Asianet Suvarna News Asianet Suvarna News

ಅಧಿಕಾರ ಹಸ್ತಾಂತರ ವಿಚಾರದಲ್ಲಿ ನನ್ನದೇನು ತಪ್ಪಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌- ಬಿಜೆಪಿ 20:20 ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನನ್ನದೇನು ತಪ್ಪಿಲ್ಲ. ಆದರೂ ಈ ವಿಚಾರದಲ್ಲಿ ನನ್ನನ್ನು ಬಲಿಪಶು ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. 

There is nothing wrong with me regarding transfer of power says hd kumaraswamy gvd
Author
First Published Jan 3, 2023, 3:00 AM IST

ಮೈಸೂರು (ಜ.03): ಜೆಡಿಎಸ್‌- ಬಿಜೆಪಿ 20:20 ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನನ್ನದೇನು ತಪ್ಪಿಲ್ಲ. ಆದರೂ ಈ ವಿಚಾರದಲ್ಲಿ ನನ್ನನ್ನು ಬಲಿಪಶು ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. ನಗರದ ನೇರಂಬಳ್ಳಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ಜೆಡಿಎಸ್‌ ಕೆ.ಆರ್‌. ಕ್ಷೇತ್ರ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಶರಣದೊಂದಿಗೆ ಕುಮಾರಣ್ಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 2006ರಲ್ಲಿ ಜೆಡಿಎಸ್‌- ಬಿಜೆಪಿ ಮೈತ್ರಿ ಸರ್ಕಾರ ಮಾಡಬೇಕಾದ್ರೆ ದೆಹಲಿ ನಾಯಕರು ನಿಶ್ಚಯ ಮಾಡಿದ ಸರ್ಕಾರವಲ್ಲ. 

ಯಡಿಯೂರಪ್ಪನವರ ಶಿಷ್ಯ ಕಾ.ಪು. ಸಿದ್ದಲಿಂಗಸ್ವಾಮಿ ಮೂಲಕ ಸ್ಲಿಪ್‌ ಕಳುಹಿಸಿ ನನ್ನನ್ನು ಭೇಟಿ ಮಾಡಿದರು. ಬಿಜೆಪಿಯಲ್ಲಿ ಆದ ನೋವಿನ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಿದರು. ಜೆಡಿಎಸ್‌ ಪಕ್ಷಕ್ಕೆ ಬರುವ ಬಗ್ಗೆ ಮಾತನಾಡಿದರು. ನೀವು ರಾಜೀನಾಮೆ ಕೊಟ್ಟು ಹೊರಗಡೆ ಬಂದ್ರೇ ಕಷ್ಟಆಗುತ್ತದೆ, ದುಡುಕಿ ರಾಜೀನಾಮೆ ನೀಡಬೇಡಿ ಎಂದು ಸಲಹೆ ನೀಡಿದ್ದೆ ಎಂದರು. ಈ ವೇಳೆ ಬಿಜೆಪಿಯಲ್ಲಿದ್ದ ಜನತಾ ಪರಿವಾರದ ಶಾಸಕರು ನನ್ನ ಮೇಲೆ ಒತ್ತಡ ಹೇರಿದರು. ಜಗದೀಶ್‌ ಶೆಟ್ಟರ್‌, ಈಶ್ವರಪ್ಪ ಬಂದು ಭೇಟಿ ಮಾಡಿ ಏನಾದರೂ ಮಾಡಬೇಕು ಎಂದು ಕೇಳಿಕೊಂಡರು. ದೇವೇಗೌಡರ ಭಾವನೆಗಳಿಗೆ ಮೊದಲ ಬಾರಿ ಧಿಕ್ಕರಿಸಿದೆ. ಬಿಜೆಪಿ ಜೊತೆ ಸರ್ಕಾರ ಮಾಡಿದೆ. ಉದಾಸಿ ಮತ್ತು ಕಾರಜೋಳ ಮಾತುಕತೆ ನಡೆಸಿದರು ಎಂದರು.

ಬಿಜೆಪಿಗೂ ಕರ್ನಾಟಕ ರಾಜ್ಯ ಎಟಿಎಂ: ಅಮಿತ್‌ ಶಾಗೆ ಎಚ್‌ಡಿಕೆ ತಿರುಗೇಟು

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ಬಂದ ಎರಡೇ ತಿಂಗಳಿಗೆ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಮನಸ್ತಾಪ ಶುರುವಾಯ್ತು. ಜನಾರ್ದನ ರೆಡ್ಡಿ ನನ್ನ ಮೇಲೆ 150 ಕೋಟಿ ಲಂಚದ ಆರೋಪ ಮಾಡಿದರು. ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ದೇವೇಗೌಡರಿಗೆ ಮಧ್ಯ ಬರಬೇಡಿ ಎಂದು ಹೇಳಿದ್ದಾಗಿ ಅವರು ತಿಳಿಸಿದರು. ನಾನು ಎಂದಿಗೂ ತಪ್ಪು ಮಾಡಿಲ್ಲ. ವೈಕುಂಠ ಏಕಾದಶಿ ದಿವಸ ಹೇಳುತ್ತಿದ್ದೇನೆ. ನಾನು ಅಧಿಕಾರ ಬಿಡಲು ತಯಾರಿಗಿದ್ದೆ. ಆಗ ಬಿಜೆಪಿಯಲ್ಲಿದ್ದ ಯಶವಂತ್‌ ಸಿನ್ಹಾ ಮತ್ತು ದೇವೇಗೌಡರು ಚರ್ಚೆ ಮಾಡಿದರು. ನಂತರ ಹಲವು ರಾಜಕೀಯ ಬೆಳವಣಿಗೆ ಶುರುವಾಯ್ತು. ಅಂದು ಏನು ಮಾತುಕತೆ ಆಯಿತೆಂದು ಇಂದಿಗೂ ಗೊತ್ತಿಲ್ಲ ಎಂದರು.

ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್‌.ಡಿ.ಕುಮಾರಸ್ವಾಮಿ

ಅಗ್ರಿಮೆಂಟ್‌ಗೆ ಸಹಿ ಹಾಕಬೇಕೆಂದು ಒತ್ತಡ ಹೇರಿದರು. ಆದರೆ ನಾನು ಆ ಸಂದರ್ಭದಲ್ಲಿ ಹೇಳಿದ್ದಿಷ್ಟು. ಇದು ದೆಹಲಿ ನಾಯಕರ ಜೊತೆ ಮಾತನಾಡಿ ರಚನೆ ಮಾಡಿದ ಸರ್ಕಾರವಲ್ಲ. ಆದರೂ ನಾನು ಸಹಿ ಹಾಕಲು ನಿರ್ಧರಿಸಿದೆ. ಹೀಗಿದ್ದರೂ ಸರ್ಕಾರ ಪತನವಾಯ್ತು. ನಂತರ ನಮ್ಮ ಪಕ್ಷದ ಶಾಸಕರನ್ನು ಸೆಳೆದು ಸರ್ಕಾರ ಮಾಡಲು ರಚನೆ ಮಾಡಲು ಸಿದ್ದರಾಗಿದ್ರು. ನಾನು ದೇವೇಗೌಡರ ಜೊತೆ ಮಾತನಾಡಿ ಬಿಜೆಪಿಗೆ ಅಧಿಕಾರ ಕೊಡಲು ಸಿದ್ಧನಾದೆ. ಇದರಲ್ಲಿ ನನ್ನ ತಪ್ಪು ಏನು ಇಲ್ಲ. ಆದರೂ ಬಲಿಪಶು ಆಗಿದ್ದು ನಾನು ಎಂದು ಅವರು ಹೇಳಿದರು.

Follow Us:
Download App:
  • android
  • ios