ಅಸಮಾಧಾನ ಸ್ಫೋಟ: ಸುಳ್ಯ ಬಿಜೆಪಿ ಕಚೇರಿಗೆ ಕಾರ್ಯಕರ್ತರಿಂದಲೇ ಬೀಗ!

ಬಿಜೆಪಿ ಸುಳ್ಯ ಮಂಡಲ ಸಮಿತಿ ನೂತನ ಅಧ್ಯಕ್ಷರ ಘೋಷಣೆ ಬೆನ್ನಿಗೆ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಕಚೇರಿಗೆ ಬೀಗ ಜಡಿದ ಪ್ರಸಂಗ ನಡೆದಿದೆ. 

Sulya BJP office locked by activists Here the reason at dakshina kannada rav

ಸುಳ್ಯ (ಫೆ.5): ಬಿಜೆಪಿ ಸುಳ್ಯ ಮಂಡಲ ಸಮಿತಿ ನೂತನ ಅಧ್ಯಕ್ಷರ ಘೋಷಣೆ ಬೆನ್ನಿಗೆ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಅಸಮಾಧಾನ ಸ್ಫೋಟಗೊಂಡಿದ್ದು, ಕಚೇರಿಗೆ ಬೀಗ ಜಡಿದ ಪ್ರಸಂಗ ನಡೆದಿದೆ. 

ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಜಿಲ್ಲಾಧ್ಯಕ್ಷರು ಶನಿವಾರ ಘೋಷಿಸಿದ್ದರು. ಸುಳ್ಯ ಮಂಡಲದ ಅಧ್ಯಕ್ಷರಾಗಿ ಜಿಲ್ಲೆಯ ಮಾಜಿ ಉಪಾಧ್ಯಕ್ಷರೂ ಆಗಿರುವ ವೆಂಕಟ್ ವಳಲಂಬೆ ಎರಡನೇ ಬಾರಿಗೆ ಅವಕಾಶ ಪಡೆದಿದ್ದರು. ಆದರೆ, ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ಕೋರ್ ಕಮಿಟಿ, ಜಿಲ್ಲಾ ಸಮಿತಿಗೆ ಮಾಜಿ‌ ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಅವರ ಹೆಸರನ್ನು ಕಳುಹಿಸಿತ್ತು. 

ಲೋಕಸಭೆಗೆ ನನ್ನ ಮಗ ಸ್ಪರ್ಧೆ ಮಾಡಬೇಕೆಂದು ಜನ ಬಯಸಿದ್ದಾರೆ: ಹೆಬ್ಬಾಳ್ಕರ್‌

ವಿನಯಕುಮಾರ್‌ ಬದಲಿಗೆ ವೆಂಕಟ್‌ ಅವರ ಹೆಸರು ಘೋಷಣೆಯಾಗಿದ್ದಕ್ಕೆ ಸುಳ್ಯದ ಬಿಜೆಪಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಯಕತರು ಸಿಟ್ಟಿಗೆದ್ದರು. ಇದೇ ಕಾರಣದಿಂದಾಗಿ ಪಕ್ಷದ ಕಚೇರಿಗೆ ಬೀಗ ಜಡಿದ ಪ್ರಸಂಗ ನಡೆಯಿತು.

ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ: ಶಾಸಕ ಮಹೇಶ ಟೆಂಗಿನಕಾಯಿ

ಹುಬ್ಬಳ್ಳಿ: ಪಕ್ಷದ ಸೂಚನೆಯ ಪ್ರಕಾರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಿಜೆಪಿ ಕಚೇರಿಗೆ ಭೇಟಿ ಹಿನ್ನೆಲೆ ಎಲ್ಲರನ್ನೂ ಆಗಮಿಸುವಂತೆ ತಿಳಿಸಲಾಗಿತ್ತು. ಅದರಂತೆ ಅವರು ಕಚೇರಿಗೆ ಬಂದ ವೇಳೆ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನಮ್ಮ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಭಾನುವಾರ ಸಂಜೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಗದೀಶ ಶೆಟ್ಟರ್ ಬಿಜೆಪಿ ಕಚೇರಿ ಭೇಟಿ ನೀಡಿದ ವೇಳೆ ಅವರ ಸ್ವಾಗತಕ್ಕೆ ಸ್ಥಳೀಯ ನಾಯಕರ ಗೈರು ವಿಚಾರ ಕುರಿತು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಗದೀಶ ಶೆಟ್ಟರ್ ಅವರನ್ನು ಪಕ್ಷದ ಕಚೇರಿಯಲ್ಲಿಯೇ ಸ್ವಾಗತ ಮಾಡುವಂತೆ ಪಕ್ಷದ ನಾಯಕರ ತೀರ್ಮಾನವಾಗಿತ್ತು ಎಂದರು.

 

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಜಾಗೃತಿ ಸಮಾವೇಶ: ಸಚಿವ ಸಂತೋಷ್‌ ಲಾಡ್‌

ಪಕ್ಷದಲ್ಲಿ ಎಲ್ಲರೂ ಒಂದೇ ಇಲ್ಲಿ ಯಾವುದೇ ಬಣಗಳಿಲ್ಲ. ಈ ವರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಬ್ಬರೇ ಇದ್ದರು. ಈಗ ಜಗದೀಶ ಶೆಟ್ಟರ್ ಅವರು ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಎಲ್ಲರ ನೇತೃತ್ವದಲ್ಲಿ, ಹಿರಿಯ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios