ಚೆನ್ನೈ, (ಸೆ.23): ತಮಿಳುನಾಡು ಪಶುಸಂಗೋಪನಾ ಸಚಿವ ಉದುಮಲೈ ಕೆ ರಾಧಾಕೃಷ್ಣನ್ ಅವರ ಪರ್ಸನಲ್ ಪಿಎ  ಕರ್ಣನ್ ಅವರನ್ನು ಉದುಮಲೈಪೆಟೆ ಶಾಸಕರ ಕಚೇರಿಯಿಂದ ಇಂದು (ಬುಧವಾರ) ಬೆಳಿಗ್ಗೆ ಕಿಡ್ನಾಪ್ ಮಾಡಿದ್ದಾರೆ. ಬಳಿಕ ಅವರೇ ಬಿಟ್ಟು ಪರಾರಿಯಾಗಿದ್ದಾರೆ.

ಇಂದು (ಬುಧವಾರ) ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ನಾಲ್ವರ ತಂಡ  ಉದುಮಲೈಪೇಟೆಯ ಅನ್ಸಾರಿ ಸ್ಟ್ರೀಟ್‌ನಲ್ಲಿರುವ ಶಾಸಕರ ಕಚೇರಿಗೆ ನುಗ್ಗಿದೆ. ನಂತರ  ಕೆಲವೇ ನಿಮಿಷಗಳಲ್ಲಿ ತಮ್ಮ ಕಾರಿನಲ್ಲಿ ಸಚಿವರ ಪಿಎ ಕರ್ಣನ್ ಅವರನ್ನು ಅಪಹರಿಸಿಕೊಂಡು ಎಸ್ಕೇಪ್ ಆಗಿದ್ದಾರೆ.

ಸದನದಲ್ಲಿ ಮಾಜಿ ಸಿಎಂ ಪುತ್ರನಿಗೆ ಸ್ಪೀಕರ್ ವಾರ್ನ್...!

ವಿಷಯ ತಿಳಿದ ಕೂಡಲೇ ತಿರುಪುರ ಪೊಲೀಸ್ ವರಿಷ್ಠಾಧಿಕಾರಿ ದಿಶಾ ಮಿತ್ತಲ್ ಮತ್ತು ಉದುಮಲೈಪೇಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು.

ಎಂಎಲ್‌ಎಗಳ ಕಚೇರಿಯಲ್ಲಿ ದಾಖಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದಾಗ ಕರ್ಣನನ್ನು ಕಾರಿನಲ್ಲಿ ಅಪಹರಿಸಿದ್ದು ಕಂಡಿದೆ. ಕೂಡಲೇ ಕಾರ್ಯಚರಣೆಗಿಳಿದರು.

ಬಿಟ್ಟು ಎಸ್ಕೇಪ್
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪಿಎ  ಕರ್ಣನ್ ಅವರನ್ನು ಅಪಹರಣಕಾರರು ಬಿಟ್ಟು ಎಸ್ಕೇಪ್ ಆಗಿದ್ದಾರೆ. ಕಿಡ್ನಾಪ್ ಮಾಡಿದ್ದ ಸ್ಥಳದಿಂದ ಅಂದ್ರೆ ಉದುಮಲೈಪೇಟೆಯಿಂದ15 ಕಿ.ಮೀ ದೂರ ಇರುವ ಧಾಲಿ ಎಂಬಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.