ಮಂಗಳೂರು, (ಡಿ.23): ಮೈಸೂರು ಜಿಲ್ಲೆಯ ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಹತ್ಯೆ ಯತ್ನ ಬೆನ್ನಲ್ಲೇ ಇದೀಗ ಮತ್ತೋರ್ವ ಶಾಸಕರೊಬ್ಬರನ್ನು ಹತ್ಯೆಗೆ ಸ್ಕೆಚ್ ನಡೆದಿದೆ.

ಹೌದು...ಮಂಗಳೂರು ಜಿಲ್ಲೆಯ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಅಪರಿಚಿತರು ಬೈಕ್‌ನಲ್ಲಿ ಯು.ಟಿ.ಖಾದರ್ ಸಂಚರಿಸುತ್ತಿದ್ದ ಕಾರನ್ನು 10 ಕಿ.ಮೀ ವರೆಗೂ ಫಾಲೋ ಮಾಡಿದ್ದಾರೆ.

ಶಿವಮೊಗ್ಗ;  'ಆಕೆಯ ಪೋನ್ ಕಾಲ್' ಹೊಸ ವರ್ಷಕ್ಕೆ ಮದುವೆಯಾಗಬೇಕಿದ್ದವ ಹೆಣವಾದ .

ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್ ವರೆಗೂ ಬೈಕ್‌ನಲ್ಲಿ ಅಪರಿಚಿತರು ಹಿಂಬಾಲಿಸಿದ್ದಾರೆ. ಇದರಿಂದ ಅನುಮಾನಗೊಂಡ ಖಾದರ್, ಕೂಡಲೇ ಎಸ್ಕಾರ್ಟ್ ವಾಹನದ ಪೊಲೀಸರಿಗೆ ತಿಳಿಸಿದ್ದಾರೆ.

ನಂತರ ಪೊಲೀಸರು ನಂತೂರು ಬಳಿ ವಾಹನ ನಿಲ್ಲಿಸಿ ಬೈಕ್ ಹಿಡಿಯಲು ಓಡಿ ಹೋಗಿದ್ದಾರೆ. ಆದ್ರೆ, ತಕ್ಷಣ ಎಚ್ಚೆತ್ತ ಬೈಕ್ ಸವಾರರು ಬೈಕ್ ತಿರುಗಿಸಿ ಪರಾರಿಯಾಗಿದ್ದು, ಖಾದರ್ ಎಸ್ಕಾರ್ಟ್ ವಾಹನದ ಎಎಸ್ಸೈ ಸುಧೀರ್ ಮಾಹಿತಿಯಂತೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬೈಕ್ ನಂಬರ್ ನೋಟ್ ಮಾಡಿಕೊಂಡಿರುವ ಪೊಲೀಸರು ವಿಳಾಸ ಪತ್ತೆ ಮಾಡುತ್ತಿದ್ದಾರೆ. ಸದ್ಯ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ಚುರುಕುಗೊಳಿಸಿದ್ದಾರೆ.