Asianet Suvarna News Asianet Suvarna News

ಕೊನೆಗೂ ಪಟ್ಟಿ ಬಹಿರಂಗ, ಯಾರಿಗೆಲ್ಲ ಮಂತ್ರಿಗಿರಿ? ಯಾವ ಖಾತೆ?

ಅಂತೂ ಸಚಿವ ಸಂಪುಟ ಪ್ರಹಸನಕ್ಕೆ ತೆರೆ/ 10 ಜನ ಶಾಸಕರಿಂದ ಸಚಿವರಾಗಿ ಪ್ರಮಾಣ ಸ್ವೀಕಾರ/ ಎಲ್ಲರೂ ಉಪಚುನಾವಣೆಯಲ್ಲಿ ಗೆದ್ದು ಬಂದವರೆ/ ಮೂಲ ಬಿಜೆಪಿಗರಿಗೆ ಕೈತಪ್ಪಿದ ಸ್ಥಾನ

The list of New cabinet Minister Karnataka after BY Election
Author
Bengaluru, First Published Feb 5, 2020, 11:22 PM IST

ಬೆಂಗಳೂರು(ಫೆ. 05)  10 ಜನರು ಮಾತ್ರ ಸಂಪುಟ ಸೇರಿಸಿಕೊಳ್ಳಲಾಗುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಹಾಗಾದರೆ ಸಚಿವ ಸ್ಥಾನ ಪಡೆದುಕೊಳ್ಳುತ್ತಿರುವವರು ಯಾರು?

ದೆಹಲಿಯಿಂದ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದು, 10 ಜನಕ್ಕೆ ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಇದೀಗ ಪಟ್ಟಿಯನ್ನು ರಾಜ್ಯಪಾಪರಿಗೆ ರವಾನಿಸಲಾಗಿದೆ.

'ನನ್ನ ಮನೆ ಮುಂದೆ ಕಾಯ್ತಿದ್ದವ ದೊಡ್ಡ ದೊಡ್ಡ ಮಾತಾಡ್ತಾನೆ' ಡಿಕೆ ಡಿಚ್ಚಿ

ನೂತನ ಸಚಿವರು ರಾಜಭವನದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಪ್ರಮಾಣ ತೆಗೆದುಕೊಳ್ಳಲಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರದಿಂದ ಸಿಡಿದು ಹೊರಬಂದಿದ್ದ ಎಲ್ಲರೂ ಅನರ್ಹತೆ ಶಿಕ್ಷೆಗೂ ಗುರಿಯಾಗಿದ್ದರು. ಮತ್ತೆ ಚುನಾವಣೆ ಎದುರಿಸಿ ಗೆದ್ದು ಬಂದು ಇದೀಗ ಕ್ಯಾಬಿನೆಟ್ ಸೇರಿಕೊಳ್ಳುತ್ತಿದ್ದಾರೆ.

ಹಿಂದೆ ಮಿತ್ರಮಂಡಳಿಯ ನಾಯಕತ್ವ ವಹಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ತಮಗೆ ಜಲಸಂಪನ್ಮೂಲ ಖಾತೆ ಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಸಚಿವ ಸಂಪುಟ ವಿಸ್ತರಣೆ ನಂತರ ಖಾತೆ ಹಂಚಿಕೆಯೂ ಅಷ್ಟೆ ಕಗ್ಗಂಟಾಗುವುದರಲ್ಲಿ ಅನುಮಾನ ಇಲ್ಲ.

ನೂತನ ಸಚಿವರ ಪಟ್ಟಿ

1. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್

2. ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್

3. ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್

4. ಯಶವಂತಪುರ ಶಾಸಕ  S.T.ಸೋಮಶೇಖರ್

5. ವಿಜಯನಗರ ಶಾಸಕ ಆನಂದ್ ಸಿಂಗ್

6. ಕೆಆರ್ ಪೇಟೆ ಶಾಸಕ ನಾರಾಯಣ ಗೌಡ

7. ಕೆಆರ್ ಪುರ ಶಾಸಕ ಭೈರತಿ ಬಸವರಾಜ್

8.  ಮಹಾಲಕ್ಷ್ಮೀ ಲೇಔಟ್ ಶಾಸಕ ಗೋಪಾಲಯ್ಯ

9. ಕಾಗವಾಡ ಶಾಸಕ  ಶ್ರೀಮಂತ್ ಪಾಟೀಲ್

10. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ

 

 

Follow Us:
Download App:
  • android
  • ios