ಬೆಂಗಳೂರು,[ಜ.14]: ರಾಜಕೀಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರದ್ದು, ತಂತ್ರ-ಪ್ರತಿತಂತ್ರ ರಾಜಕಾರಣ ಏನೇ ಇರಬಹುದು. ಆದರೆ ಮಾನವೀಯತೆಯಲ್ಲಿ ಮಾತ್ರ ಕುಮಾರಸ್ವಾಮಿ ಅಪ್ಪಟ ಚಿನ್ನ ಎಂದರೆ ತಪ್ಪಾಗಲಾರದು.  

ಕಷ್ಟ ಅಂತ ಬಂದವರಿಗೆ ಕುಮಾರಸ್ವಾಮಿ  ಯಾವತ್ತು ಇಲ್ಲ ಅಂದಿಲ್ಲ. ಅದರಲ್ಲೂ ಬಡಜನರು ಆರೋಗ್ಯ ಸಮಸ್ಯೆ ಅಂತ ಬಂದ್ರೆ ಸಾಕು ಸ್ಥಳದಲ್ಲಿಯೇ ಅವರಿಗೊಂದು ಪರಿಹಾರ ಕೊಟ್ಟೇ ಕಳುಹಿಸುತ್ತಾರೆ. ಅಂತಹದ್ದೇ ಒಂದು ಕುಮಾರಸ್ವಾಮಿ ಅವರು ಮಾಡಿದ್ದ ಮಹತ್ತರ ಕೆಲಸಕ್ಕೆ ಇಂದಿಗೆ ಒಂದು ವರ್ಷ. 

ಅಂದು ಧೈರ್ಯ ತುಂಬಿದ್ದಕ್ಕೆ ರೊಟ್ಟಿ ಊಟ ಕಳಿಸಿದ ರೈತ : ಭಾವುಕರಾದ HDK

2007 ರಲ್ಲಿ‌ ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜನತಾ ದರ್ಶನದಲ್ಲಿ ಸಹಾಯ ಕೋರಿ ಬಂದಿದ್ದ ವಿಕಲಚೇತನರ ಸಂಕಷ್ಟವನ್ನು ನೋಡಿ 600ಕ್ಕೂ ಹೆಚ್ಚು ವಿಶೇಷಚೇತನರನ್ನು ಕರ್ನಾಟಕ ವಿದ್ಯುತ್ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂದಾಯ ಸಹಾಯಕರನ್ನಾಗಿ ನೇಮಕಾತಿ ಮಾಡಿದ್ದರು. 

ಆದರೆ ನಂತರ ಬಂದ ಯಾವ ಸರ್ಕಾರಗಳೂ ಈ ವಿಶೇಷಚೇತನರ ನೇಮಕಾತಿಯನ್ನು ಕಾಯಂಗೊಳಿಸಲಿಲ್ಲ.  ಮತ್ತೆ 2018 ರಲ್ಲಿ ಕುಮಾರಣ್ಣ ಮುಖ್ಯಮಂತ್ರಿ ಆದಾಗ ಜನವರಿ 14, 2019 ರಂದು ಇವರೆಲ್ಲರ ನೇಮಕಾತಿಯನ್ನು ಕಾಯಂಗೊಳಿಸಿ‌ ನೇಮಕಾತಿ ಪತ್ರ ನೀಡಿದ್ದರು.

ಕುಮಾರಣ್ಣ ಮಾಡಿದ ಸಹಾಯಕ್ಕೆ ಇಂದಿಗೆ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಈ ಋಣವನ್ನು ತೀರಿಸಲು ವಿಶೇಷಚೇತನ ನೌಕರರೆಲ್ಲರೂ ಇಂದು (ಮಂಗಳವಾರ) ಕುಮಾರಸ್ವಾಮಿ ಮನೆಗೆ ಭೇಟಿ ಮಾಡಿ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದರು.

ಜತೆಗೆ ಉದ್ಯೋಗ ಕಾಯಂಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಆಗಮಿಸಿದ್ದ ವಿಶೇಷ ಚೇತನರು ಕುಮಾರಸ್ವಾಮಿ ಅವರಿಗೆ ಅಂದು ನೇಮಕಾತಿ ಕಾಯಂ ಪತ್ರ ಹಸ್ತಾಂತರದ ಸಂದರ್ಭದ ಚಿತ್ರಕ್ಕೆ ಫ್ರೇಮ್‌ ಹಾಕಿಸಿ ಧನ್ಯವಾದ ತಿಳಿಸಿದರು.