Asianet Suvarna News Asianet Suvarna News

ಎಸ್ಟಿ ಸಮಾವೇಶಕ್ಕೆ ಸಿದ್ಧವಾದ ಬಳ್ಳಾರಿ, ಕಲ್ಯಾಣ ಕರ್ನಾಟಕದ 41 ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು

ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಮೇಲೆ ಅದರ ಲಾಭವನ್ನು ಪಡೆಯಲು ಯತ್ನಿಸುತ್ತಿರೋ ಬಿಜೆಪಿ ಬಳ್ಳಾರಿಯಲ್ಲಿ ಎಸ್ಟಿ ನ.20ರಂದು  ಸಮಾವೇಶ ಮಾಡಲು ಮುಂದಾಗಿದೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರದ ಮೇಲೆ ಬಿಜೆಪಿ ಹೆಚ್ಚು ಕಣ್ಣಿಟ್ಟಿದೆ.

ballari ready to BJP st convention with massive rally gow
Author
First Published Nov 19, 2022, 9:51 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್ 

ಬಳ್ಳಾರಿ (ನ.19): ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ ಮೇಲೆ ಅದರ ಲಾಭವನ್ನು ಪಡೆಯಲು ಯತ್ನಿಸುತ್ತಿರೋ ಬಿಜೆಪಿ ಬಳ್ಳಾರಿಯಲ್ಲಿ ಎಸ್ಟಿ ನ.20ರಂದು  ಸಮಾವೇಶ ಮಾಡಲು ಮುಂದಾಗಿದೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರದ ಮೇಲೆ ಹೆಚ್ಚು ಕಣ್ಣಿಟ್ಟಿರೋ ಬಿಜೆಪಿ ಇಲ್ಲಿರುವ ಮೀಸಲು ಕ್ಷೇತ್ರಗಳಲ್ಲಿ  ಅತಿ ಹೆಚ್ಚು ಸ್ಥಾನ ಗೆಲ್ಲಬೇಕೆನ್ನುವ ನಿಟ್ಟಿನಲ್ಲಿ ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶವನ್ನು ಹಮ್ಮಿಕೊಂಡಿದೆ. ಇನ್ನೂ ಈ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ರಾಜ್ಯ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳು ಆಗಮಿಸಲಿದ್ಧಾರೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಧಿಕೃತವಾಗಿಯೇ ಚುನಾವಣೆ ಕಣವನ್ನು ರಂಗೇರಿಸುತ್ತಿದ್ದಾರೆ. 

ಬಿಜೆಪಿ ಎಸ್ಸಿ ಎಸ್ಟಿ ಪರವಾಗಿದೆ: ಇನ್ನೂ ಬಿಜೆಪಿ ಮೇಲ್ವರ್ಗದ ಪಕ್ಷವಲ್ಲ. ಇದು ದಲಿತ ಹಿಂದೂಳಿದವರು ಸೇರಿದಂತೆ ಎಲ್ಲ ಜಾತಿ ಜನಾಂಗದವರವನ್ನು ಗೌರವದಿಂದ ಕಾಣುವ ಪಕ್ಷವಾಗಿದೆ. ಇಲ್ಲಿ ಎಲ್ಲರಿಗೂ ಸಮಾನವಾದ ಸ್ಥಾನ ಮಾನವಿದೆ ಎನ್ನುವದನ್ನು ಹೇಳುತ್ತಿರೋ ಬಿಜೆಪಿ ಪಕ್ಷವು ಇದನ್ನು ಸಾಬಿತು ಪಡೆಸುವ ನಿಟ್ಟಿನಲ್ಲಿ ಇಂತಾಹದ್ದೊಂದು ಸಮಾವೇಶವನ್ನು ಹಮ್ಮಿಕೊಂಡಿದೆ.  ಐದರಿಂದ ಆರು ಲಕ್ಷ ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಇದಕ್ಕಾಗಿ ವಿಜಯನಗರ , ರಾಯಚೂರು, ಯಾದಗಿರಿ, ಕಲಬುರಗಿ, ಕೊಪ್ಪಳ , ಚಿತ್ರದುರ್ಗಾ ಸೇರಿದಂತೆ ವಿವಿಧ ಪ್ರಮುಖ ಜಿಲ್ಲೆಗಳಿಂದ ಎಂಟು ಸಾವಿರ ಬಸ್, 20 ಸಾವಿರ ಕ್ರೂಸರ್ ವಾಹನಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ. ಬಳ್ಳಾರಿ ಹೊರವಲಯದಲ್ಲಿರೋ  ಜಿ ಸ್ಕೈರ್ ಲೇಔಟ್ ನಲ್ಲಿ ಬೃಹತ್ ವೇದಿಕೆಯಲ್ಲಿ ಹಾಕಲಾಗಿದ್ದು, ವೇದಿಕೆ ಮೂಲಕ ರಾಜ್ಯ ಮತ್ತು ರಾಷ್ಟದ ನಾಯರನ್ನು ಚುನಾವಣೆ ರಣಕಹಳ ಮೊಳಗಿಸಲಿದ್ದಾರೆ. 

ಸಚಿವ ಶ್ರೀರಾಮುಲುರಿಂದ ಕಾರ್ಯಕರ್ತರಿಗೆ ಭರ್ಜರಿ ಬಾಡೂಟ!

ಐದು‌ ಲಕ್ಷದ ಜನರಿಗೆ ಊಟದ ವ್ಯವಸ್ಥೆ: ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶಕ್ಕೆ ಭರದಿಂದ ಸಿದ್ಧತೆ ನಡೆದಿದೆ. ಐದಾರು ಲಕ್ಷ ಜನರು ಸೇರೋ ಹಿನ್ನೆಲೆ ಊಟಕ್ಕೆ ಭರ್ಜರಿ ವ್ಯವಸ್ಥೆ ಮಾಡಿದ್ದಾರೆ. ಅರು ಸಾವಿರ  ಬಾಣಸಿಗರು ಇರೋ ಮೂರು ಬೃಹತ್ ಅಡುಗೆ ಮನೆಯನ್ನು ಮಾಡಿದ್ದು , ಶುಚಿ ಮತ್ತು ರುಚಿಯಾದ ಅಡಿಗೆ ಮಾಡಲಾಗುತ್ತಿದೆ. ಭಾನುವಾರ ಬೆಳಿಗ್ಗೆ ಅರರಿಂದ ಒಂಭತ್ತು ಗಂಟೆಯವರೆಗೂ ಉಪ್ಪಿಟ್ಟು ಕೇಸರಿ ಬಾತ್ ಮತ್ತು  ಒಂಭತ್ತು ಗಂಟೆಯಿಂದ ಊಟ ಅರಂಭ ಮಾಡಲಾಗ್ತದೆ.  ಬರೋ ಜನರಿಗೆ ಅನ್ನ ಸಾಂಬಾರು, ಫಲಾವ್ ಗೋದಿ ಹುಗ್ಗಿ ಮಾಡಲಾಗುತ್ತಿದೆ. ಸಮಾವೇಶಕ್ಕೆ ಬಂದ ಕೊನೆಯ ಕಾರ್ಯಕರ್ತ‌ ಮನೆಗೆ  ಹೋಗೋವರೆಗೂ ಊಟ ನೀಡಲಾಗುತ್ತದೆ ಎಂದು ಅಯೋಜಕರು ಹೇಳುತ್ತಿದ್ದಾರೆ. ಸಂಪೂರ್ಣ ಹೈಜನಿಕ್ ವ್ಯವಸ್ಥೆಯಲ್ಲಿ ಊಟ ಮಾಡಲಾಗುತ್ತಿದ್ದು ಬೆಂಗಳೂರು ಮತ್ತು ತುಮಕೂರಿನ ಬಾಣಸಿಗರು ಊಟ ತಯಾರಿ ಮಾಡ್ತಿದ್ದಾರೆ.

ಬಳ್ಳಾರಿ ಎಸ್ಟಿ ಸಮಾವೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ: ಸಚಿವ ಶ್ರೀರಾಮುಲು

ಶ್ರೀರಾಮುಲುಗೆ ಪ್ಲಸ್ ಪಾಯಿಂಟ್: ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಶ್ರೀರಾಮುಲು ಆರಂಭದಿಂದ ಸಾಕಷ್ಟು ಹೋರಾಟ ಮಾಡುತ್ತಲೇ ಬಂದಿದ್ರು. ಕೊನೆಗೆ ಮೀಸಲಾತಿಗಾಗಿ ರಾಜೀನಾಮೆ ನೀಡೋ ಬಗ್ಗೆಯೂ ಮಾತನಾಡಿದ್ರು. ಹೀಗಾಗಿ ಇದೀಗ ಸಮಾವೇಸದ ರೂವಾರಿಯಾಗಿರೋ ಶ್ರೀರಾಮುಲು ಎಸ್ಟಿ ಜನಾಂಗದ ಬಹುದೊಡ್ಡ ನಾಯಕನೆಂದು ಬಿಂಬಿಸಲು ಹೋರಟಿದ್ದಾರೆ. ಆದ್ರೇ ಈ ಸಮಾವೇಶ ಚುನಾವಣೆ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆಯೋ ಕಾದು ನೋಡಬೇಕಿದೆ.

Follow Us:
Download App:
  • android
  • ios