Asianet Suvarna News Asianet Suvarna News

ಲೋಕಸಭೆಗೆ ನನ್ನ ಮಗ ಸ್ಪರ್ಧೆ ಮಾಡಬೇಕೆಂದು ಜನ ಬಯಸಿದ್ದಾರೆ: ಹೆಬ್ಬಾಳ್ಕರ್‌

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್‌ ಸ್ಪರ್ಧೆ ಮಾಡಬೇಕೆಂದು ಬೆಳಗಾವಿ ಜನ ಬಯಸಿದ್ದಾರೆ. ಆದರೆ ಈ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಪಾಲಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು. 

People want my son to contest for Lok Sabha says Lakshmi Hebbalkar at Belagavi rav
Author
First Published Feb 5, 2024, 6:56 AM IST | Last Updated Feb 5, 2024, 6:56 AM IST

ಬೆಳಗಾವಿ (ಫೆ.5): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್‌ ಸ್ಪರ್ಧೆ ಮಾಡಬೇಕೆಂದು ಬೆಳಗಾವಿ ಜನ ಬಯಸಿದ್ದಾರೆ. ಆದರೆ ಈ ವಿಚಾರದಲ್ಲಿ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದನ್ನು ಪಾಲಿಸುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಪುತ್ರ ಸ್ಪರ್ಧೆ ಮಾಡಬೇಕು ಎನ್ನುವ ಭಯಕೆ ಜನರದ್ದು. ಈ ನಿಟ್ಟಿನಲ್ಲಿ ಆತನ ಹೆಸರು ಹೈಕಮಾಂಡ್‌ಗೆ ಹೋಗಿರುವ ವಿಚಾರ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ನನ್ನ ಸಹೋದರ ಪರಿಷತ್ತಿನ ಸದಸ್ಯನಾಗುವಾಗಲೂ ಪಕ್ಷ ಹಾಗೂ ಹೈಕಮಾಂಡ್ ತೀರ್ಮಾನದ ಮೇರೆಗೆ ಒಪ್ಪಿಗೆ ನೀಡಿದ್ದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮೃಣಾಲ್ ಅಥವಾ ಬೇರಿನ್ಯಾರಿಗೆ ನೀಡಿದರೂ ಕೆಲಸ ಮಾಡುತ್ತೇನೆ. ಈಗಾಗಲೇ ಟಿಕೆಟ್‌ಗೆ ಸಂಬಂಧಿಸಿ ಸರ್ವೇ ನಡೆಸಲಾಗುತ್ತಿದೆ ಎಂದರು.

ಮಂಡ್ಯ ಬಳಿಕ ಈಗ ಬೆಳಗಾವಿಯಲ್ಲೂ ಭಗವಾಧ್ವಜ ತೆರವು ವಿವಾದ: ಪರಿಸ್ಥಿತಿ ಉದ್ವಿಗ್ನ!

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕುರಿತು ಸಿದ್ಧತೆ ನಡೆಸಿದ್ದೇವೆ. ರಾಜಕೀಯ ವ್ಯಕ್ತಿಗಳು ಚುನಾವಣೆಯನ್ನು ಹಗುರವಾಗಿ ಪರಿಗಣಿಸುವುದಿಲ್ಲ. ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ ಐದು ಪ್ರಮುಖ ಗ್ಯಾರಂಟಿ ಭರವಸೆಯನ್ನು ಅಧಿಕಾರಕ್ಕೆ ಬಂದ ಮೇಲೆ ಈಡೇರಿಸಿದ್ದೇವೆ. ಅದನ್ನೇ ಇಟ್ಟುಕೊಂಡು ನಾವು ಲೋಕಸಭಾ ಚುನಾವಣೆ ಎದುರಿಸುತ್ತೇವೆ ಎಂದರು.

Latest Videos
Follow Us:
Download App:
  • android
  • ios