Asianet Suvarna News Asianet Suvarna News

ದೇಶದಲ್ಲೇ ರಾಜ್ಯ ಶೀಘ್ರ ನಂ.1 ಆಗಲಿದೆ: ಗೃಹ ಸಚಿವ ಪರಮೇಶ್ವರ್‌

ಎಸ್‌.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜ್ಯ ದೇಶದಲ್ಲಿಯೇ ನಂ.1 ಸ್ಥಾನದಲ್ಲಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಹಿನ್ನೆಡೆಯಾಗಿದ್ದು, ಈಗ ಪುನಃ ನಂ.1 ಆಗುವ ದಾರಿಗೆ ಮರಳಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

State will soon become No 1 in the country Says Minister Dr G Parameshwar gvd
Author
First Published Aug 21, 2023, 4:27 PM IST

ತುಮಕೂರು (ಆ.21): ಎಸ್‌.ಎಂ.ಕೃಷ್ಣ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜ್ಯ ದೇಶದಲ್ಲಿಯೇ ನಂ.1 ಸ್ಥಾನದಲ್ಲಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಹಿನ್ನೆಡೆಯಾಗಿದ್ದು, ಈಗ ಪುನಃ ನಂ.1 ಆಗುವ ದಾರಿಗೆ ಮರಳಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಜಿಲ್ಲಾ ಸಹಕಾರಿ ಸಂಘಗಳ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಬಡವರನ್ನು ಶಕ್ತಿವಂತರನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂದಡಿಯಿಟ್ಟಿದೆ ಎಂದರು.

ರಾಜ್ಯದಲ್ಲಿ 1904ರಲ್ಲಿ ಫೆಡ್ರಿಕ್‌ ನಿಕಲೋಸ್‌ ಎಂಬ ಬ್ರಿಟಿಷರ ಅಧಿಕಾರಿ ಸಹಕಾರಿ ಕ್ಷೇತ್ರಕ್ಕೆ ಅಡಿಪಾಯ ಹಾಕಿದ. ಆ ನಂತರ ಸಿದ್ದನಗೌಡ ಪಾಟೀಲ್‌ ಎಂಬುವವರು ಸಹಕಾರಿ ಚಳವಳಿ ಪ್ರಾರಂಭಿಸಿದರು. ಇದರ ಭಾಗವಾಗಿ ಇಂದು ಸಹಕಾರಿ ಕ್ಷೇತ್ರ ಕಾಲಿಡದ ವರ್ಗವೇ ಇಲ್ಲವೆನ್ನಬಹುದು.ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ಸಾಲ ಸೌಲಭ್ಯ ದೊರೆಯುವುದು ಕಷ್ಟವಾದಾಗ, ಸಹಕಾರಿ ಕ್ಷೇತ್ರಗಳು ರೈತರಿಗೆ ಎತೇಚ್ಚ ಸಾಲ ಸೌಲಭ್ಯ ನೀಡಿ, ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸಿದೆ. ಇಂದು ಹುಟ್ಟು ಹಬ್ಬ ಆಚರಿಸುತ್ತಿರುವ ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಶಯವೂ ಇದೇ ಆಗಿತ್ತು ಎಂದು ಡಾ.ಜಿ.ಪರಮೇಶ್ವರ್‌ ನುಡಿದರು.

ಪಕ್ಷ ಬಿಟ್ಟವರು ಮೋದಿಗಾಗಿ ವಾಪಸ್ ಬನ್ನಿ: ಶೆಟ್ಟರ್, ಸವದಿಗೆ ಪರೋಕ್ಷ ಆಹ್ವಾನ ನೀಡಿದ ಶೋಭಾ ಕರಂದ್ಲಾಜೆ

ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್‌.ರಾಜಣ್ಣ ಅವರ ಕೊಡುಗೆ ಅಪಾರವಾಗಿದೆ. ಬಡವರಿಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸಹಕಾರಿ ಸಚಿವರಾಗಿರುವ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಇದನ್ನೊಂದು ಮಾದರಿ ಕ್ಷೇತ್ರವಾಗಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವ ತುಮಕೂರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲೆಯ ಎಲ್ಲಾ ಶಾಸಕರ ಸಹಕಾರ ಅಗತ್ಯವಿದೆ. ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹಾಗಾಗಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಮಾತನಾಡಿ, ಸಹಕಾರಿ ಚಳವಳಿಯ ಉದ್ದೇಶ ಗ್ರಾಮೀಣ ಜನರ ಬದುಕು ಹಸನು ಮಾಡುವುದು. ಅವರಿಗೆ ಶೋಷಣೆ ಮುಕ್ತ ವಾತಾವರಣ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಡುವುದು. ಅದು ತುಮಕೂರು ಜಿಲ್ಲೆಯಲ್ಲಿ ಆಗಿದೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ ಮೂಲಕ ಪಕ್ಷ, ಜಾತಿ, ಧರ್ಮ ಯಾವುದನ್ನು ನೋಡದೆ ಸುಮಾರು 800 ಕೋಟಿಗೂ ಹೆಚ್ಚು ವ್ಯವಸಾಯ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ. 1904ರ ಸಹಕಾರಿ ಆಂದೋಲನ ಮತ್ತು 1970ರ ಹೈನುಗಾರಿಕಾ ಸಹಕಾರಿ ಸಂಘಗಳ ಸಹಕಾರಿ ಕ್ಷೇತ್ರದಲ್ಲಿಯೇ ಬಹಳ ಮಹತ್ವದ ಮೈಲಿಗಲ್ಲು. ಜಿಲ್ಲೆಯ ಪ್ರತಿಯೊಂದು ಗ್ರಾಮಪಂಚಾಯಿತಿ ಹಂತದಲ್ಲಿಯೂ ಸೊಸೈಟಿಗಳನ್ನು ಸ್ಥಾಪಿಸಬೇಕೆಂಬ ಇಚ್ಚೆಇದೆ. ಮುಂದಿನ ಡಿಸೆಂಬರ್‌ ಅಂತ್ಯಕ್ಕೆ ಇದನ್ನು ಜಿಲ್ಲೆಯಲ್ಲಿ ಸಾಧಿಸಲಿದ್ದೇವೆ ಎಂದರು.

ಆಯನೂರು ಮಂಜು​ನಾಥ್‌ ಜೆಡಿಎಸ್‌ ಪಕ್ಷ​ದಲ್ಲಿದ್ದೇ ಧಮ್‌ ತೋರಲಿ!

ಸಂಸದ ಜಿ.ಎಸ್‌.ಬಸವರಾಜು, ಪಿಕಾರ್ಡ್‌ ಬ್ಯಾಂಕುಗಳ ಅಧ್ಯಕ್ಷ ಹಾಗೂ ತಿಪಟೂರು ಶಾಸಕ ಕೆ.ಷಡಕ್ಷರಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್‌.ಎಸ್‌.ಜಯಕುಮಾರ್‌ ವಹಿಸಿದ್ದರು. ಸಚಿವರಾದ ಡಾ.ಜಿ.ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜ್ಯೋತಿಗಣೇಶ್‌, ಎಚ್‌.ವಿ. ವೆಂಕಟೇಶ್‌, ಬಿ.ಸುರೇಶಗೌಡ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಶಾಂತಲ ರಾಜಣ್ಣ, ಮೇಯರ್‌ ಪ್ರಭಾವತಿ, ಕೆ.ಎ.ದೇವರಾಜು, ಬಿ.ಜಿ.ವೆಂಕಟೇಗೌಡ, ತುಮಲ್‌ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ಸಹಕಾರ ಮಹಾಮಂಡಲದ ರಾಜ್ಯಾಧ್ಯಕ್ಷ ಗಂಗಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios