ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜವೆಂಕಟಪ್ಪ ನಾಯಕ ಗೆಲುವು ಸಾಧಿಸಿದ ಹಿನ್ನೆಲೆ ಕಾರ್ಯಕರ್ತರು ಸುರಪುರದಿಂದ‌ ಅಂಜನಾದ್ರಿ ವರೆಗೆ ಪಾದಯಾತ್ರೆ ನಡೆಸಿದರು.

ಕೊಪ್ಪಳ (ಮೇ.27): ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜವೆಂಕಟಪ್ಪ ನಾಯಕ ಗೆಲುವು ಸಾಧಿಸಿದ ಹಿನ್ನೆಲೆ ಕಾರ್ಯಕರ್ತರು ಸುರಪುರದಿಂದ‌ ಅಂಜನಾದ್ರಿ ವರೆಗೆ ಪಾದಯಾತ್ರೆ ನಡೆಸಿದರು.

 ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಸ್ಪರ್ಧೆ. ಈ ವೇಳೆ ರಾಜವೆಂಕಟಪ್ಪನಾಯಕರ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. ರಾಜಾವೆಂಕಟಪ್ಪ ನಾಯಕ್ ಗೆದ್ದರೆ ಅಂಜನಾದ್ರಿವರೆಗೆ ಪಾದಯಾತ್ರೆ ನಡೆಸೋದಾಗಿ ಹರಕೆ ಹೊತ್ತಿದ್ದ ಕಾರ್ಯಕರ್ತರು ಇದೀಗ ಗೆಲುವು ಸಾಧಿಸಿರುವ ಹಿನ್ನೆಲೆ ಸುರಪುರದಿಂದ ಅಂಜಾನಾದ್ರಿವರೆಗೆ ಸುಮಾರು 200 ಕಿಲೋಮೀಟರ್ ಪಾದಯಾತ್ರೆ ನಡೆಸುವ ಹರಕೆ ತೀರಿಸಿದ ಕಾರ್ಯಕರ್ತರು.

ರಾಜಾ ವೆಂಕ​ಟಪ್ಪ ನಾಯಕ ಗೆಲು​ವು ಹಿನ್ನೆಲೆ 18ಕಿಮೀ ದೀಡ್ ನಮಸ್ಕಾರ ಹಾಕಿದ ಅಭಿಮಾನಿ

ಪಾದಯಾತ್ರೆ ಮೂಲಕ‌ ಅಂಜನಾದ್ರಿಗೆ ಆಗಮಿಸಿದ 50 ಕ್ಕೂ ಹೆಚ್ಚು ಕಾರ್ಯಕರ್ತರು. ಕಾರ್ಯಕರ್ತರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು.

ಪೇಠ ಅಮ್ಮಾಪುರ ಗ್ರಾಮದಿಂದ ಪಾದಯಾತ್ರೆ ಆರಂಭಿಸಿದ್ದ ಕಾರ್ಯಕರ್ತರು. ಪಾದಯಾತ್ರೆಗೆ ಹಿರಿಯ ಕಾಂಗ್ರೆಸ್ ಮುಖಂಡ ವಿಠಲ್ ಯಾದವ್ ಚಾಲನೆ ನೀಡಿದ್ದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಸುರಪುರ ಮತಕ್ಷೇತ್ರದಿಂದ ರಾಜಾ ವೆಂಕಟಪ್ಪ ನಾಯಕ ಅವರು ಗೆದ್ದು ಬರಲೆಂದು ಪೇಠ ಅಮ್ಮಾಪುರ ಗ್ರಾಮದಿಂದ ಅಂಜನಾದ್ರಿ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಬರುತ್ತೇನೆ ಎಂದು ಕಾಂಗ್ರೆಸ್‌ ಯುವ ಮುಖಂಡ ಮಹೇಶ ಯಾದವ್‌ ಬೇಡಿಕೊಂಡಿದ್ದ ಹರಕೆ ಪ್ರಯುಕ್ತ ಗ್ರಾಮದ ಹನುಮಂತ ದೇವರ ದೇವಸ್ಥಾನದಿಂದ ಪಾದಯಾತ್ರೆಯನ್ನು ಆರಂಭಿಸಲಾಗಿತ್ತು.

ರಾಜುಗೌಡ ಶಾಸಕರಾಗಲೆಂದು ನಾಲ್ಕು ವರ್ಷ ಬರಿಗಾಲಲ್ಲೇ ತಿರುಗಿದವರು!

 ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು, ಸರ್ವ ಜನಾಂಗದವರ ಪ್ರೀತಿಗೆ ಪಾತ್ರರಾಗಿರುವ ಒಬ್ಬ ಜನಾನುರಾಗಿ ನಾಯಕರಾಗಿದ್ದಾರೆ. ಎಲ್ಲ ಸಮುದಾಯದ ಜನರನ್ನು ಸಮಾನಾಗಿ ಕಾಣುವ ಗುಣವನ್ನು ಹೊಂದಿರುವ ಅವರು ಕೊಟ್ಟಮಾತಿನಂತೆ ನಡೆದುಕೊಳ್ಳುವಂತ ವ್ಯಕ್ತಿಯಾಗಿದ್ದಾರೆ. ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಾಲ್ಕನೇ ಬಾರಿ ವಿಧಾನಸಭೆಗೆ ಪ್ರವೇಶಿಸಿದ್ದು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರಿಗೆ ತುಂಬಾ ಸಂತೋಷ ತಂದಿದೆ ಎಂದು ಹೇಳಿದರು.

- ವಿಠಲ್‌ ಯಾದವ್‌ ಹಿರಿಯ ಕಾಂಗ್ರೆಸ್ ಮುಖಂಡ