ಲೋಕಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಹೇಗೂ ಗೆದ್ದಿದ್ದಳಲ್ಲ, ಯಶವಂತಪುರದಲ್ಲಿಯೂ ಸ್ಪರ್ಧಿಸಲಿ. ಅವಳದ್ದು ಪಾಪದ ಕೊಡ ಇನ್ನೂ ತುಂಬಬೇಕಾಗಿದೆ. ನಾನೂ ತಾಳ್ಮೆಯಿಂದ ಕಾಯುತ್ತಿದ್ದೇನೆ. ಆಮೇಲೆ ನಾನು ಮಾತಾಡುತ್ತೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಶಾಸಕ ಎಸ್. ಟಿ. ಸೋಮಶೇಖ‌ರ್ 

ಬೆಂಗಳೂರು(ನ.10): 'ನನ್ನ ತಾಕತ್ ಬಗ್ಗೆ ಅವಳು ಟೆಸ್ಟ್ ಮಾಡಬೇಕು ಎನ್ನುವುದಾದರೆ ಕ್ಷೇತ್ರಕ್ಕೆ ಬರಲಿ. ಅವಳು ಸಂಸದೆ ಸ್ಥಾನಕ್ಕೆ ರಾಜೀನಾಮೆ ನೀಡಲಿ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ತಾಕತ್ ಇದ್ದರೆ ಯಶವಂತಪುರ ಕ್ಷೇತ್ರದಲ್ಲಿ ನಿಲ್ಲಲಿ.' ಇದು ತಮ್ಮ ಪಕ್ಷದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಏಕವಚನದಲ್ಲಿ ಶಾಸಕ ಎಸ್. ಟಿ. ಸೋಮಶೇಖ‌ರ್ ವಾಗ್ದಾಳಿ ನಡೆಸಿ ಪರಿ. 

ಸೋಮಶೇಖರ್‌ಗೆ ತಾಕತ್ ಇದ್ದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನಿಂದ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ ಶೋಭಾ ಕರಂದ್ಲಾಜೆಗೆ ಶನಿವಾರ ಸುದ್ದಿಗಾರರ ಜತೆ ಮಾತನಾಡಿ ಸೋಮಶೇಖರ್ ಪ್ರತಿ ಸವಾಲು ಹಾಕಿದರು. 
'ಲೋಕಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಹೇಗೂ ಗೆದ್ದಿದ್ದಳಲ್ಲ, ಯಶವಂತಪುರದಲ್ಲಿಯೂ ಸ್ಪರ್ಧಿಸಲಿ. ಅವಳದ್ದು ಪಾಪದ ಕೊಡ ಇನ್ನೂ ತುಂಬಬೇಕಾಗಿದೆ. ನಾನೂ ತಾಳ್ಮೆಯಿಂದ ಕಾಯುತ್ತಿದ್ದೇನೆ. ಆಮೇಲೆ ನಾನು ಮಾತಾಡುತ್ತೇನೆ' ಎಂದು ಟೀಕಾ ಪ್ರಹಾರ ನಡೆಸಿದರು. 

ಬೆಂಗಳೂರು ಸೌಥ್ ಅಂತ ಮಾಡಿದ್ದಾರೆ, ಅದ್ರಲ್ಲಿ‌ ತಪ್ಪೇನು?: ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್

ಚಿಕ್ಕಮಗಳೂರಿನಲ್ಲಿ ಉಗಿದ ರೀತಿ ನನ್ನನ್ನು ಕ್ಷೇತ್ರದಲ್ಲಿ ಕ್ಯಾಕರಿಸಿ ಉಗಿದಿಲ್ಲ. ನನ್ನ ಬಗ್ಗೆ ಮಾತಾಡುವ ಕಿಂಚಿತ್ ಯೋಗ್ಯತೆ ಈ ಯಮ್ಮನಿಗಿಲ್ಲ ಎಂದರು.