Asianet Suvarna News Asianet Suvarna News

ಕಾಂಗ್ರೆಸ್ ಸರ್ಕಾರ ಪತನಗೊಳಿಸುವ ವಿಪಕ್ಷಗಳ ಹುನ್ನಾರ ಫಲಿಸದು: ಶಾಮನೂರು ಶಿವಶಂಕರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಆಡಳಿತ ಸಹಿಸಲಾಗದೇ, ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಆರೋಪಿಸಿದರು. 

The efforts of opposition to topple the Congress govt is a result Says Shamanur Shivashankarappa gvd
Author
First Published Sep 28, 2024, 5:24 PM IST | Last Updated Sep 28, 2024, 5:24 PM IST

ದಾವಣಗೆರೆ (ಸೆ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಆಡಳಿತ ಸಹಿಸಲಾಗದೇ, ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಬಿಜೆಪಿ ನಾಯಕರು ಹುನ್ನಾರ ನಡೆಸಿದ್ದಾರೆ ಎಂದು ದಾವಣಗೆರೆ ದಕ್ಷಿಣ ಕ್ಷೇತ್ರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಆರೋಪಿಸಿದರು. ನಗರದ ಪಾಲಿಕೆ ವ್ಯಾಪ್ತಿಯ 6ನೇ ವಾರ್ಡ್‌ನ ವಿಜಯ ನಗರ ಬಡಾವಣೆಯಲ್ಲಿ ಪಾಲಿಕೆಯ 15ನೇ ಹಣಕಾಸು ಯೋಜನೆ ಹಾಗೂ ಎಸ್‌ಎಫ್‌ಸಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಸಿದ್ದರಾಮಯ್ಯಗೆ ಟಾರ್ಗೆಟ್ ಮಾಡಿರುವ ಬಿಜೆಪಿಯವರು ರಾಜ್ಯದ ಕಾಂಗ್ರೆಸ್ ಸರ್ಕಾರ ಕೆಡವಲು ನಡೆಸಿರುವ ಹುನ್ನಾರ ಫಲಿಸುವುದಿಲ್ಲ ಎಂದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಪಾತ್ರವೇನೂ ಇಲ್ಲ. ಈ ವಿಚಾರ ಸ್ವತಃ ಬಿಜೆಪಿ ನಾಯಕರಿಗೆ ಗೊತ್ತಿದ್ದರೂ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರೆ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪರ ಕಾಂಗ್ರೆಸ್ ಹೈಮಾಂಡ್‌, ನಮ್ಮೆಲ್ಲಾ ಶಾಸಕರೂ ಇದ್ದೇವೆ ಎಂದು ಶಾಮನೂರು ಹೇಳಿದರು.

ಅದ್ದೂರಿಯಾಗಿ ಜರುಗಿದ ಏಷ್ಯಾದ 2ನೇ ಅತಿದೊಡ್ಡ ಹಿಂದೂ ಗಣೇಶನ ಬೃಹತ್ ಶೋಭಾಯಾತ್ರೆ!

ರಾಜ್ಯದ ಜನತೆ ಆಶೀರ್ವಾದ ಸಿದ್ದರಾಮಯ್ಯ, ಕಾಂಗ್ರೆಸ್ ಮೇಲಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠವನ್ನೇ ಜನ ಕಲಿಸಲಿದ್ದಾರೆ. ಬಿಜೆಪಿ-ಜೆಡಿಎಸ್ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ವಿದ್ಯಾಸಿರಿ, ಕೃಷಿಭಾಗ್ಯ, ಪಶುಭಾಗ್ಯ, ಇಂದಿರಾ ಕ್ಯಾಂಟೀಸ್‌ ಯೋಜನೆಗಳನ್ನು ವಿರೋಧಿಸಿದ್ದರು. ಆದ್ದರಿಂದ ಇವೆರೆಡೂ ಪಕ್ಷಗಳೂ ಜನವಿರೋಧಿಯಾಗಿವೆ ಎಂದು ಟೀಕಿಸಿದರು. ರಾಜಭವನ ದುರ್ಬಳಕೆ ಮೂಲಕ ವಿಪಕ್ಷಗಳು ಸರ್ಕಾರವನ್ನು ಕೆಡವುದಕ್ಕೆ ಸಂಚು ನಡೆಸಿವೆ. ಕುತಂತ್ರ, ಹುನ್ನಾರಗಳಿಗೆ ಸಿಎಂ ಕಾನೂನಾತ್ಮಕವಾಗಿಯೇ ತಿರುಗೇಟು ನೀಡಲಿದ್ದಾರೆ. 

ರಾಜ್ಯದಲ್ಲಿ 5 ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗುತ್ತಿದೆ. ಈ ಭಾಗದಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದವರು ಬಿಜೆಪಿ ಧೋರಣೆ ಖಂಡಿಸಿ, ಕಾಂಗ್ರೆಸ್ ಅಭಿವೃದ್ಧಿಗೆ ಚಿಂತನೆಗೆ ಬೆಂಬಲಿಸುತ್ತಿದ್ದಾರೆ. ಸ್ವತಃ ಬಿಜೆಪಿಯವರಿಗೆ ನಮ್ಮ ಪಕ್ಷದ ಆಡಳಿತ, ಜನಪರ ಕಾಳಜಿ, ಅಭಿವೃದ್ಧಿ ಕಾರ್ಯಗಳು ಮೆಚ್ಚುಗೆಯಾಗುತ್ತಿವೆ. ವಿಪಕ್ಷಗಳ ತಂತ್ರಗಳೂ ಫಲಿಸುವುದಿಲ್ಲ, ಸಿದ್ದರಾಮಯ್ಯ ಅವರಿಗಾಗಲೀ, ಕಾಂಗ್ರೆಸ್ ಸರ್ಕಾರಕ್ಕಾಗಲೀ ಏನೂ ಆಗುವುದಿಲ್ಲ ಎಂದು ಶಿವಶಂಕರಪ್ಪ ಹೇಳಿದರು.

ಬಿಜೆಪಿ ಶುದ್ಧೀಕರಣಕ್ಕೆ ಈಶ್ವರಪ್ಪ ಮನೆಯಲ್ಲಿ ಸಭೆ: ಶಾಸಕ ರಮೇಶ್‌ ಜಾರಕಿಹೊಳಿ

ಪಾಲಿಕೆ ಸದಸ್ಯ ಎಲ್.ಡಿ.ಗೋಣೆಪ್ಪ ಮಾತನಾಡಿ, ಕಾಂಗ್ರೆಸ್ ಅಭಿವೃದ್ಧಿಪರ ಕಾಳಜಿ ಮೆಚ್ಚಿ, ಹಿರಿಯ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನರ ಕಾಳಜಿಯನ್ನು ಮೆಚ್ಚಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದೇವೆ ಎಂದರು. ಮೇಯರ್‌ ಬಿ.ಎಚ್.ವಿನಾಯಕ ಪೈಲ್ವಾನ್, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಪಾಲಿಕೆ ಸದಸ್ಯರಾದ ಎ.ಬಿ. ರಹೀಂ ಸಾಬ್, ಎ.ನಾಗರಾಜ, ಆಯುಕ್ತೆ ರೇಣುಕಾ, ಮುಖಂಡರಾದ ಎಲ್.ಜಿ.ಬಸವರಾಜ, ಇಟ್ಟಿಗುಡಿ ಮಂಜುನಾಥ, ಜಗದೀಶ, ಗೀತಾ ಚಂದ್ರಶೇಖರ, ಎಲ್.ಜಿ.ಪರಶುರಾಮ, ರುದ್ರಪ್ಪ, ಹನುಮಂತಪ್ಪ ಇತರರು ಇದ್ದರು.

Latest Videos
Follow Us:
Download App:
  • android
  • ios