ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇದುವರೆಗಿನ ಜನಪರವಾದ ಕಾರ್ಯಕ್ರಮ, ಯೋಜನೆ, ಸಾಧನೆಯನ್ನು ಮುಖಂಡರು, ಕಾರ್ಯಕರ್ತರು ಪರಿಣಾಮಕಾರಿಯಾಗಿ ಮತದಾರರಿಗೆ ತಲುಪಿಸಿದಲ್ಲಿ ರಾಜ್ಯದಲ್ಲಿ ಪುನಃ ಬಿಜೆಪಿ ಅಧಿಕಾರ ಗಳಿಸುವುದು ನಿಶ್ಚಿತ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. 

ಶಿಕಾರಿಪುರ (ಮಾ.04): ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇದುವರೆಗಿನ ಜನಪರವಾದ ಕಾರ್ಯಕ್ರಮ, ಯೋಜನೆ, ಸಾಧನೆಯನ್ನು ಮುಖಂಡರು, ಕಾರ್ಯಕರ್ತರು ಪರಿಣಾಮಕಾರಿಯಾಗಿ ಮತದಾರರಿಗೆ ತಲುಪಿಸಿದಲ್ಲಿ ರಾಜ್ಯದಲ್ಲಿ ಪುನಃ ಬಿಜೆಪಿ ಅಧಿಕಾರ ಗಳಿಸುವುದು ನಿಶ್ಚಿತ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶುಕ್ರವಾರ ಪಟ್ಟಣದ ಮಾಳೇರಕೇರಿಯಲ್ಲಿನ ಬಿಜೆಪಿ ಕಚೇರಿ ಮುಂಭಾಗ ಪ್ರಗತಿ ರಥ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರದಲ್ಲಿನ 76 ವರ್ಷದಿಂದ ದೇಶ ಕಟ್ಟಿದ ಕಾಂಗ್ರೆಸ್‌ ಸಹಿತ ವಿರೋಧ ಪಕ್ಷಗಳ ಸಾಧನೆಯನ್ನು ಪ್ರಧಾನಿಯಾದ ಕೇವಲ 7-8 ವರ್ಷದಲ್ಲಿ ಮೀರಿ ಗುರಿಯನ್ನು ನರೇಂದ್ರ ಮೋದಿ ದಾಖಲೆ ರೀತಿಯಲ್ಲಿ ಸಾಧಿಸಿದ್ದಾರೆ ಎಂದರು.

ಈ ಹಿಂದೆ ದೇಶದ ನಾಗರಿಕರು ಕಟ್ಟಿದ ತೆರಿಗೆ ಹಣ ಪೂರ್ತಿ ದೇಶದ ಅಭಿವೃದ್ಧಿಗೆ ಸದುಪಯೋಗ ಆಗುತ್ತಿರಲಿಲ್ಲ. ಇದೀಗ ಮೋದಿ ಪ್ರಧಾನಿಯಾದ ನಂತರದಲ್ಲಿ ಸೋರಿಕೆಯನ್ನು ಅತ್ಯಂತ ಕಟ್ಟುನಿಟ್ಟಾಗಿ ತಡೆಗಟ್ಟಿ ದೇಶವನ್ನು ಅಭಿವೃದ್ಧಿ ಉತ್ತುಂಗಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ತೀವ್ರ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ದೇಶದಲ್ಲಿಯೇ ಮಹಾರಾಷ್ಟ್ರ ನಂತರದಲ್ಲಿ ಕರ್ನಾಟಕ ಜಿಎಸ್‌ಟಿ ಅತಿ ಹೆಚ್ಚು ಸಂಗ್ರಹಿಸಿದ ದಾಖಲೆಯನ್ನು ಹೊಂದಿದೆ. .10 ಸಾವಿರ ಕೋಟಿ ಸಂಗ್ರಹವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಸಾಧನೆ, ಜನಪರ ಕಾರ್ಯಕ್ರಮವನ್ನು ಕಾರ್ಯಕರ್ತರು ಮುಖಂಡರು ಪರಿಣಾಮಕಾರಿಯಾಗಿ ಮತದಾರರಿಗೆ ತಲುಪಿಸಿದಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪುನಃ ರಾಜ್ಯದಲ್ಲಿ ಅಧಿಕಾರ ಗಳಿಸಲಿದೆ. 

ಎಲ್ಲೆಲ್ಲೋ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣ ನಮಗೇಕೆ? ಜಿಲ್ಲೆಯಲ್ಲೇ ಸಾಕಷ್ಟು ಹಗರಣಗಳಿವೆ: ಸುಮಲತಾ

ಈ ದಿಸೆಯಲ್ಲಿ ಈಗಾಗಲೇ ರಾಜ್ಯಾದ್ಯಂತ 150 ಪ್ರಗತಿ ರಥ ಸಂಚರಿಸಲಿದೆ. ಪ್ರತಿ ಗ್ರಾಮದಲ್ಲಿ ಜನತೆಗೆ ಸರ್ಕಾರದ ಯೋಜನೆ ಬಗ್ಗೆ ಮಾಹಿತಿಯನ್ನು ನೀಡುವಂತೆ ತಿಳಿಸಿದರು. ಪ್ರಗತಿ ರಥಕ್ಕೆ ಚಾಲನೆ ನೀಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆ ಮನೆಮನೆಗೆ ತಲುಪಿಸಲು ಪ್ರಗತಿ ರಥ ಯಾತ್ರೆಗೆ ಚಾಲನೆ ನೀಡಲಾಗಿದೆ. ಸರ್ಕಾರದ ಸಾಧನೆ ಬಗ್ಗೆ ಮತದಾರರಿಗೆ ಮನವರಿಕೆ ಮಾಡುವುದು ಕಾರ್ಯಕರ್ತರ ಪ್ರಮುಖ ಉದ್ದೇಶವಾಗಿದೆ. ಪ್ರಗತಿ ರಥದ ಬಗ್ಗೆ ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಿ ಮತದಾರರಿಗೆ ತಲುಪಿಸುವಂತೆ ಕರೆ ನೀಡಿದರು.

ಪ್ರಧಾನಿ ಮೋದಿ ಸಮ್ಮುಖ ಯಾವ ನಾಯಕರೂ ಪಕ್ಷ ಸೇರೋಲ್ಲ: ಕೇಂದ್ರ ಸಚಿವ ಜೋಶಿ

ಮಾ.10ರಂದು ಶಿವಮೊಗ್ಗದಲ್ಲಿ ಜಿಲ್ಲಾ ಯುವ ಸಮಾವೇಶವನ್ನು ಆಯೋಜಿಸಲಾಗಿದೆ. 15-20 ಸಾವಿರ ಅಧಿಕ ಯುವಪೀಳಿಗೆಯ ಬೃಹತ್‌ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರಪ್ಪ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರು ಹೆಚ್ಚು ನಿಗಾ ವಹಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭ ತಾಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ, ಪ್ರಧಾನ ಕಾರ್ಯ​ದರ್ಶಿ ಸಿದ್ದಲಿಂಗಪ್ಪ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಪುರಸಭಾ ಸದಸ್ಯ ಜೀನಳ್ಳಿ ಪ್ರಶಾಂತ್‌, ಮುಖಂಡ ಗುರುರಾಜ ಜಗತಾಪ್‌, ಹನುಮಂತಪ್ಪ ಸಂಕ್ಲಾಪುರ, ಗಣೇಶ ನಾಗೀಹಳ್ಳಿ, ಶ್ರೀನಿವಾಸ, ನಿರಂಜನಗೌಡ, ಸಿದ್ಧಲಿಂಗ ಹರಿಹರದ ಮತ್ತಿತರರು ಹಾಜರಿದ್ದರು.