ಶಾಲೆಗಳಿಗೆ ಬಳಿದಿರುವ ಕೇಸರಿ ಬಣ್ಣ ಬದಲಾಗಬೇಕು: ಸಚಿವ ಸತೀಶ್‌ ಜಾರಕಿಹೊಳಿ

ರಾಜ್ಯದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಬದಲಾವಣೆ ಆಗಬೇಕಿದೆ. ಶಾಲೆಗಳಿಗೆ ಬಳಿದಿರುವ ಕೇಸರಿ ಬಣ್ಣವನ್ನು ತೆಗೆದು ಸಂವಿಧಾನದ ಬಣ್ಣವನ್ನು ಬಳಿಯಬೇಕಿದೆ. ಇದೆಲ್ಲವನ್ನೂ ಕಾಂಗ್ರೆಸ್‌ ಸರ್ಕಾರ ಮಾಡಲಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. 

The color of saffron painted on schools should be changed Says Minister Satish Jarkiholi gvd

ಬೆಂಗಳೂರು (ಮೇ.27): ರಾಜ್ಯದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಬದಲಾವಣೆ ಆಗಬೇಕಿದೆ. ಶಾಲೆಗಳಿಗೆ ಬಳಿದಿರುವ ಕೇಸರಿ ಬಣ್ಣವನ್ನು ತೆಗೆದು ಸಂವಿಧಾನದ ಬಣ್ಣವನ್ನು ಬಳಿಯಬೇಕಿದೆ. ಇದೆಲ್ಲವನ್ನೂ ಕಾಂಗ್ರೆಸ್‌ ಸರ್ಕಾರ ಮಾಡಲಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಶುಕ್ರವಾರ ‘ಎದ್ದೇಳು ಕರ್ನಾಟಕ’ ಸಂಘಟನೆ ನಗರದಲ್ಲಿ ಆಯೋಜಿಸಿದ್ದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾವೇಶ’ ಮತ್ತು ಸ್ವಾತಂತ್ರ್ಯ ಸೇನಾನಿ ಎಚ್‌.ಎಸ್‌.ದೊರೆಸ್ವಾಮಿ ಅವರಿಗೆ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಮಾತನಾಡಿದರು. ಮೇ 28 ವಿ.ಡಿ.ಸಾವರ್ಕರ್‌ ಹುಟ್ಟಿದ ದಿನವಾದ ಕಾರಣ ಅಂದು ಭಾವನೆಗಳಿಲ್ಲದ ಸಂಸತ್ತಿನ ನೂತನ ಭವನವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಆದರೆ ಅದನ್ನು ಸಾರ್ವಜನಿಕವಾಗಿ ಅವರು ಎಲ್ಲೂ ಹೇಳುತ್ತಿಲ್ಲ ಎಂದು ಟೀಕಿಸಿದರು. ‘ಎದ್ದೇಳು ಕರ್ನಾಟಕ ಸಂಘಟನೆ’ಯ ಜೆ.ಎಂ.ವೀರಸಂಗಯ್ಯ, ಶಾಸಕರಾದ ಬಿ.ಆರ್‌.ಪಾಟೀಲ್‌, ದರ್ಶನ್‌ ಪುಟ್ಟಣ್ಣಯ್ಯ, ಕೆ.ಎಲ್‌.ಅಶೋಕ್‌, ಫಾದರ್‌ ಅರುಣ್‌ ಲೂಯಿಸ್‌, ಹಿರಿಯ ಪತ್ರಕರ್ತೆ ವಿಜಯಮ್ಮ ಉಪಸ್ಥಿತರಿದ್ದರು.

ಕಾಂಗ್ರೆಸ್ ಉಚಿತ ಯೋಜನೆಗಳನ್ನು ಕೊಡುವಲ್ಲಿ‌ ವಿಫಲ: ನೆಟ್ಟಾರು ಪತ್ನಿಗೆ ಮತ್ತೆ‌ ಉದ್ಯೋಗ ನೀಡಿ ಎಂದ ನಳಿನ್‌

ಎಐಸಿಸಿ ಅಧ್ಯಕ್ಷ ಖರ್ಗೆಗೆ ಅಭಿನಂದನೆ: ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಸತೀಶ್‌ ಜಾರಕಿಹೊಳಿ ಅವರ ನೇತೃತ್ವದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರು ದೆಹಲಿಯಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಭೂತಪೂರ್ವ ಜಯಗಳಿಸಿ, ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ನಿಯೋಗದೊಂದಿಗೆ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲಾ ಶಾಸಕರು, ಪ್ರಮುಖ ಮುಖಂಡರು ಇದ್ದರು.

ನಮ್ಮ ಕುಟುಂಬದಲ್ಲಿ ಮತ್ತೆ ಮಂತ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಹೊಸ ಕಾಂಗ್ರೆಸ್‌ ಸರ್ಕಾರದಲ್ಲಿ ಬೆಳಗಾವಿ ಜಿಲ್ಲೆ ಯಮಕನಮರಡಿ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಲೇ ಇತ್ತ ‘ನಮ್ಮ ಕುಟುಂಬದಲ್ಲಿ ಮತ್ತೆ ರಾಜ್ಯದ ಮಂತ್ರಿ’ ಶೀರ್ಷಿಕೆಯ ವಿಡಿಯೋ ವೈರಲ… ಆಗಿದೆ. ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ರಚನೆಯಾದರೂ ಸಾಹುಕಾರ್‌ ಜಾರಕಿಹೊಳಿ ಕುಟುಂಬದ ಹೆಸರು ಸಚಿವ ಸಂಪುಟ ಪ್ರಮಾಣ ವಚನ ಪಟ್ಟಿಯಲ್ಲಿ ಇದ್ದೇ ಇರುತ್ತದೆ. ದಟ್‌ ಈಸ್‌ ಕಿಂಗ್‌ ಮೇಕರ್‌ ಫ್ಯಾಮಿಲಿ’ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ವ್‌ರ್‌ ಹಾಕುತ್ತಿದ್ದಾರೆ.

ಗ್ಯಾರಂಟಿ ಭರವಸೆ ಈಡೇರಿಸುತ್ತೇವೆ, ಸಮಯ ಬೇಕು: ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಇರುವ ಜಾರಕಿಹೊಳಿ ಕುಟುಂಬದ ಅಭಿಮಾನಿಗಳು 2004ರಿಂದ ಯಾವುದೇ ಸರ್ಕಾರ ಇದ್ದರೂ ಜಾರಕಿಹೊಳಿ ಕುಟುಂಬಕ್ಕೆ ಸಚಿವ ಸ್ಥಾನ ಫಿಕ್ಸ್‌ ಎಂಬುದನ್ನು ವಿಡಿಯೋ ವೈರಲ್‌ ಮೂಲಕ ಬಿತ್ತರಿಸುತ್ತಿದ್ದಾರೆ. 2004ರಲ್ಲಿ ಪ್ರಥಮ ಬಾರಿಗೆ ಜಾರಕಿಹೊಳಿ ಕುಟುಂಬದಿಂದ ಸತೀಶ್‌ ಜಾರಕಿಹೊಳಿ ಸಚಿವರಾಗಿ ಆಯ್ಕೆಯಾಗಿದ್ದರು. ನಂತರ 17 ವರ್ಷಗಳ ಕಾಲ ಯಾವುದೇ ಸರ್ಕಾರ ಬಂದರೂ ಜಾರಕಿಹೊಳಿ ಸಹೋದರರ ಪೈಕಿ ಬ್ಬರಾದರೂ ಮಂತ್ರಿ ಪದವಿ ಕಾಯ್ದುಕೊಳ್ಳುವಲ್ಲಿ ಸಫಲರಾಗುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಸಿಡಿ ಸುಳಿಗೆ ಸಿಕ್ಕು ರಮೇಶ ಜಾರಕಿಹೊಳಿ 2021ರ ಮಾಚ್‌ರ್‍ 3ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ 2021ರಿಂದ ಜಾರಕಿಹೊಳಿ ಕುಟುಂಬದಲ್ಲಿ ಯಾರೂ ಸಚಿವರಿರಲಿಲ್ಲ. ಈಗ ಕಾಂಗ್ರೆಸ್‌ ಸರ್ಕಾರದಲ್ಲಿ ಸತೀಶ್‌ ಜಾರಕಿಹೊಳಿ ಮಂತ್ರಿಯಾಗುವ ಮೂಲಕ ಕುಟುಂಬಕ್ಕೆ ಮಂತ್ರಿಗಿರಿ ತಪ್ಪುವುದಿಲ್ಲ ಎಂಬ ಸಂದೇಶ ಸಾರಿದ್ದಾರೆ.

Latest Videos
Follow Us:
Download App:
  • android
  • ios