Asianet Suvarna News Asianet Suvarna News

ಎಸ್‌ಟಿ ಸಮಾವೇಶ ಕಾಂಗ್ರೆಸ್‌ ನಾಯಕರಿಗೆ ಉತ್ತರ ನೀಡಲಿದೆ: ಶ್ರೀರಾಮುಲು

ಕಾಂಗ್ರೆಸ್‌ ಮುಳುಗಿರುವ ಪಕ್ಷವಾಗಿದ್ದು, ಅದಕ್ಕೆ ಯಾವುದೇ ಸೂಕ್ತ ನಾಯಕರು ಇಲ್ಲದಂತಾಗಿದ್ದಾರೆ. ಅವರಲ್ಲಿ ಕೇವಲ ವ್ಯಕ್ತಿ ಪೂಜೆ ಮಾಡುವ ನಿಟ್ಟಿನಲ್ಲಿ ಸಮಾವೇಶ ಮಾಡಿದರೆ ನಮ್ಮ ಪಕ್ಷದಿಂದ ಸಮುದಾಯದ ಸಮಾವೇಶ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ST convention will reply to Congress leaders: Sriramulu
Author
First Published Nov 20, 2022, 10:53 AM IST

ಬಳ್ಳಾರಿ (ನ.20): ಬಳ್ಳಾರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬೃಹತ್‌ ಪರಿಶಿಷ್ಟ ಪಂಗಡ (ಎಸ್‌ಟಿ) ನವಶಕ್ತಿ ಸಮಾವೇಶವು ಕಾಂಗ್ರೆಸ್‌ ನಾಯಕರಿಗೆ ದಿಟ್ಟ ಉತ್ತರ ನೀಡಲಿದೆ. ಕಾಂಗ್ರೆಸ್‌ ಮುಳುಗಿರುವ ಪಕ್ಷವಾಗಿದ್ದು, ಅದಕ್ಕೆ ಯಾವುದೇ ಸೂಕ್ತ ನಾಯಕರು ಇಲ್ಲದಂತಾಗಿದ್ದಾರೆ. ಅವರಲ್ಲಿ ಕೇವಲ ವ್ಯಕ್ತಿ ಪೂಜೆ ಮಾಡುವ ನಿಟ್ಟಿನಲ್ಲಿ ಸಮಾವೇಶ ಮಾಡಿದರೆ ನಮ್ಮ ಪಕ್ಷದಿಂದ ಸಮುದಾಯದ ಸಮಾವೇಶ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

ಬೃಹತ್‌ ಎಸ್‌ಟಿ ಸಮಾವೇಶಕ್ಕೂ ಮುನ್ನ ಮನೆಯಲ್ಲಿ ಗೋಮಾತೆಗೆ (Cow) ಪೂಜೆ ಸಲ್ಲಿಸಿ ಮನೆಯಿಂದ ಹೊರಬಂದ ಶ್ರೀರಾಮುಲು (Sriramulu) ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಶ್ರೀರಾಮುಲು ಈ ಸಮಾವೇಶವು ಕಾಂಗ್ರೆಸ್ (Congress) ನಾಯಕರಿಗೆ ಉತ್ತರ ನೀಡಲಿದೆ ಎಂಬುದಕ್ಕೆ ಲಕ್ಷಾಂತರ ಜನರು ಸಮಾವೇಶಕ್ಕೆ ಹರಿದುಬರುತ್ತಿರುವುದೇ ಸಾಕ್ಷಿಯಾಗಿದೆ. ತಳ ಸಮುದಾಯಗಳು (Sole communities) ಹೋರಾಟ ಮಾಡಿ ಮುಂದೆ ಬಂದಿದ್ದಾವೆ. ಈ ಹಿಂದೆ ರಾಜಕೀಯ ಪಕ್ಷಗಳು ತಳ ಸಮುದಾಯಗಳನ್ನ ಕೇವಲ ವೋಟ್ ಬ್ಯಾಂಕ್ (Vote bank) ಆಗಿ ಬಳಸಿಕೊಂಡು ಕೈಬಿಟ್ಟಿವೆ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊರಹಾಕಿದರು.

ಬಳ್ಳಾರಿಯಲ್ಲಿ ಇಂದು ಬಿಜೆಪಿ ಎಸ್‌ಟಿ ರ‍್ಯಾಲಿ, ಮೀಸಲಾತಿ ಹೆಚ್ಚಳ ಬಳಿಕ ಮೊದಲ ಸಮಾವೇಶ

ಮೀಸಲಾತಿ ಕೊಡದ ಬಗ್ಗೆ ಉತ್ತರಿಸಲಿ: ಸಿದ್ದರಾಮಯ್ಯ (Siddaramaiah) ಅವರು ಮುಖ್ಯಮಂತ್ರಿ ಅಗಿದ್ದಾಗ ಪರಿಶಿಷ್ಟ ಪಂಗಡಕ್ಕೆ (Scheduled Tribe) ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ ಎಂಬುದಕ್ಕೆ ಉತ್ತರ ಕೊಡಲಿ. ನಮ್ಮ ಸಮುದಾಯವನ್ನು ಸಿದ್ದರಾಮಯ್ಯ ಕೇವಲ ವೋಟ್ ಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಅವರೊಂದಿಗೆ ಎಲ್ಲ ಕಾಂಗ್ರೆಸ್‌ ನಾಯಕರು ಕೂಡ ಮೂಗಿಗೆ ತುಪ್ಪ ಸವರಿ ಓಡಿ ಹೋಗಿದ್ದರು. ಆದರೆ, ನಮ್ಮ ಸರ್ಕಾರ ಜೇನುಗೂಡಿಗೆ ಕೈ ಹಾಕಿ ಜನರಿಗೆ ತುಪ್ಪ ತಿನ್ನಿಸಿದ್ದಾರೆ. ಇದೇ ಸಿಹಿ ಇಡೀ ಸಮುದಾಯದ ಜೀವನವನ್ನ ಬೆಳಕಾಗಿಸಲು ಸಹಾಯಕವಾಗುತ್ತದೆ. ಇನ್ನು ಉಪಮುಖ್ಯಮಂತ್ರಿ ಆಗುವ ವಿಚಾರದ ಬಗ್ಗೆ ಪಕ್ಷದ ಹೈಕಮಾಂಡ್‌ (High command)ಅಂತಿಮ ತೀರ್ಮಾನ ಮಾಡುತ್ತದೆ. ಮುಂದಿನ ತೀರ್ಮಾನದ ವರೆಗೆ, ಸದ್ಯಕ್ಕೆ ಸಚಿವನಾಗಿಯೇ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. 

1,500 ಬಾಣಸಿಗರಿಂದ ಭೋಜನದ ವ್ಯವಸ್ಥೆ: ಬಳ್ಳಾರಿಯಲ್ಲಿ ಎಸ್‌ಟಿ ಸಮಾವೇಶಕ್ಕೆ ಬರುವ ಲಕ್ಷಾಂತರ ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ (Morning) ಕೇಸರಿಬಾತ್ ಹಾಗೂ ಉಪ್ಪಿಟ್ಟು ಉಪಹಾರ (Tiffin) ಕೊಡಲಾಗಿದೆ. ಮಧ್ಯಹ್ನ ಪಾಯಸ, ಪಲಾವ್, ಅನ್ನ ಸಾಂಬಾರ್, ಮೊಸರನ್ನದ ವ್ಯವಸ್ಥೆ ಮಾಡಲಾಗಿದೆ. ಒಟ್ಟು 1,500 ಬಾಣಸಿಗರಿಂದ (Chefs) ಅಡುಗೆ ತಯಾರಿ ಮಾಡಿದ್ದಾರೆ. ಊಟ ನೀಡುವವರು ಹಾಗೂ ಅಡುಗೆ ಸಹಾಯಕರು ಸೇರಿ 1,600 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಮೂರು ಸಾವಿರ ಜನರಿಂದ ಊಟಕ್ಕೆ ಸಿದ್ದತೆ ಮಾಡಲಾಗುತ್ತಿದೆ. 100 ಟನ್ ಅಕ್ಕಿ, 8 ಟನ್ ಬೆಲ್ಲ, 8 ಟನ್ ಗೋಧಿ, 100 ಟನ್ ತರಕಾರಿ, ಐದು ಸಾವಿರ ತೆಂಗಿನಕಾಯಿ, 1,000 ಸಿಲಿಂಡರ್ ಬಳಕೆ ಮಾಡಲಾಗಿದೆ. ಐದು ಎಕರೆಯ (Acre) ಮೂರು ಸ್ಥಳದಲ್ಲಿ ಟೆಂಟ್ ಹಾಕಿ, 600 ಕೌಂಟರ್ ನಲ್ಲಿ ಊಟ ವಿತರಣೆ ಮಾಡಲಾಗುತ್ತಿದೆ.

ಎಸ್ಟಿ ಸಮಾವೇಶಕ್ಕೆ ಸಿದ್ಧವಾದ ಬಳ್ಳಾರಿ, ಕಲ್ಯಾಣ ಕರ್ನಾಟಕದ 41 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

ಜಾನಪದ ಸಂಸ್ಕೃತಿ ಅನಾವರಣ: ಸಮಾವೇಶಕ್ಕೂ ಮುನ್ನ  ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜಾನಪದ ಕಲಾತಂಡಗಳಿಂದ (Folk art troupe) ಜಾನಪದ ನೃತ್ಯ ಪ್ರದರ್ಶನ ಮಾಡಲಾಗುತ್ತಿದೆ. ಉತ್ತರ ಕನ್ನಡ, ಬೆಂಗಳೂರು, ಕೇರಳ, ಮಂಡ್ಯ, ಕೊಡಗು ಜಿಲ್ಲೆಗಳಿಂದ ಕಲಾತಂಡಗಳು ಆಗಮಿಸಿವೆ. ಪರಿಶಿಷ್ಟ ಪಂಗಡಗಳ ಸಾಂಪ್ರದಾಯಿಕ ಕಲಾ (Traditional art) ಪ್ರಕಾರದ ನೃತ್ಯಗಳಾದ ಕುಡಿಯ, ನಾಯಕ, ಸಿದ್ಧಿ, ಗೊಂಡ, ಚಂಡೆ ವಾದನ, ಕೊಡಗಿನ ಸಾಂಪ್ರದಾಯಿಕ ನೃತ್ಯ ಪ್ರದರ್ಶನ (Performance) ಆಗುತ್ತಿವೆ. ತಮಟೆ ವಾದನ, ಆದಿವಾಸಿ ನೃತ್ಯ ಡಕ್ಕೆ ಕುಣಿತ, ಕುಡಿಯ ನೃತ್ಯ ಹಾಗೂ ಪೂಜಾ ಕುಣಿತಗಳು ಜಾನಪದ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿವೆ.

Follow Us:
Download App:
  • android
  • ios