ಆ ಕಾಲದಲ್ಲಿ ರಾಜಕೀಯ ಪರಿಸ್ಥಿತಿಗಳು ಹೇಗಿತ್ತು? ರಾಜಕೀಯ ಹೇಗೆ ಗುಲಾಮಗಿರಿಗೆ ಒಳಗಾಗಿತ್ತು ಅನ್ನೋದನ್ನ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ತೋರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಮಾ.19): ಆ ಕಾಲದಲ್ಲಿ ರಾಜಕೀಯ ಪರಿಸ್ಥಿತಿಗಳು ಹೇಗಿತ್ತು? ರಾಜಕೀಯ ಹೇಗೆ ಗುಲಾಮಗಿರಿಗೆ ಒಳಗಾಗಿತ್ತು ಅನ್ನೋದನ್ನ 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಸಿನಿಮಾ ತೋರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಕಾಂಗ್ರೆಸ್‌ಗೆ (Congress) ಟಾಂಗ್ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಇಂದು ಬಿಜೆಪಿ (BJP) ರಾಜ್ಯಾಧ್ಯಕ್ಷ, ದ.ಕ ಸಂಸದ ನಳಿನ್ ಕುಮಾರ್ ಕಟೀಲ್ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದರು. ಮಂಗಳೂರಿನ ಭಾರತ್ ಬಿಗ್ ಸಿನಿಮಾಸ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆ ಚಿತ್ರ ವೀಕ್ಷಿಸಿದ ನಳಿನ್ ಕಟೀಲ್, ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. 'ಕಾಶ್ಮೀರ್ ಫೈಲ್ಸ್' ಕಾಶ್ಮೀರದ ಸತ್ಯ ಘಟನೆಗಳ ಆಧಾರಿತ ಸಿನಿಮಾ. 

ಕಾಶ್ಮೀರ ಪಂಡಿತರ ಕಷ್ಟದ ದಿನಗಳನ್ನು ಜನರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಸುಧೀರ್ಘ ಅವಧಿ ಬಳಿಕ ಆಗಿದೆ. ಶ್ಯಾಂ ಪ್ರಸಾದ್ ಮುಖರ್ಜಿಯವರ ಕಾಶ್ಮೀರ ನಮ್ಮದು ಎಂಬ ಹೋರಾಟ ಯಾಕಾಗಿ ನಡೀತು ಅನ್ನೋದು ಈಗ ಸ್ಪಷ್ಟವಾಗಿದೆ. ಪ್ರತ್ಯೇಕತವಾದದ ಹೆಸರಲ್ಲಿ ಪಂಡಿತರ ಮೇಲೆ ನಡೆದ ದಾಳಿ, ಹತ್ಯೆಗಳು ಸ್ಪಷ್ಟವಾಗಿ ಚಿತ್ರಿತವಾಗಿದೆ. ಆ ಕಾಲದಲ್ಲಿ ರಾಜಕೀಯ ಪರಿಸ್ಥಿತಿಗಳು ಹೇಗಿತ್ತು? ರಾಜಕೀಯ ಹೇಗೆ ಗುಲಾಮಗಿರಿಗೆ ಒಳಗಾಗಿತ್ತು ಅನ್ನೋದನ್ನ ಸಿನಿಮಾ ತೋರಿಸಿದೆ ಎಂದರು. ಅಲ್ಲದೇ 370ನೇ ವಿಧಿ ರದ್ದಾದಗ ಹತ್ತಾರು ಜನ ವಿರೋಧ ಮಾಡಿದ್ರು. ಆದ್ರೆ ಅದರಿಂದ ಪಂಡಿತರು ಮತ್ತು ಕಾಶ್ಮೀರದ ಮೂಲ ಜನರಿಗೆ ಯಾವ ನ್ಯಾಯ ಸಿಗುತ್ತೆ ಅನ್ನೋದು ಗೊತ್ತಾಗುತ್ತೆ. 

7 ದಿನದಲ್ಲಿ ₹100 ಕೋಟಿ ಗಳಿಸಿದ ‘The Kashmir Files’: ₹15 ಕೋಟಿ ವೆಚ್ಚದ ಚಿತ್ರ ಈಗ ಬ್ಲಾಕ್‌ಬಸ್ಟರ್‌!

ನಿರ್ದೇಶಕರು ಪರಿಶ್ರಮ ಹಾಕಿ ನೈಜ ಘಟನೆ ಜನರ ಮುಂದೆ ಇಟ್ಟಿದ್ದಾರೆ.‌ ಈ ಘಟನೆ ನೋಡಿದಾಗ ಭಟ್ಕಳದ ಘಟನೆ ನೆನಪಾಗುತ್ತೆ, ಅಲ್ಲಿ ಇದೇ ಆಗಿತ್ತು. ಜಗನ್ನಾಥ ಶೆಟ್ಟಿ ಆಯೋಗದ ವರದಿ ಬಂದು ಅದರ ಚಿತ್ರ ಬಂದರೂ ಇದೇ ರೀತಿ ಇರುತ್ತೆ. ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಮುಖ ಉಳಿಸೋ ಕೆಲಸ ಮಾಡ್ತಿದಾರೆ. ಈ ಚಿತ್ರದಲ್ಲಿ ಬಂದ ಖಳನಾಯಕ ಆಗಿನ ಪ್ರಧಾನಿಗೆ ಕೈ ಕುಲುಕೋದು ಕಾಣುತ್ತೆ. ಇದನ್ನ ಸಿದ್ದರಾಮಯ್ಯ ಹೇಗೆ ಸಮರ್ಥನೆ ಮಾಡ್ತಾರೆ. ಈ ಇಡೀ ಘಟನೆ ಮತ್ತು ಪ್ರತ್ಯೇಕವಾದಿಗಳ ಆಟಕ್ಕೆ ಕಾಂಗ್ರೆಸ್ ಕಾರಣ, ಇದರ ಹೇಡಿ ಸಂಸ್ಕೃತಿ ಕಾರಣ. ದೆಹಲಿ ಬೀದಿಯಲ್ಲಿರೋ ಕಾಶ್ಮೀರಿ ಪಂಡಿತರಿಗೆ ಕಾಂಗ್ರೆಸ್ ನ್ಯಾಯ ಕೊಡಲಿ ಎಂದರು.

ಕನ್ನಡ ಅವತರಣಿಕೆಯಲ್ಲಿ ಬಿಡುಗಡೆ ಮಾಡಲು ರಾಜ್ಯ ಬಿಜೆಪಿ ಚಿಂತನೆ: ಈಗ ಇಡೀ‌ ದೇಶದಲ್ಲಿ ಕಾಶ್ಮೀರ ಪಂಡಿತರ ಕುರಿತು ಬಿಡುಗಡೆಯಾಗಿರುವ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ಬಗ್ಗೆಯೇ ಚರ್ಚೆ. 'ದಿ ಕಾಶ್ಮೀರಿ ಫೈಲ್ಸ್' ಚಿತ್ರದ ಬಗ್ಗೆ ಪರ ವಿರೋಧ ಎರಡು ಚರ್ಚೆಯಾಗುತ್ತಿದೆ. ಇದರ ನಡುವೆ ಬಿಜೆಪಿ ಮಾತ್ರ ಈ ಸಿನಿಮಾವನ್ನ ಪ್ರತಿಯೊಬ್ಬ ಭಾರತೀಯರು ನೋಡಬೇಕು ಎಂದು ಇಡೀ ಪ್ರದರ್ಶನವನ್ನೇ ಬುಕ್ ಮಾಡಿ ತನ್ನ ಕಾರ್ಯಕರ್ತರಿಗೆ ಉಚಿತವಾಗಿ ಸಿನಿಮಾವನ್ನ ತೊರಿಸುತ್ತಿದೆ. ವಿವೇಕ್ ಆಗ್ನಿಹೊತ್ರಿ (Vivek Agnihotri) ನಿರ್ದೇಶನದ 'ದಿ ಕಾಶ್ಮೀರಿ ಫೈಲ್ಸ್' ಚಿತ್ರ ಸಧ್ಯಕ್ಕೆ ಹಿಂದೆ ಭಾಷೆಯಲ್ಲಿ ಪ್ರದರ್ಶನವಾಗ್ತಿದೆ. ಹಿಂದಿ ಭಾಷೆಯಲ್ಲಿರೋದ್ರಿಂದ ಸಿನಿಮಾ ನೋಡಲು ಕೆಲವರು ಹಿಂಜರಿಯುತ್ತಿದ್ದಾರೆ. 

The Kashmir Files Free Download ಲಿಂಕ್‌ ಬಗ್ಗೆ ಸೈಬರ್‌ ತಜ್ಞರ ಎಚ್ಚರಿಕೆ!

ಇದಕ್ಕಾಗಿ ರಾಜ್ಯ ಬಿಜೆಪಿ ಈ ಸಿನಿಮಾವನ್ನ ಕನ್ನಡಕ್ಕೆ ಡಬ್ಬಿಂಗ್ (Kannada version) ಮಾಡಿ ಪ್ರದರ್ಶನ ಮಾಡಿಸಿದರೆ ಹೇಗೆ ಎಂದು ಚಿಂತನೆ ನಡೆಸಿದಯಂತೆ. 'ದಿ‌ ಕಾಶ್ಮೀರ ಫೈಲ್ಸ್' ಚಿತ್ರವನ್ನ ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಇಡಿ ರಾಜ್ಯದ ಜನತೆಯ ಮುಂದೆ ಇಡಬೇಕು ಎಂದು ಕೆಲ ಸಚಿವರ ಮುಂದೆ ಸಿಎಂ ಬೊಮ್ಮಾಯಿ‌ ಸಹ ತಮ್ಮ ಇಂಗಿತವನ್ನ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸಹ 'ದಿ ಕಾಶ್ಮೀರಿ ಫೈಲ್ಸ್' ಚಿತ್ರವನ್ನ ಕನ್ನಡಕ್ಕೆ ಡಬ್ಬಿಂಗ್ ಮಾಡಿಸಿ ಇಡೀ ರಾಜ್ಯದ ತಮ್ಮ ಕಾರ್ಯಕರ್ತರಿಗೆ ತೊರಿಸುವ ತವಕದಲ್ಲಿದೆ. ಅಂದುಕೊಂಡ ಹಾಗೇ ನಡೆದರೆ ಶೀಘ್ರದಲ್ಲೇ ಕನ್ನಡ ಅವತರಣಿಕೆಯಲ್ಲಿ 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ರಾಜ್ಯದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.