ಖಾತೆ ಬದಲಾವಣೆ: ಸಿಎಂ ಭೇಟಿ ಬಳಿಕ ತಮ್ಮ ಆಪ್ತರ ಬಳಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀರಾಮುಲು..!
ದಿಢೀರ್ ಎರಡು ಖಾತೆಗಳನ್ನು ಕಿತ್ತುಕೊಂಡು ಒಂದು ಇಲಾಖೆ ಖಾತೆ ನೀಡಿರುವುದಕ್ಕೆ ಶ್ರೀರಾಮುಲು ರೋಷಾವೇಷವಾಗಿದ್ದು, ಬಿಎಸ್‌ವೈ ಭೇಟಿ ಬಳಿಕ ತಮ್ಮ ಶ್ರೀರಾಮುಲು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು, (ಅ.12) : ತಮ್ಮ ಆರೋಗ್ಯ ಖಾತೆ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಗಳನ್ನು ಕಿತ್ತುಕೊಂಡು ಸಮಾಜ ಕಲ್ಯಾಣ ಸಚಿವರ ಖಾತೆ ನೀಡಿರುವುದಕ್ಕೆ, ಸಚಿವ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ.
"
ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದ ಬಳಿಕ ಸಪ್ಪೆ ಮುಖಮಾಡಿಕೊಂಡು ಸಿಎಂ ನಿವಾಸದಿಂದ ನಿರ್ಗಮಿಸಿದ್ದಾರೆ.
ಸಿಎಂ ಜತೆ 5 ನಿಮೀಷ ಚರ್ಚಿಸಿ ಖಾಸಗಿ ಕಾರನ್ನೇರಿದ ಶ್ರೀರಾಮುಲು, ತೀವ್ರ ಕುತೂಹಲ ಮೂಡಿಸಿದ ನಡೆ
ಆಪ್ತರ ಬಳಿ ಸ್ಫೋಟಕ ಮಾಹಿತಿ
ಹೌದು...ಕೇವಲ ನಿಮಿಷ ಅಷ್ಟೇ ಸಿಎಂ ಜತೆ ಚರ್ಚೆ ಮಾಡಿರುವ ಅಂಶಗಳನ್ನು ಶ್ರೀರಾಮುಲು ಅವರು ತಮ್ಮ ಆಪ್ತರ ಬಳಿಕ ಹೇಳಿಕೊಂಡಿದ್ದಾರೆ. ಹಾಗಾದ್ರೆ ಏನೆಲ್ಲಾ ಹೇಳಿದ್ದಾರೆ ಎನ್ನುವ ಮಾಹಿತಿ ಸುವರ್ಣನ್ಯೂಸ್.ಕಾಂಗೆ ಲಭ್ಯವಾಗಿದ್ದು, ಅದು ಈ ಕೆಳಗಿನಂತೆ ವಿವರಿಸಲಾಗಿದೆ.
"
ಶ್ರೀರಾಮುಲು ಖಾತೆ ಬದಲಾವಣೆ ಏಕೆ? ಕಾರಣ ಬಿಚ್ಚಿಟ್ಟ ಡಿಕೆ ಶಿವಕುಮಾರ್..!
ಕೇವಲ ಸಮಾಜಕಲ್ಯಾಣ ಖಾತೆಗೆ ಮಾತ್ರ ಸೀಮಿತ ಮಾಡಿರೋದನ್ನು ಸಾಹೇಬರ ಬಳಿ ಕೇಳಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಖಾತೆಯನ್ನು ಬಿಟ್ಟು ಸಮಾಜ ಕಲ್ಯಾಣ ಮಾತ್ರ ಯಾಕೆ ಕೊಟ್ರಿ..? ನಾನು ಹಿಂದುಳಿದ ಸಮಾಜದವನು. ಚೆನ್ನಾಗಿ ಕೆಲಸ ಮಾಡ್ತಾ ಇದ್ದೆ. ಯಾಕೆ ಬದಲಾವಣೆ ಅಂತ ಕೇಳಿದ್ದೇನೆ. ಎಲ್ಲಾ ಒಳ್ಳೆಯದಾಗುತ್ತೇ ಅಂತ ಸಿಎಂ ಸಾಹೇಬರು ಹೇಳಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಆದ Distrubance ಇಲ್ಲಾಗಬಾರದು ಅಂತಾನೂ ಹೇಳಿದ್ದೇನೆ. ಎಲ್ಲಾ ಒಳ್ಳೆಯದಾಗುತ್ತೇ ಅನ್ನೋ ಭರವಸೆಯನ್ನು ಸಿಎಂ ಯಡಿಯೂರಪ್ಪ ಅವರು ಕೊಟ್ಟಿದ್ದಾರೆ. ಎಂದು ಶ್ರೀರಾಮುಲು ಆಪ್ತರ ಮುಂದೆ ಹೇಳಿದ್ದಾರೆ.
"
ಅಲ್ಲದೇ ಹೈಕಮಾಂಡ್ ನವರು ಟೈಮ್ ಕೊಟ್ಟರೆ ಒಮ್ಮೆ ದೆಹಲಿಗೂ ಹೋಗಿ ಬರ್ತೇನೆ. ಯಾವಾಗ ಅನ್ನೋದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಶ್ರೀರಾಮುಲು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಒಂದು ವೇಳೆ ರಾಮುಲು ಹೈಕಮಾಂಡ್ ಮೊರೆ ಹೋದ್ರೆ ಮುಂದೇನಾಗಲಿದೆ ಎನ್ಜುವುದನ್ನು ಕಾದು ನೋಡಬೇಕಿದೆ.