Asianet Suvarna News Asianet Suvarna News

Karnataka Assembly Session: ಸದನದಲ್ಲಿ RSS ಬಗ್ಗೆ ಘೋಷಣೆ: ಸ್ಪೀಕರ್‌ ಗರಂ

*  ರಾಜಕೀಯಕ್ಕೆ ಸಂಘದ ಹೆಸರು ಬಳಸಬೇಡಿ: ಕಾಗೇರಿ
*  ಸಚಿವ ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದ ಕಾಂಗ್ರಸ್ಸಿಗರು
*  ಆರ್‌ಎಸ್‌ಎಸ್‌ ಒಂದು ರಾಷ್ಟ್ರೀಯ ಸಂಘಟನೆ, ಹಿಂದೂಗಳನ್ನು ಒಗ್ಗೂಡಿಸುವ ಕೆಲಸ ಮಾಡ್ತಿದೆ 

Speaker Vishweshwar Hegde Kageri Anger on Congress Leaders grg
Author
Bengaluru, First Published Feb 22, 2022, 12:50 PM IST

ಬೆಂಗಳೂರು(ಫೆ.22):  ಸಚಿವ ಕೆ.ಎಸ್‌.ಈಶ್ವರಪ್ಪ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಸದನದಲ್ಲಿ ಧರಣಿ ನಡೆಸುತ್ತಿರುವ ಕಾಂಗ್ರೆಸ್‌ ಸದಸ್ಯರು ಆರ್‌ಎಸ್‌ಎಸ್‌ ವಿರುದ್ಧ ಘೋಷಣೆ ಕೂಗಿದ್ದಕ್ಕೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri) ಗರಂ ಆದ ಪ್ರಸಂಗ ನಡೆಯಿತು.

ಸೋಮವಾರ ಸದನದಲ್ಲಿ ಕಾಂಗ್ರೆಸ್‌ ಸದಸ್ಯರ ಘೋಷಣೆಯ ನಡುವೆಯೇ ಪ್ರಶ್ನೋತ್ತರ ಅವಧಿ ನಡೆಸಿದ ಬಳಿಕ ವಿಧೇಯಕ ಅಂಗೀಕರಿಸಲಾಯಿತು. ಸದನ ನಡೆಸಲು ಅವಕಾಶ ನಡೆಸುವಂತೆ ಸಭಾಧ್ಯಕ್ಷರು ಎಷ್ಟೇ ಮನವಿ ಮಾಡಿದರೂ, ಕಾಂಗ್ರೆಸ್‌ ಸದಸ್ಯರು ಜಗ್ಗಲಿಲ್ಲ. ಸಚಿವ ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದರು. ಈ ನಡುವೆ ಆರ್‌ಎಸ್‌ಎಸ್‌ ವಿರುದ್ಧವೂ ಘೋಷಣೆ ಹಾಕಿದರು. ವಿಧೇಯಕ ಅಂಗೀಕಾರ ಬಳಿಕ ಆರ್‌ಎಸ್‌ಎಸ್‌ ವಿರುದ್ಧ ಘೋಷಣೆ ಹಾಕಿದಕ್ಕೆ ಸಭಾಧ್ಯಕ್ಷರು ಗರಂ ಆದರು.

ಡಿಕೆಶಿ, ಈಶ್ವರಪ್ಪ ಮಾತಿನ ಸಮರ: ನೀವೆಲ್ಲಾ ಸೀನಿಯರ್ಸಾ ಎಂದು ಸ್ಪೀಕರ್ ಬೇಸರ

ಆರ್‌ಎಸ್‌ಎಸ್‌(RSS) ಅನ್ನು ಸದನದಲ್ಲಿ ಚರ್ಚೆಗೆ ತರಬೇಡಿ. ಆರ್‌ಎಸ್‌ಎಸ್‌ ಹೆಸರು ಹೇಳಿ ಯಾಕೆ ಧಿಕ್ಕಾರ ಹಾಕುತ್ತೀರಾ? ಆರ್‌ಎಸ್‌ಎಸ್‌ ಒಂದು ರಾಷ್ಟ್ರೀಯ ಸಂಘಟನೆ. ಹಿಂದೂಗಳನ್ನು(Hindu) ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಧ್ವನಿಗೂಡಿಸಬೇಕೇ ಹೊರತು ವಿರುದ್ಧ ಘೋಷಣೆ ಹಾಕಬಾರದು. ರಾಜಕೀಯಕ್ಕೆ(Politics) ಆರ್‌ಎಸ್‌ಎಸ್‌ ಹೆಸರು ಬಳಸಬೇಡಿ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಮಾಧುಸ್ವಾಮಿ ಹೇಳಿಕೆಯಿಂದ ಸದನದಲ್ಲಿ ಕೋಲಾಹಲ

ಬೆಂಗಳೂರು: ಅಧಿವೇಶನ ನಡೆಸಲು ಅವಕಾಶ ಮಾಡಿಕೊಡದೇ ಕಾಂಗ್ರೆಸ್‌(Congress) ಸದಸ್ಯರು ಸಭಾಪತಿ ಮತ್ತು ಅವರ ಪೀಠಕ್ಕೆ ಅಗೌರವ ಸಲ್ಲಿಸುತ್ತಿದ್ದಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ(JC Madhuswamy) ಮಾತು ಸದನದಲ್ಲಿ(Session) ಕೆಲಕಾಲ ಕೋಲಾಹಲ ಸೃಷ್ಟಿಸಿತು.

ವಿಧಾನ ಪರಿಷತ್‌ನಲ್ಲಿ ಭೋಜನ ವಿರಾಮದ ಕಾಂಗ್ರೆಸ್‌ ಸದಸ್ಯರು ಪೀಠದ ಮುಂದೆ ಬಂದು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ ಅವರು, ಈಶ್ವರಪ್ಪ(KS Eshwarappa) ಅವರ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ(National Flag) ಅಪಮಾನ ಆಗುವಂತಹ ವಿಚಾರಗಳಿಲ್ಲ. ಯಾವುದೇ ಕಾರಣಕ್ಕೂ ಅವರ ವಿರುದ್ಧ ಕ್ರಮಕೈಗೊಳ್ಳುವುದಿಲ್ಲ ಎಂದು ಸರ್ಕಾರ(Government of Karnataka) ಸ್ಪಷ್ಟಪಡಿಸಿದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ರಾಜ್ಯವ್ಯಾಪಿ ಸ್ಥಳವಿದೆ. ಆರೋಪ ಸಾಬೀತು ಪಡಿಸಿದರೆ ಶಿಕ್ಷೆ ನೀಡಲು ನ್ಯಾಯಾಲಯವಿದೆ. ತಮ್ಮ ಹೋರಾಟಕ್ಕೆ ಸದನವನ್ನು ಬಳಸಿಕೊಳ್ಳುವುದು ಸರಿ ಅಲ್ಲ ಎಂದರು.

ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿ ಸಾರ್ವಜನಿಕ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡದೇ ಅಧಿವೇಶನದ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದು ಸಭಾಧ್ಯಕ್ಷರಿಗೆ ಮತ್ತು ಅವರ ಪೀಠಕ್ಕೆ ಮಾಡುತ್ತಿರುವ ಅಪಮಾನ ಎಂದರು, ಇದಕ್ಕೆ ಬಿಜೆಪಿ ಸದಸ್ಯರಾದ ಭಾರತಿ ಶೆಟ್ಟಿ, ಆಯನೂರು ಮಂಜುನಾಥ್‌ ದನಿಗೂಡಿಸಿದರು.

ಈ ಮಾತಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಪ್ರಕಾಶ ರಾಥೋಡ್‌ ಮತ್ತು ಸಲೀಂ ಅಹಮ್ಮದ್‌, ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಪ್ರಕರಣವನ್ನು ಸದನದಲ್ಲಿ ಚರ್ಚಿಸದೆ ಮತ್ತೆಲ್ಲಿ ಚರ್ಚಿಸಬೇಕು? ನಾವು ಕೇವಲ ಈಶ್ವರಪ್ಪ ವಜಾಕ್ಕೆ ಒತ್ತಾಯಿಸುತ್ತಿದೇವೆ ಹೊರತು ಸಭಾತಿಗಳನ್ನು ವಿರೋಧಿಸುತ್ತಿಲ್ಲ. ಸಚಿವರ ಮಾತನ್ನು ಒಪ್ಪುವುದಿಲ್ಲ. ಪ್ರತಿಭಟನೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದರು.

Kageri Emotional ಸುದ್ದಿಗೊಷ್ಠಿಯಲ್ಲಿ ಕಣ್ಣೀರಿಟ್ಟ ಸ್ಪೀಕರ್ ಕಾಗೇರಿ, ಕಾರಣ ಏನು?

‘ಸಂವಿಧಾನದ(Constitution) ಬಗ್ಗೆ ಗೌರವ ಇದ್ದರೆ ಸದನದ ಸಮಯ ಹಾಳು ಮಾಡಬಾರದು. ಸಭಾಪತಿಗಳಿಗೆ ಗೌರವ ನೀಡಬೇಕು ಎಂಬ ಸಾಮಾನ್ಯ ಜ್ಞಾನ ಇಲ್ಲ ಕಾಂಗ್ರೆಸ್‌ ಸದಸ್ಯರಿಗಿಲ್ಲ’ ಎಂದು ಸಚಿವ ಮಾಧುಸ್ವಾಮಿ ಕಿಡಿಕಾರಿದರು. ಇದಕ್ಕೆ ಪ್ರತಿಪಕ್ಷದಿಂದ ಅಪಮಾನ ಆಗಿದೆಯೇ ಎಂಬುದನ್ನು ಸಭಾಪತಿಗಳೇ ಸ್ಪಷ್ಟಪಡಿಸಲಿ’ ಎಂದು ವಿರೋಧಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌(BK Hariprasad) ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti), ‘ನಾನು ಎಲ್ಲಿಯೂ ಅಪಮಾನ ಮಾಡಿದ್ದೀರಿ ಎಂದು ಹೇಳಿಲ್ಲ. ನಿಲುವಳಿ ತಿರಸ್ಕೃತಗೊಂಡ ನಂತರವೂ ತಿಳಿಯಾದ ವಾತಾವರಣ ಇರಲಿ ಎಂಬ ಕಾರಣಕ್ಕೆ ಚರ್ಚೆಗೆ ಅವಕಾಶ ಕೊಟ್ಟಿದ್ದೆ ಅಷ್ಟೇ’ ಎಂದರು. ನಂತರವೂ ಆಡಳಿತಪಕ್ಷ ಮತ್ತು ಪ್ರತಿಪಕ್ಷದ ನಡುವೆ ವಾಗ್ವಾದಗಳು ಮತ್ತು ಪರಸ್ಪರ ಘೋಷಣೆಗಳು ನಡೆದವು.
 

Follow Us:
Download App:
  • android
  • ios