ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿದ್ದಕ್ಕೆ ವಿಜಯೇಂದ್ರಗೆ ಧನ್ಯವಾದ: ಮತ್ತೊಮ್ಮೆ ಅಪ್ಪ ಮಕ್ಕಳ ವಿರುದ್ಧ ಹರಿಹಾಯ್ದ ಈಶ್ವರಪ್ಪ

ಚುನಾವಣೆಗೆ ನಿಲ್ತಿರೋ ಇಲ್ವೋ ಎಂದು ಬಹಳಷ್ಟು ಜನರಲ್ಲಿ ಗೊಂದಲವಿತ್ತು. ಎಲ್ಲಾ ಗೊಂದಲಕ್ಕೂ ಉತ್ತರ ಸಿಕ್ಕಿದೆ. ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಈ ಮೂವರು ಬಹಳಷ್ಟು ಗೊಂದಲ ಮೂಡಿಸುತ್ತಿದ್ರು. ಗೊಂದಲಗಳಿಗೆ ಈಗ ಉತ್ತರ ಸಿಕ್ಕಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ರು. ಅವರ ಬಳಿ ಹೋಗಿ ಅವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಕರೆ ತಂದಿದ್ದಾರೆ. ತಾತ್ಕಾಲಿಕವಾಗಿ ನಾನು ಪಕ್ಷದಿಂದ ಹೊರ ಇದ್ದೇನೆ ಅಷ್ಟೇ,  ಕುತಂತ್ರ, ಷಡ್ಯಂತ್ರದಿಂದ ನಾನು ಬಿಜೆಪಿಯಿಂದ ಹೊರಬಂದಿದ್ದೇನೆ: ಈಶ್ವರಪ್ಪ

Thanks to BY Vijayendra for Expelling me from BJP Says KS Eshwarappa grg

ಶಿವಮೊಗ್ಗ(ಏ.23):  ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಾಜಿ ಡಿಸಿಎಂ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.  ಬಿಜೆಪಿಯಿಂದ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟಿತರಾದ ಬಳಿಕ ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ, ವಿಜಯೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಚುನಾವಣೆಗೆ ನಿಲ್ತಿರೋ ಇಲ್ವೋ ಎಂದು ಬಹಳಷ್ಟು ಜನರಲ್ಲಿ ಗೊಂದಲವಿತ್ತು. ಎಲ್ಲಾ ಗೊಂದಲಕ್ಕೂ ಉತ್ತರ ಸಿಕ್ಕಿದೆ. ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಈ ಮೂವರು ಬಹಳಷ್ಟು ಗೊಂದಲ ಮೂಡಿಸುತ್ತಿದ್ರು. ಗೊಂದಲಗಳಿಗೆ ಈಗ ಉತ್ತರ ಸಿಕ್ಕಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ರು. ಅವರ ಬಳಿ ಹೋಗಿ ಅವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಕರೆ ತಂದಿದ್ದಾರೆ. ತಾತ್ಕಾಲಿಕವಾಗಿ ನಾನು ಪಕ್ಷದಿಂದ ಹೊರ ಇದ್ದೇನೆ ಅಷ್ಟೇ,  ಕುತಂತ್ರ, ಷಡ್ಯಂತ್ರದಿಂದ ನಾನು ಬಿಜೆಪಿಯಿಂದ ಹೊರಬಂದಿದ್ದೇನೆ. ಒಬ್ಬ ಎಳಸು ರಾಜ್ಯಾಧ್ಯಕ್ಷ ನನ್ನನ್ನು ಸಸ್ಪೆಂಡ್ ಮಾಡಿದ್ದಾರೆ. ಬಿಜೆಪಿ ಬಗ್ಗೆ ಏನೂ ಗೊತ್ತಿಲ್ಲದೇ ಇರುವ ಒಬ್ಬ ವ್ಯಕ್ತಿ ನನ್ನನ್ನ ಬಿಜೆಪಿಯಿಂದ ಹೊರ ಹಾಕಿದ್ದಾರೆ. ಈ ರೀತಿ ಹಲವಾರು ಜನರು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ. ನನ್ನ ಚಿನ್ಹೆ ಎರಡು ಕಬ್ಬು ಇರುವ ರೈತ. ಈ ರೈತನ ಚಿನ್ಹೆ ಸಿಗಲು ನಾನು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ನೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. 

ಬಿಜೆಪಿಯಿಂದ ಉಚ್ಚಾಟನೆ; ಕೆಎಸ್ ಈಶ್ವರಪ್ಪ ಹೇಳಿದ್ದೇನು?

ವಿಜಯೇಂದ್ರ ಕುಂಕುಮ ಅಳಿಸಿಕೊಂಡ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಈಶ್ವರಪ್ಪ, ಅವರಿಗೆ ನೈತಿಕತೆಯೇ ಇಲ್ಲ. ಯಡಿಯೂರಪ್ಪ ಕೆಜೆಪಿ ಜೊತೆಗೆ ಹೋದಾಗ ಟಿಪ್ಪು ಸುಲ್ತಾನ್ ಜಯಂತಿಯಂದು ಟೋಪಿ ಹಾಕಿಕೊಂಡು ಹೋಗಿದ್ದರು. ಅವರಿಗೆ ನೈತಿಕತೆ ಇಲ್ಲ ಎಂಬುದು ಸಾಬೀತಾಗಿದೆ. ನಾನು ಗೆದ್ದ ಕೂಡಲೇ ಅವರಪ್ಪನೇ ಬಿಜೆಪಿಗೆ ಕರೆದುಕೊಂಡು ಹೋಗ್ತಾನೆ. ನಾನು ಕಟ್ಟಿ ಬೆಳೆಸಿದ ಪಕ್ಷ ಇದು. ಯಡಿಯೂರಪ್ಪ ಕೆಜೆಪಿಗೆ ಹೋಗಿ ಬಂದಿದ್ದಾರೆ. ಅವರು ಡೂಪ್ಲೀಕೇಟ್, ನಾನು ಒರಿಜಿನಲ್. ವಿಜಯೇಂದ್ರ 3 ಗಂಟೆ ಆಗೋದೆ ಕಾಯುತ್ತಿದ್ದ ಅನಿಸುತ್ತೆ. ನನ್ನನ್ನು ಉಚ್ಚಾಟಿಸಲು ಕಾಯುತ್ತಿದ್ದ ಎನಿಸುತ್ತೆ. ಇದು ತಾತ್ಕಾಲಿಕ ಬೆಳವಣಿಗೆ ಅಷ್ಟೇ. ನಾನು ಮತ್ತೆ ಬಿಜೆಪಿಗೆ ಸೇರುವವನೇ. ಇದನ್ನು ತಡೆಯಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ. 

ನೇಹಾ ಹತ್ಯೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸುರ್ಜೇವಾಲಾ ಹೇಳಿಕೆ ನನಗೆ ಆಶ್ಚರ್ಯ ತಂದಿದೆ. ನಿನ್ನೆ ರಾಜ್ಯದಲ್ಲಿ ಮತ್ತೊಂದು ಯುವತಿ ಮೇಲೆ ಮುಸಲ್ಮಾನ್ ಯುವಕ ಹಲ್ಲೆ ಮಾಡಿದ್ದಾನೆ. ಎಲ್ಲಿಯವರೆಗೆ ಕಾಂಗ್ರೆಸ್ ಸರ್ಕಾರವಿರುತ್ತೋ, ಅಲ್ಲಿಯವರೆಗೆ ಮುಸಲ್ಮಾನರ ಓಲೈಕೆ ಮಾಡಲಾಗುತ್ತದೆ. ಕಾಂಗ್ರೆಸ್‌ನ್ನು ಕಿತ್ತೊಗೆಯುವುದೇ ಇದಕ್ಕೆ ಪರಿಹಾರ. ಕಾಂಗ್ರೆಸ್‌ನ್ನು ರಾಜ್ಯದಿಂದಲೂ ಕಿತ್ತೊಗೆಯಬೇಕು ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಮೋದಿನಾ ಟೀಕೆ ಮಾಡಿದ್ರೆ ಕಾಂಗ್ರೆಸ್‌ಗೆ ಸಿಗೋದೆ ಚೊಂಬು 

ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್ ಗೆ ಪ್ಲಸ್ ಎಂದು ಅವರ ಎದೆ ಮುಟ್ಟಿಕೊಂಡು ಅವರು ಹೇಳಲಿ. ಅವರ ಸರ್ಕಾರ ಇದ್ದಾಗ ಬರ ಬಂದಂತಹ ಸಂದರ್ಭದಲ್ಲಿ ಒಂದು ಹನಿ ನೀರು ಕೊಡಲಿಲ್ಲ. ಒಂದು ಬೋರ್ ಹೊಡೆಸಲಿಲ್ಲ. ಒಬ್ಬ ಮಂತ್ರಿ ಜಮೀನುಗಳನ್ನು ಹೋಗಿ ನೋಡಿಕೊಂಡು ಬರಲಿಲ್ಲ. ಪರಿಹಾರ ಕೊಡುವುದಿರಲಿ, ಸರ್ವೇ ಕೂಡ ಮಾಡಲಿಲ್ಲ. ಈಗ ಮೋದಿ ಬಗ್ಗೆ ಟೀಕೆ ಮಾಡಲು ಇವರಿಗೆ ನೈತಿಕತೆ ಇಲ್ಲ. ಸಾಕಷ್ಟು ಬೋರ್ ವೆಲ್ ಗಳಿಗೆ, ಜಲ್ ಜೀವನ್ ಮಿಷನ್ ನಿಂದ ಸಾಕಷ್ಟು ಅನುದಾನ ಬಂದಿದೆ. ಕೇವಲ ಟೀಕೆ ಮಾಡಬೇಕೆಂದು ಟೀಕೆ ಮಾಡುತ್ತಿದ್ದಾರೆ. ಬೆಳೆ ನಷ್ಟ ಆದಾಗ ಒಂದೇ ಒಂದು ಜಮೀನಿಗೂ ಇವರು ಬರಲಿಲ್ಲ. ನಾನು ಆಗ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮನವಿ ಮಾಡಿದ್ದೆ, ದಯಮಾಡಿ ಒಂದು ಜಾಗಕ್ಕೆ ಬಂದರೆ ಅಧಿಕಾರಿಗಳು ಬರ್ತಾರೆ. ಆಗ ರೈತರ ಕಷ್ಟ ಅರಿವಾಗುತ್ತೆ ಎಂದು ಹೇಳಿದ್ದೆ, ಆದರೆ ಅವರು ಒಂದು ಜಾಗಕ್ಕೂ ಬರಲಿಲ್ಲ. ಈಗ ಮೋದಿಗೆ ಟೀಕೆ ಮಾಡುತ್ತಿದ್ದಾರೆ. ಅರ್ಥ ಇಲ್ಲದೇ ಇರುವ ವಿಚಾರ ಇದು. ಮೋದಿನಾ ಟೀಕೆ ಮಾಡಿದ್ರೆ ಕಾಂಗ್ರೆಸ್‌ಗೆ ಸಿಗೋದೆ ಚೊಂಬು ಎಂದು ಲೇವಡಿ ಮಾಡಿದ್ದಾರೆ. 

ಶಿವಮೊಗ್ಗ ಲೋಕಸಭೆಯಲ್ಲಿ 23 ಅಭ್ಯರ್ಥಿಗಳ ಜಟಾಪಟಿ; ಸಂಸದ ರಾಘವೇಂದ್ರನಿಗೆ ಈಶ್ವರಪ್ಪ ಕೊಡ್ತಾರಾ ಪೈಪೋಟಿ!

28 ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಚೊಂಬು 

ಬರದ ವಿಷಯದ ಬಗ್ಗೆ ಕಾಂಗ್ರೆಸ್‌ನವರು ಟೀಕೆ ಮಾಡುತ್ತಾರೆ. ಬೆಳೆ ಹಾನಿ‌ ಪರಿಶೀಲನೆ ಮಾಡಿಲ್ಲ. ರಾಜ್ಯದಲ್ಲಿ  28 ಸ್ಥಾನ ಕಳೆದುಕೊಳ್ಳಲಿರುವ  ಕಾಂಗ್ರೆಸ್ ಪಕ್ಷ. 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಚೊಂಬು ಸಿಗಲಿದೆ. ಮೋದಿಯವರು ತಾಳಿ ವಿಷಯ ಏಕೇ ಎತ್ತಿದರೋ ಗೊತ್ತಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಮಾಂಗಲ್ಯ ಪವಿತ್ರದ ಸಂಕೇತವಾಗಿದೆ.  ಮುತೈದೆಯರು ಮಾಂಗಲ್ಯ ಬಗ್ಗೆ  ತುಂಬಾ ಗೌರವ ಹೊಂದಿದ್ದಾರೆ. ಅರಿಶಿಣ, ಕುಂಕುಮಕ್ಕೆ ಬಂದಾಗ ಮೊದಲು ತಮ್ಮ ತಾಳಿಗೆ ಅರಿಶಿಣ, ಕುಂಕುಮ ಹಚ್ಚುತ್ತಾರೆ. ಮಾಂಗಲ್ಯ ಕುರಿತು ಮೋದಿ ಯಾವ ದೃಷ್ಟಿಯಲ್ಲಿ  ಹೇಳಿದ್ದಾರೆ ಗೊತ್ತಿಲ್ಲ. ಅದರ ಬಗ್ಗೆ. ಚರ್ಚೆ ಮಾಡುವಷ್ಪು ನಾನು ದೊಡ್ಡವನಲ್ಲ ಈಶ್ವರಪ್ಪ ಹೇಳಿದ್ದಾರೆ. 

ಕಾಂಗ್ರೆಸ್ ಸರ್ಕಾರದ ಇರುವರೆಗೂ ಮುಸ್ಲಿಂರ ಗೂಂಡಾಗಿರಿ ನಿಲ್ಲುವುದಿಲ್ಲ.  ಮುಸ್ಲಿಂರಿಂದ ಕಾಂಗ್ರೆಸ್ ಪಕ್ಷ ಉಸಿರಾಡುತ್ತಿದೆ ಎಂದು ತಿಳಿದಿರುವುದು ಮೂರ್ಖತನ ಆಗಿದೆ. ಸಿಐಡಿ ಏನು ವರದಿ ಕೊಡುತ್ತದೆ? ಅದು ಸರ್ಕಾರದ ಕಂಟ್ರೋಲ್‌ನಲ್ಲಿ ಇದೆ. ನೇಹಾ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios