊಣಬರು ಹಾವೇರಿಯಲ್ಲಿದ್ದಾರೆ, ದಾವಣಗೆರೆಯಲ್ಲಿದ್ದಾರೆ, ಚಿತ್ರದುರ್ಗದಲ್ಲಿದ್ದಾರೆ. ಎಲ್ಲಾ ಕಡೆ ಇರೋರಿಗೆ ಎಲ್ಲಾದರೂ ಒಂದು ಕಡೆ ಟಿಕೆಟ್ ಕೊಡಬೇಕಿತ್ತು ಎಂದರು. ನಾನು ಎರಡು ಮೂರು ದಿನದಲ್ಲಿ ಮಾತನಾಡೋಕೆ ಹೊರಟಿದ್ದೀನಿ. ಕಾರ್ಯಕರ್ತರು ಏನು ಹೇಳ್ತಾರೆ ಕೇಳಿ ತೀರ್ಮಾನ ಮಾಡುವುದಾಗಿ ತಿಳಿಸಿದರು.

ಬೆಳಗಾವಿಗೆ ಜಗದೀಶ್‌ ಶೆಟ್ಟರ್‌ ಹೆಸರೇ ಮುಂಚೂಣಿಯಲ್ಲಿದೆ: ಪ್ರಲ್ಹಾದ್‌ ಜೋಶಿ

ಕಾಂಗ್ರೆಸ್ ನಲ್ಲಿ ನನಗೆ ಪ್ರಮುಖವಾದವರು ಯಾರೂ ಸಂಪರ್ಕ ಮಾಡಿಲ್ಲ. ತೀರ್ಮಾನ ತಗೋಬೇಕಾದವರು ಯಾರೂ ನನ್ನ ಬಳಿ ಮಾತನಾಡಿಲ್ಲ. ಬೇರೆ ಬೇರೆಯವರು ಮಾಡಿದ್ದಾರೆ, ಅವರ ಹೆಸರನ್ನು ಇಲ್ಲಿ ಹೇಳೋಕಾಗಲ್ಲ. ಹೀಗಾಗಿ ನಾನು ಜಾಸ್ತಿ ತಲೆಕೆಡಿಸಿಕೊಂಡಿಲ್ಲ ಎಂದರು. ರಾಜಣ್ಣ ಎರಡು ಪಕ್ಷದ ಅಭ್ಯರ್ಥಿ ಮಾಡಿದ್ರು. ಅವರೇ ಘೋಷಣೆ ಮಾಡಿದ ಮೇಲೆ ನಮ್ಮದೇನಿದೆ ಎಂದರು. ನಾನು ಚಾಲೆಂಜ್ ಮಾಡುತ್ತೇನೆ ಸುರೇಶ್ ಗೌಡರು ಲೀಡ್ ಕೊಡಲಿ ನೋಡೋಣ ಎಂದ ಅವರು ಬಸವರಾಜ್ ಅವರು ರಾಜಣ್ಣ ಅವರ ಸಫೋರ್ಟ್ ನಿಂದ ಎಂಪಿ ಆದೆ ಅಂತಾ ಬಹಿರಂಗವಾಗಿ ಹೇಳಿದ್ದಾರೆ ಎಂದರು. ಈಗ ರಾಜಣ್ಣ ಅವರು ಕಾಂಗ್ರೆಸ್ ಪರ ಗಟ್ಟಿಯಾಗಿ ನಿಂತಿದ್ದಾರೆ. ಈಗ ಹೇಗೆ ಸೋಮಣ್ಣ ಅವರನ್ನು ಗೆಲ್ಲಿಸೋಕೆ ಸಾಧ್ಯ ಎಂದರು.