ಸದನದಲ್ಲಿ ರೇಪ್ ಒಳಗಾದವರ ಉದಾಹರಣೆ ನೀಡಿದ್ದ ಸ್ಫೀಕರ್ ರಮೇಶ್ ಕುಮಾರ್ ಕ್ಷಮೆಯಾಚಿಸಿದ್ದಾರೆ.
ಬೆಂಗಳೂರು, (ಫೆ.13): ವಿಧಾನಸಭೆ ಕಲಾಪದ ವೇಳೆ ರೇಪ್ ಒಳಗಾದವರ ಉದಾಹರಣೆ ನೀಡಿದ್ದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅವರು ಕ್ಷಮೆಯಾಚಿಸಿದ್ದಾರೆ.
ಆಪರೇಷನ್ ಆಡಿಯೋ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಜಗದೀಶ್ ಶೆಟ್ಟರ್ ಮಾತನಾಡುತ್ತ, ಸ್ಪೀಕರ್ ಅವರನ್ನು ಸಿಎಂ ಬೀದಿಗೆ ತಂದಿದ್ದಾರೆಂದು ಆರೋಪಿಸಿದ್ದರು.
‘ಆಡಿಯೋ ಬಾಂಬ್’ ಪ್ರಕರಣ: ಸದನ ನಾಯಕರ ಸಂಧಾನ ಸಭೆ ವಿಫಲ!
ಆಗ ಸ್ಪೀಕರ್, ರೇಪ್ ಆದವರು ದೂರು ಕೊಟ್ಟ ನಂತರ ಕೋರ್ಟ್ಗೆ ಹೋದರೆ ವಕೀಲರು ‘ಎಲ್ಲಿ ಆಯಿತು? ಹೇಗೆಲ್ಲ ಆಯಿತು? ಎಷ್ಟು ಹೊತ್ತಿಗೆ ಆಯಿತು?’ ಎಂದು ಪದೇಪದೆ ಕೇಳುತ್ತಾರೆ. ಅದೇ ರೀತಿ ನೀವೆಲ್ಲ ನನ್ನ ರೇಪ್ ಮಾಡುತ್ತಿದ್ದೀರಿ.
ಒಬ್ಬ ವ್ಯಕ್ತಿ ಮೇಲೆ 1 ಬಾರಿ ರೇಪ್ ಆಗಿದ್ದರೆ, ಕೋರ್ಟ್ನಲ್ಲಿ 100 ಬಾರಿ ಆದ ಅನುಭವ ಆಗುತ್ತದೆ. ನನ್ನ ಸ್ಥಿತಿಯೂ ಅದೇ ಆಗಿದೆ’ ಎಂದು ರಮೇಶ್ ಕುಮಾರ್ ಅವರು ಕಳವಳ ವ್ಯಕ್ತಪಡಿಸಿದ್ದರು.
ಸ್ಪೀಕರ್ ರೇಪ್ ಪದ ಬಳಸಿದ್ದನ್ನು ಬಿಜೆಪಿ ನಾಯಕಿ ತಾರಾ, ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವು ಅಸಮಾಧಾನ ವ್ಯಕ್ತಪಡಿಸಿದರು.
ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ರೇಪ್ ಪದ ಬಳಕೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಸ್ಪೀಕರ್ ಸದನದಲ್ಲಿ ಕ್ಷಮೆ ಯಾಚಿಸಿದರು.
