ಸುಮಲತಾ ಸತ್ಯಹರಿಶ್ಚಂದ್ರರಾ, ಅವರು ಕಮಿಷನ್‌ ತೆಗೊಂಡಿಲ್ವಾ..! ನಮ್ಮ ಬಳಿಯೂ ದಾಖಲೆಗಳಿವೆ, ಬೇಕು ಅಂದ್ರೆ ಕೊಡ್ತೇವೆ  ಶಾಸಕರ ಕಮಿಷನ್‌ ಆರೋಪಕ್ಕೆ ಡಿ.ಸಿ.ತಮ್ಮಣ್ಣ ತಿರುಗೇಟು

ಮದ್ದೂರು (ಸೆ.5) :ಸಂಸದೆ ಸುಮಲತಾ ಅಂಬರೀಶ್‌ ಅವರೇನು ಸತ್ಯ ಹರಿಶ್ಚಂದ್ರರೇನಲ್ಲ. ಅವರೇನು ಕಮಿಷನ್‌ ತೆಗೆದುಕೊಂಡಿಲ್ವಾ. ಉದಾಹರಣೆ ಬೇಕಾ. ನಮ್ಮ ಬಳಿಯೂ ದಾಖಲೆಗಳಿದ್ದು, ಬೇಕು ಅಂದ್ರೆ ಕೊಡ್ತೇವೆ ಎಂದು ಶಾಸಕರ ವಿರುದ್ಧ ಕಮಿಷನ್‌ ಆರೋಪ ಮಾಡಿರುವ ಸಂಸದೆ ವಿರುದ್ಧ ಶಾಸಕ ಡಿ.ಸಿ.ತಮ್ಮಣ್ಣ ತಿರುಗೇಟು ನೀಡಿದ್ದಾರೆ.

Commission: ಕೇಂದ್ರದ ಹಣಕ್ಕೂ ಶಾಸಕ ಕಮಿಷನ್‌ ದಂಧೆ: ಸಂಸದೆ ಸುಮಲತಾ

ಕೇಂದ್ರದ ಅನುದಾನದಿಂದ ನಡೆಯುತ್ತಿರುವ ಕಾಮಗಾರಿಗೂ ಶಾಸಕರು ಕಮಿಷನ್‌ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಡಿ.ಸಿ.ತಮ್ಮಣ್ಣ(MLA D.C.Timmanna), ಸಂಸದರು ತಮ್ಮ ಬಳಿ ಶಾಸಕರು ಕಮಿಷನ್‌ ಪಡೆದಿರುವ ಬಗ್ಗೆ ಸಾಕ್ಷ್ಯ ಇದ್ದರೆ ನೀಡಲಿ. ನಮಗೆ ಸುಮಲತಾ(Sumalata) ಅವರ ಬಂಡವಾಳವೂ ಗೊತ್ತಿದೆ. ಇವರು ಗಣಿ ವಿಚಾರವಾಗಿ ಧ್ವನಿ ಎತ್ತಿದಾಗ ಯಾರ ಹತ್ತಿರ ಏನು ಕೇಳಿದರು ಅನ್ನೋದು ಎಲ್ಲೆಡೆ ಹರಿದಾಡಿದೆ. ಏತಕ್ಕಾಗಿ ಇವರು ಗಣಿ ವಿರೋಧ ಮಾಡುತ್ತಿದ್ದಾರೆ ಅನ್ನೋದೂ ಗೊತ್ತಿದೆ. ಕೆಆರ್‌ಎಸ್‌(KRS)ಗೆ ಅಪಾಯವಿದೆ ಎಂದು ಗಣಿಗಾರಿಕೆಗೆ ವಿರೋಧ ಮಾಡಿದರಲ್ಲಾ ಪೂರ್ಣವಾಗಿ ನಿಲ್ಲಿಸಿದರಾಶ ಎಂದು ಸಂಸದೆ ಸುಮಲತಾರನ್ನು ಪ್ರಶ್ನೆ ಮಾಡಿದ್ದಾರೆ.

ನನ್ನ 20 ವರ್ಷದ ರಾಜಕೀಯದಲ್ಲಿ ಯಾರು ಯಾರು ಏನೂಂತ ಗೊತ್ತಿದೆ. ಅವರಂತೆ ನಾವು ಕೆಸರೆರಚಲು ಹೋಗೋಲ್ಲ. ಬೇರೆಯವರ ಬಗ್ಗೆ ಆರೋಪ ಮಾಡುವ ಮುನ್ನ ಮೊದಲು ನಾನು ಸತ್ಯ ಹರಿಶ್ಚಂದ್ರನಾ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಸುಮಲತಾ ಅಂಬರೀಶ್‌ ಯಾವಾಗ ಬೇಕಾದರೂ ಬರಲಿ. ನಾನು ಸಿದ್ಧ ಎಂದು ಸವಾಲು ಹಾಕಿದರು.

ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಸರಿ ಎನ್ನುವವರು ಬಂದು ನೋಡಲಿ: ಪ್ರತಾಪ್‌ ಸಿಂಹ ವಿರುದ್ಧ ಸುಮಲತಾ ಕಿಡಿ

ಎಲ್ಲಾ ನಾನೇ ಮಾಡಿದ್ದೀನಿ ಅಂತ ಅವರು ಕ್ರೆಡಿಟ್‌ ತೆಗೆದುಕೊಳ್ಳುವುದರ ಬಗ್ಗೆ ನಮಗೂ ಗೊತ್ತಿದೆ. ಪ್ರಜ್ಞಾವಂತರಿಗೆ ಯಾರು ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆ. ನಾವು ಅವರಷ್ಟುಕೀಳು ಮಟ್ಟಕ್ಕೆ ಇಳಿಯುವುದಿಲ್ಲ. ನಾವು ಕಮಿಷನ್‌ ಪಡೆದಿರುವುದಕ್ಕೆ ಸಾಕ್ಷಿ ಇದ್ದರೆ ತರಲಿ. ಈ ರೀತಿ ರಾಜಕಾರಣ ಮಾಡೋದು ರಾಜಕಾರಣಿಗಳ ಲಕ್ಷಣ ಅಲ್ಲ. ಬೇಕಿದ್ದರೆ ಈ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು. ನಾವು ತಪ್ಪು ಮಾಡಿದ್ದೇವೆ ಎಂದು ನಿರೂಪಿಸಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಇವರ ಆಪಾದನೆಗೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳುವ ಜನ ನಾವಲ್ಲ. ಬುಡುಬುಡುಕೆ ಮಾಡಿಕೊಂಡು ರಾಜಕಾರಣಕ್ಕೆ ಬಂದಿಲ್ಲ ಎಂದು ಸಂಸದರ ಆರೋಪಗಳಿಗೆ ತಿರುಗೇಟು ನೀಡಿದರು.