Asianet Suvarna News Asianet Suvarna News

ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ವಾಮೀಜಿಗಳ ಪಟ್ಟು

  • ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸ್ವಾಮೀಜಿಗಳ ಬೇಡಿಕೆ ಶುರು
  • ಪಕ್ಷಕ್ಕಾಗಿ ದುಡಿದಿರುವ ಫಲವಾಗಿ ಸೂಕ್ತ ಸ್ಥಾನ ಕೊಡಲಿ ಎಂದ ಸ್ವಾಮೀಜಿಗಳು
  • ಕೇಂದ್ರದ ನಾಯಕರು ಇದನ್ನು ಗಮನಿಸಬೇಕೆಂದು ಸ್ವಾಮೀಜಿಗಳ ಆಗ್ರಹ
Swamijis Demand For DCM post For KS Eshwarappa snr
Author
Bengaluru, First Published Jul 29, 2021, 12:35 PM IST
  • Facebook
  • Twitter
  • Whatsapp

ಬೆಂಗಳೂರು (ಜು.29): ಇಷ್ಟು ದಿನಗಳ ಕಾಲ ಸಿಎಂ ಬಿಎಸ್‌ವೈ ಮುಂದುವರಿಯಬೇಕೆಂದು  ಲಿಂಗಾಯತ ಸ್ವಾಮೀಜಿಗಳು ಪಟ್ಟು ಹಿಡಿದರೆ ಇದೀಗ ಈಶ್ವರಪ್ಪಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸ್ವಾಮೀಜಿಗಳ ಬೇಡಿಕೆ ಶುರುವಾಗಿದೆ. 

"

ಬೆಂಗಳೂರಿನಲ್ಲಿಂದು ಮಾತನಾಡಿದ ಮಖಣಾಪುರ ಗುರುಪೀಠದ ಸೋಮಲಿಂಗೇಶ್ವರ ಸ್ವಾಮೀಜಿ  ಈಶ್ವರಪ್ಪ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಿ. ಈಶ್ವರಪ್ಪರನ್ನು ಎಂದೂ ಕಡೆಗಣಿಸಬಾರದು. ಈಶ್ವರಪ್ಪ ಬೇಡಿ ಈ ಸ್ಥಾನ ಪಡೆಯಬಾರದು ಪಕ್ಷಕ್ಕಾಗಿ ದುಡಿದಿರುವ ಫಲವಾಗಿ ಸೂಕ್ತ ಸ್ಥಾನ ಕೊಡಲಿ ಎಂದು ಹೇಳಿದರು.

ಕೇಂದ್ರದ ನಾಯಕರು ಇದನ್ನು ಗಮನಿಸಬೇಕೆಂದು ಸ್ವಾಮೀಜಿ ಹೇಳಿದರು. 

ಬೊಮ್ಮಾಯಿ ಸಂಪುಟಕ್ಕೆ ಸೀನಿಯರ್ಸ್‌ ಶಾಕ್‌..!

 ಈಶ್ವರಪ್ಪ ಪರ   ಹಾಲುಮತದ ಸ್ವಾಮೀಜಿಗಳಿಂದ  ಸುದ್ದಿಗೋಷ್ಠಿ :  ಅಥಣಿಯ ಕವಲುಗುಡ್ಡ ಗುರುಪೀಠದ ಅಮರೇಶ್ವರ ಸ್ವಾಮೀಜಿ ಕೂಡ ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದಾರೆ. 

ನಾವೆಲ್ಲರೂ ಉತ್ತರ ಕರ್ನಾಟಕದ ಸ್ವಾಮೀಜಿಗಳು. ಈಶ್ವರಪ್ಪ ಅವರಿಗೆ ಸೂಕ್ತ ಸ್ಥಾನ‌ ಕೊಡಿ ಅಂತ ಕೇಳಲು ಬಂದಿದ್ದೇವೆ. ಈಶ್ವರಪ್ಪ ಯಡಿಯೂರಪ್ಪ ಜೊತೆಗೆ ಪಕ್ಷ ಕಟ್ಟಿದವರು. ಅಂಥ ನಾಯಕನಿಗೆ ನಮ್ಮ ಎದುರು ಅನ್ಯಾಯ ಆಗಬಾರದು. ಈಶ್ವರಪ್ಪ ಹಿಂದುತ್ವಕ್ಕಾಗಿ, ಪಕ್ಷಕ್ಕಾಗಿ ನಿಷ್ಠೆ ಹೊಂದಿರುವರು. ಅವರಿಗೆ ಸೂಕ್ತ ಸ್ಥಾನಮಾನ ಕೊಡಲಿ ಎಂದು ವರಿಷ್ಠರ ಗಮನ ಸೆಳೆಯುತ್ತೇವೆ ಎಂದರು.

 ಈಶ್ವರಪ್ಪ ಅವರಿಗೆ ಬೀದರ್ ನಿಂದ ಚಾಮರಾಜನನಗರದವರೆಗೆ ಬೆಂಬಲಿಗರಿದ್ದಾರೆ. ಅವರೂ ಪಕ್ಷ ಕಟ್ಟಿದವರು, ಪಕ್ಷಕ್ಕಾಗಿ ತ್ಯಾಗ ಮಾಡಿದವರು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದವರು. ಅವರ ನಿರ್ಧಾರ ಅವರ ವೈಯಕ್ತಿಕವಾದುದು. ಆದರೆ ಈಶ್ವರಪ್ಪ ಅವರು ಮುಖ್ಯಮಂತ್ರಿ ಆಗಿಲ್ಲ ಈಶ್ವರಪ್ಪನವರು ಮುಖ್ಯಮಂತ್ರಿ ಆಗಬೇಕಿತ್ತು. ಹೀಗಾಗಿ ಈಗಲಾದರೂ ಉಪಮುಖ್ಯಮಂತ್ರಿ ಸ್ಥಾನ ಕೊಡಲಿ. ಒಬ್ಬ ವ್ಯಕ್ತಿಗೆ ನಾಲ್ಕು ಸಲ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿದೆ. ಈಶ್ವರಪ್ಪ ಅವರಿಗೆ ಒಂದು ಸಲವಾದರೂ ಮುಖ್ಯಮಂತ್ರಿ ಮಾಡಬೇಕಿತ್ತು ಎಂದರು. 

ಈಶ್ವರಪ್ಪ ಪಕ್ಷ ಬಿಟ್ಟು ಎಂದೂ ಹೋದವರಲ್ಲ. ಪಕ್ಷದಲ್ಲೇ ಇದ್ದವರು, ಇರುವವರು, ಪಕ್ಷದ ಮೇಲೆ ನಿಷ್ಠೆ ಇಟ್ಟುಕೊಂಡಿದ್ದವರು. ಅವರಿಗೆ ಸೂಕ್ತ ಸ್ಥಾನ ಮಾನ ಸಿಗಲೇ ಬೇಕು ಎಂದು ಹೇಳಿದರು.

Follow Us:
Download App:
  • android
  • ios