Asianet Suvarna News Asianet Suvarna News

Shivamogga: ನನ್ನೆದುರು ಕಣಕ್ಕಿಳಿ​ಸಲು ಕಾಂಗ್ರೆ​ಸ್‌ಗೆ ಅಭ್ಯರ್ಥಿಯೇ ಇಲ್ಲ: ಜ್ಞಾನೇಂದ್ರ

ತೀರ್ಥಹಳ್ಳಿ ಕ್ಷೇತ್ರದಲ್ಲಿ ನಾನು ಮಾಡಿದ ಪ್ರಗತಿ ಕಾರ್ಯ ನೋಡಿ ಕಾಂಗ್ರೆಸ್‌ ಪಕ್ಷ ನನ್ನ ಎದುರು ಯಾರು ಸ್ಪರ್ಧಿಸಬೇಕು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಿಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

There are no candidates in Congress to contest against me says araga jnanendra rav
Author
First Published Mar 26, 2023, 8:04 AM IST

ಶಿವಮೊಗ್ಗ (ಮಾ.26) : ತೀರ್ಥಹಳ್ಳಿ ಕ್ಷೇತ್ರದಲ್ಲಿ ನಾನು ಮಾಡಿದ ಪ್ರಗತಿ ಕಾರ್ಯ ನೋಡಿ ಕಾಂಗ್ರೆಸ್‌ ಪಕ್ಷ ನನ್ನ ಎದುರು ಯಾರು ಸ್ಪರ್ಧಿಸಬೇಕು ಎಂದು ತೀರ್ಮಾನಕ್ಕೆ ಬರಲು ಸಾಧ್ಯವಾಗದೇ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಿಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ(Araga jnanendra) ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಎದುರು ಯಾರನ್ನು ನಿಲ್ಲಿಸಿದರೆ ನನಗೆ ಫೈಟ್‌ ಕೊಡಬಹುದು ಎಂದು ಯೋಚಿಸುತ್ತಿದ್ದಾರೆ. ನನಗೆ ಬರುವ ಮತಗಳ ಸಮೀಪ ಯಾರು ಬರಬಹುದು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ಟಿಕೆಟ್‌ ನೀಡಿಕೆ ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಆ ಕುರಿತು ಟೀಕೆ ಇಲ್ಲ ಎಂದರು.

ರಕ್ತಕ್ರಾಂತಿ ಹೆಸರಿನಲ್ಲಿ ಶಾಂತಿ ಕದಡುತ್ತಿರುವ ಮಧು ಬಂಗಾರಪ್ಪ: ಕುಮಾರ ಬಂಗಾರಪ್ಪ ವಾಗ್ದಾಳಿ

ಕ್ಷೇತ್ರದಲ್ಲಿ ಕಳಪೆ ರಸ್ತೆ ಆಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿ​ವ​ರು, ನಾನೇ ಎಲ್ಲವನ್ನೂ ನಿಂತು ಮೇಸ್ತ್ರಿ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ. ಆಕಸ್ಮಿಕವಾಗಿ ಎಲ್ಲಿಯಾದರೂ ರಸ್ತೆ ಹಾಳಾಗಿದ್ದರೆ ಸರಿ ಮಾಡಲು ಸೂಚನೆ ನೀಡಿದ್ದೇನೆ ಎಂದರು.

ದೇವರು, ದೈವದ ಬಗ್ಗೆ ನನಗೆ ನಂಬಿಕೆ ಇದೆ. ನಾನು ಯಾವಾಗಲೂ ಇಂತಹ ಕಾರ್ಯಕ್ರಮವನ್ನು ನನ್ನ ಸ್ವಂತ ಊರಾದ ಗುಡ್ಡೆಕೊಪ್ಪದಲ್ಲಿ ನಡೆಸುತ್ತೇನೆ. ಯಕ್ಷಗಾನ ಮೇರು ಕಲಾವಿದರು ನನಗೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದ ರಮೇಶ್‌ ನನ್ನ ಬಗ್ಗೆ ಹಾಡು ಬರೆದಿದ್ದಾರೆ. ಅದನ್ನು ಹಾಡುತ್ತೇನೆ ಎಂದು ಪಟ್ಲಾ ಸತೀಶ್‌ ಹೇಳಿದರು. ಮತ್ತು ಹಾಡಿದ್ದಾರೆ. ಇದರಲ್ಲಿ ವಿಶೇಷತೆ ಏನಿದೆ? ಎಂದರು.

ದೈವ, ದೇವರನ್ನು ನಾನು ನಂಬುತ್ತೇನೆ. ದೈವ, ದೇವರು ಇಲ್ಲವೇ ಇಲ್ಲ, ಅದರಲ್ಲಿ ನಂಬಿಕೆ ಇಲ್ಲ ಎಂದು ವಿಚಾರವಂತರಂತೆ ಫೋಸು ಕೊಡುತ್ತಿದ್ದವರು ಈಗ ಏನೇನೋ ಮಾತನಾಡುತ್ತಿದ್ದಾರೆ. ಅವರು ಮಾಡಿದ ದೈವದ ನಾಟಕಕ್ಕೂ ನಾನು ಟೀಕೆ ಮಾಡುವುದಿಲ್ಲ. ಆದರೆ ತೀರ್ಥಹಳ್ಳಿಯಲ್ಲಿ ದೈವದ ಪಾಲಿಟಿಕ್ಸ್‌ ನಡೆಯುವುದಿಲ್ಲ ಎಂದು ಹೇಳಿದರು.

 

ದಾವಣಗೆರೆ ಕಾರ್ಯ​ಕ್ರ​ಮ ಜನ​ಸ್ಪಂದ​ನೆಗೆ ಸಾಕ್ಷಿ: ಜ್ಞಾನೇಂದ್ರ

ಶಿವಮೊಗ್ಗ: ಚುನಾವಣೆ ಪೂರ್ವ ಜನಸ್ಪಂದನೆ ಹೇಗಿದೆ ಅಂತ ದಾವಣಗೆರೆ ಕಾರ್ಯಕ್ರಮದಿಂದ ಗೊತ್ತಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮದಿಂದ ಬಿಜೆಪಿಗೆ ಹೊಸ ಹುರುಪು ಬಂದಿದೆ. ಭಾರಿ ಸಂಖ್ಯೆಯಲ್ಲಿ ಜನ ಅಭಿಮಾನದಿಂದ ಸೇರಿದ್ದರು. ದಾವಣಗೆರೆ ಕಾರ್ಯಕ್ರಮ ಮುಗಿಸಿ ಶಿವಮೊಗ್ಗ ಏರ್‌ಪೋರ್ಚ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವೆಲ್ಲರೂ ಬರ ಮಾಡಿಕೊಂಡೆವು. ಪಕ್ಷದ ಆಯ್ದ ಕಾರ್ಯಕರ್ತರನ್ನು ಮೋದಿ ಅವರು ಭೇಟಿಯಾಗಿದ್ದಾರೆ ಎಂದರು.

ಆಯನೂರು ಮಂಜುನಾಥ್‌ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ; ಅವರನ್ನ ವರಿಷ್ಠರು ವಿಚಾರಿಸಿಕೊಳ್ತಾರೆ: ಈಶ್ವರಪ್ಪ

ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಈ ಹೊಸ ವಿಮಾನ ನಿಲ್ದಾಣಕ್ಕೆ ಪ್ರಧಾನಿಗಳು ಆಗಮಿಸಿದ್ದಾರೆ. ರಾಜ್ಯದ ಯಾವುದೇ ಏರ್‌ಪೋರ್ಚ್‌ಗೆ ಇಂತಹ ಅವಕಾಶ ಸಿಗುವುದಿಲ್ಲ.

ಶಿವಮೊಗ್ಗದಲ್ಲಿ ಏರ್‌ಪೋರ್ಚ್‌ ನಿರ್ಮಾ​ಣ​ವಾ​ದ ನಂತರ ಪ್ರಧಾನಿ ಮೋದಿ ಎರಡನೇ ಬಾರಿ ಬಂದಿದ್ದಾರೆ. ಸಧ್ಯದಲ್ಲಿಯೇ ಇಲ್ಲಿಂದ ಡೊಮೆಸ್ಟಿಕ್‌ ವಿಮಾನಗಳು ಓಡಾಡಲಿದೆ ಎಂದು ತಿಳಿಸಿದರು.

Follow Us:
Download App:
  • android
  • ios